ನಳಿನ ಡಿ ಇವರ ವಚನವಾಣಿ : ಭಾಗ 1

(www.vknews.com) :

1. ಈ ಕಡು ಕೆಟ್ಟ ಜಗದಲಿ,
ಸಜ್ಜನರು ನೆಲೆಗಾಣದೆ ನಲುಗಿಹರು,
ನೆಲೆಗೊಳಿಸಬಲ್ಲ ನೀನೇ ನಿಂದು ನಗುತಿರಲು,
ಮತ್ಯಾರಿಗೆ ಬೇಡುವುದಯ್ಯಾ ಕಾಡುಮಲ್ಲಿಕಾರ್ಜುನ

2. ತನು ನನ್ನದು ಮನ ನನ್ನದು
ರೋಗ ರುಜಿನಕ್ಕೆದರಿ
ಷಡ್ರಸಗಳಿಗೆ ಗರಿಗೆದರಿ
ದೇಹಕೆ ಕೊಬ್ಬಿನ ರಸ ತುಂಬಿ
ಮನಕೆ ಮೋಹದ ಮಾಯಾಮೃತ ತುಂಬಿ,
ಇದೀಗ ಹಲುಬುತಿರುವೆ
ದುಃಖಕ್ಕೆದರಿ,
ಸರ್ವ ದುಃಖ ನಿವಾರಕ ಕಾಡುಮಲ್ಲಿಕಾರ್ಜುನನೊಳು ನೆಲೆನಿಂತು.

3. ಅರಿವಿಗೆÀ ಲೋಕದ ಡೌಲಿನ ಅಗ್ನಿ ತಾಕಿ,
ಸುಖ ಭೋಗಗಳು ಬೆಳಗಿ ನಿಂದವೋ/
ಕನಿಕರ ಪಡದೆ ತಂತಾನೆ ಭುಜತಟ್ಟಿ,
ಕಾಮದಗ್ನಿಯ ಕೋಲಾಹಲಕೆ ಮೈಮರೆತೆನಯ್ಯಾ,
ಮೂರು ದಿನದ ನಾಟಕ ಹಿನ್ನಡೆಯಾಯಿತು,
ಮುನ್ನಡೆಗಾಗಿ ನಾ ಬಂದು ಸೇರಿದೆ
ಕಾಡುಮಲ್ಲಿಕಾರ್ಜುನ ನಿನ್ನ ಚರಣಕೆ.

4. ಆಸೆಗಳೇ ಆಪತ್ತು, ಮೋಹವೇ ವಿಪತ್ತು,
ಅಹಂಕಾರವೇ ಸರ್ವದುಃಖಗಳಿಗೂ ಸೇತುವೆ,
ಬಹುದುಃಖಿ ನಾನಯ್ಯಾ,
ಕಡುಕಷ್ಟದಿಂದಲಿ ಮಾಯಾಜಾಲದಿ ಹೊರಬಂದು,
ನಿರಂಹಕಾರದಿ ಎನ್ನ ಕಾಡುಮಲ್ಲಿಕಾರ್ಜುನನೆದುರು ನಿರ್ವಿಕಲ್ಪದಿ ನಿಂದೆನಯ್ಯಾ.

5. ಲೋಕದ ವ್ಯಾಪಾರಕೆ ಸಿಲುಕಿ,
ಓರಗೆಯ ವಣಿಕರ ಕಂಡು,
ಅನ್ಯರ ಜರಿದು, ಲಾಭಕ್ಕಾಗಿ
ಮೋಸದಿ ಗಳಿಸಹೋಗಿ,
ತಾನೇ ತಾನಾಗಿ ಮೋಸ ಹೋದೆನಯ್ಯಾ.
ನ್ಯಾಯವ ಅರಸಿ ನಿಂದೆಯಲಿ ಬೆಂದು,
ಸತ್ಯದೇವ ಕಾಡುಮಲ್ಲಿಕಾರ್ಜುನನ
ಸತತ ಬೇಡಿಕೊಂಬೆನಯ್ಯಾ.

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...