ನಳಿನ ಡಿ ಇವರ ವಚನವಾಣಿ : ಭಾಗ 4

(www.vknews.in) :

1. ಧರ್ಮದ ದಾರಿಗಾಗಿ ದಾಂಪತ್ಯ
ಸುಖ ದುಃಖದ ಸಹಬಾಳ್ವೆಗೆ
ಗಂಡ-ಹೆಂಡಿರ ಸಾಂಗತ್ಯ,
ನಿಮಿತ್ತ ಮಾತ್ರದಿ ನಡೆದಾಗಲೇ ಸುಭಿಕ್ಷ
ಇಲ್ಲದಿರೆ ಬಿಡದಿನ್ನು ಪರಮಮಾಯೆ,
ಕಾಡುಮಲ್ಲಿಕಾರ್ಜುನ.

2. ನಾನನ್ನ ಮರೆತು,
ಕಾಮದಲಿ ಮೈಮರೆತು
ಸುಖಲೋಲುಪತೆಯ ಕೊಂಡಾಡಿರಲು,
ನಸುನಕ್ಕ ಕಾಡುಮಲ್ಲಿಕಾರ್ಜುನ
ಜರ್ರನೆ ಜಾರಿಸಿದ ಸರಸವಾ ವಿರಸಕ್ಕೆ.
ಬೇಗುದಿಯಲಿ ಬಾಡಿಸಿ,
ಎಲ್ಲರೊಳಗಣ ಸತ್ಯದರ್ಶನಕ್ಕೆಳಿಸಿದ.
ನಿರ್ವಿಕಲ್ಪ ನಾನಿನ್ನು ನಿನ್ನನಂತತೆಯೊಳಗೆ.

3. ಒಳಗೆ ಲೋಭದ ಲೋಭದ ಲೆಕ್ಕಾಚಾರ,
ಹೊರಗೆ ಅತಿಥಿ ಸತ್ಕಾರ,
ಬಾಯಲ್ಲಿ ಬನ್ನಿರಯ್ಯಾ, ಇದೋ ಕೊಂಡೊಯ್ಯಿರಿ ಎಂಬರು,
ಮನವ ಹಿಡಿ ಶಾಪದಲಿ ಹಿಂಡಿಕೊಂಬರಯ್ಯಾ.
ಒಳಹೊರಗಿನ ಬಾಧೆಗಳ ಜನರ ನಡುವೆ,
ನಿನ್ನ ನಿಜ ನುಡಿ ಆಲಿಸುತ್ತಾ ನಿರ್ಲಿಪ್ತ ನಾನಯ್ಯಾ
ಕಾಡುಮಲ್ಲಿಕಾರ್ಜುನ.

4. ಆಸೆ ಆರು ದಿನÀದಲಿ ಅಳಿಸಿತ್ತು,
ಮೋಹ ಮೂರು ದಿನದಲಿ ಮಾಯವಾಗಿತ್ತು.
ಅಂತರಾತ್ಮದಲಿ ನೀನಿರಲು,
ನಿನ್ನ ಕಾಣುವ ಆಸೆ ನೂರ್ಮಡಿಸಿದೆ,
ನಿನ್ನ ಸೇರುವ ಮೋಹ ನನ್ನಾವರಿಸಿದೆ.
ಎತ್ತಹೋದರೂ ನಿನ್ನ ಸ್ಮರಣೆಯ ಸುತ್ತಾ ಸುತ್ತುವುದು,
ಕರುಣಿಸೋ ನಿನ್ನ ಚರಣ ಸದಾ ಕಾಣುವ
ಸದಾವಕಾಶವ ಕಾಡುಮಲ್ಲಿಕಾರ್ಜುನ.

5. ಹೆಣ್ಣು-ಗಂಡೆಂಬ ಬೇದವ ನಿನಿಟ್ಟೆ,
ಜಾತಿ-ಧರ್ಮದ ಮೇಲು-ಕೀಳು
ಬಡವ-ಬಲ್ಲಿದರೆಂದು ಒಬ್ಬರಲೊಬ್ಬರು
ಧ್ವೇಷ ಭಿತ್ತಿ ಬೆಳೆದರಯ್ಯಾ,
ನಿನ್ನಿಂದಲೇ ಮರಳಿ
ಮನಾವಧರ್ಮ ಸ್ಥಾಪನೆಯಾಗಲಿ,
ಕುನೀತಿ ಅಳಿದು, ಸುನೀತಿ ಬೆಳೆಸುಬಾ
ಕಾಲ ಪುರುಷ ಕಾಡುಮಲ್ಲಿಕಾರ್ಜುನ.

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...