ನಳಿನ ಡಿ ಇವರ ವಚನವಾಣಿ : ಭಾಗ 3

(www.vknews.com)

1. ಮೋಹದ ಬಲೆಯಲಿ ಸೆರೆಸಿಕ್ಕಿ,
ಮೋದದಿ ಮೈಮರೆಯುವ ಮರ್ಕಟ ಮನಸ್ಸು,
ಮಾಯಾಂಗ ಕಾಡುಮಲ್ಲಿಕಾರ್ಜುನ ನೀ ಎನ್ನೊಳು
ಅಖಂಡವಾಗಿರಲು,
ಬ್ರಹ್ಮಾಂಡದ ಬಡ ಮೋಹ ಬರಲುಂಟೇನು
ಉಮಾಮಹೇಶ್ವರ.

2. ಮೋಹ ಎನ್ನ ದಹಿಸಿತೋ?
ಇಲ್ಲಾ.. ನಾನೇ ಮೋಹವ ದಹಿಸಿ ನಿಂದೆನೋ
ಅಂಗದ ಸಂಗ ರಂಗುರಂಗಾಗಿ
ಕಾಲಹರಣ ಮಾಡುವುದ ಕಂಡು
ನೀನೇ ಎಲ್ಲದರ ಪೆÇರೆ ಕಳಚಿ ಕರೆದೆಯೋ
ಸೂತ್ರಧಾರಿ ಕಾಡುಮಲ್ಲಿಕಾರ್ಜುನ.

3. ಹಗ್ಗವ ಕಂಡು ಹಾವೆಂದು ಹೌಹಾರಿದೆ,
ವಿಷವನಿಕ್ಕುವವರ ಅಕ್ಕರೆ ಕಂಡು
ಬಂಧುಗಳೆಂದು ಬೆಸೆದೆ,
ಕಟ್ಟಿಟ್ಟ ಭುತ್ತಿಯಂತೆ ಕಳೆದುಹೋದರು,
ಅವರವರ ಪಾತ್ರಗಳ ಪೂರೈಸಿ,
ದಳ್ಳುರಿ ಹೊತ್ತಿಸಿ.
ನಿರ್ಗುಣ ಕಾಡುಮಲ್ಲಿಕಾರ್ಜುನ
ನನ್ನೊಡನಿರಲು,
ನಿರ್ವಿಕಲ್ಪಗಳು ಕಾಪಾಡಿದವೋ.

4. ನನ್ನ ಭೋಗಿಪರೇ,
ನಾನೊಂದು ಭೋಗದ ಉಪಕರಣವೇ,
ಎನಿಸಿ ನೊಂದಿರಲು,
ಭಾಗ್ಯದ ಬಾಗಿಲು ತೆರೆದು
ನಿರ್ಬೀಡೆಯಲಿ ಬದುಕಿತ್ತವ
ನನ್ನ ಕಾಡುಮಲ್ಲಿಕಾರ್ಜುನನಲ್ಲೇ
ಸದಾ ಅನುರಕ್ತೆ ನಾ.

5. ಅಕ್ಕರೆಯಲಿ ನಕ್ಕರೆ,
ಪ್ರಲೋಬನೆ ಎಂಬರೋ,
ಅನಾರೋಗ್ಯದಲಿ ಅತ್ತರೆ,
ನಟನೆ ಎಂಬರೋ,
ಅನ್ನವ ತಿನ್ನಲು ಹೋದರೆ,
ದುಡಿದು ತಾ ಎಂಬರೋ,
ಎದೆಹಾಲಿವ ಹಸುಳೆಯೊಡಲಿಗೂ
ಅರೆಪಾವು ಹಾಲುಕೊಡದೆ
ದೂಡಿ ಮೆರೆದರೋ.. ಶಿವ ಶಿವಾ..
ಜೀವ ನಿನ್ನ ನಂಬಿರಲು
ಸಾವುಂಟೇ? ಸೋಲುಂಟೇ?
ಕಾಡುಮಲ್ಲಿಕಾರ್ಜುನ.

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...