ಲಾಕ್ ಡೌನ್ ನಿಂದ ಸಂಘಟನಾ ಕಾರ್ಯಾಚರಣೆಗೆ ತೊಡಕಾಗದಿರಲಿ: ZOOM ಅಪ್ಲಿಕೇಶನ್ ಮೂಲಕ ಓನ್ಲೈನ್ ಮೀಟಿಂಗ್ ನಡೆಸಿ

ಉಪಯುಕ್ತ ಮಾಹಿತಿ(ವಿಶ್ವಕನ್ನಡಿಗ ನ್ಯೂಸ್): ಕೊರೋನ ಮಹಾಮಾರಿ ರೋಗದ ನಿಯಂತ್ರಣಕ್ಕಾಗಿ ಸರಕಾರ ಲಾಕ್ ಡೌನ್ ಘೋಷಿಸಿರುವುದರಿಂದ ಸಂಘಟನಾ ಕಾರ್ಯಾಚರಣೆಗಳು, ಮೀಟಿಂಗ್ ಗಳು, ಸ್ವಲಾತ್ ಮಜ್ಲಿಸ್ ಗಳು, ಜುಮಾ ಜಮಾಅತ್ ಗಳು ಸ್ಥಗಿತಗೊಂಡಿದೆಯಲ್ಲವೇ. ಆದರೆ, ಈಗ ZOOM ಹೆಸರಿನ ಒಂದು ಎಪ್ಲಿಕೇಶನ್ ನಿಂದ ಮೀಟಿಂಗ್ ಸಮಯ ನಿಗದಿಪಡಿಸಿ ಸಾಧಾರಣ ಮೀಟಿಂಗ್ ನಡೆಸುವಂತೆ ನಡೆಸಬಹುದು.

ಕುಟುಂಬಗಳು ಪರಸ್ಪರ ಎಲ್ಲರೂ ಒಂದೇ ಸಮಯ ಮಾತನಾಡಬಹುದು. ಇದು ಎಂಡ್ರೋಯಿಡ್, IOS ಹ್ಯಾಂಡ್ ಸೆಟ್ ಮತ್ತು ಡೆಸ್ಕ್ ಟಾಪ್ ಗಳಲ್ಲಿ ಲಭ್ಯವಿದೆ. 40 ನಿಮಿಷಗಳ ಕಾಲ ಮೀಟಿಂಗ್ ನಡೆಸಬಹುದು. ಇದರ ಟುಟೋರಿಯಲ್ ಲಿಂಕ್ ಮತ್ತು ವೀಡಿಯೋ ಈ ಲೇಖನದ ಕೊನೆಯಲ್ಲಿ ಕೊಡುತ್ತೇನೆ.

Zoom ಎಪ್ಲಿಕೇಶನನ್ನು ಎಂಡ್ರೋಯಿಡ್ ಫೋನ್ ಇರುವವರು ಪ್ಲೇ ಸ್ಟೋರ್ ನಿಂದಲೂ ಐಫೋನ್ ಉಪಯೋಗಿಸುವವರು ಏಪ್ ಸ್ಟೋರ್ ನಿಂದಲೂ ಇನ್ಸ್ಟಾಲ್ ಮಾಡಿಕೊಳ್ಳಬಹುದು. Zoom cloud meetings ಎಂದು ಸರ್ಚ್ ಮಾಡಿದರೆ ಸಾಕು.

ನಿಮ್ಮ  ಈ ಮೇಲ್ ಟೈಪ್ ಮಾಡಿ ಫಸ್ಟ್ ನೇಮ್ ಮತ್ತು ಲಾಸ್ಟ್ ನೇಮ್ ಟೈಪ್ ಮಾಡಿ terms of service □ ಟಿಕ್ ಮಾಡಿ Next ಕೊಡಿ.

ನಂತರ ಮೀಟಿಂಗ್ ಗೆ ಇರಬೇಕಾದವರಿಗೆ ಮೀಟಿಂಗ್ ಐಡಿ ಅಥವಾ ಲಿಂಕ್ ಕಳುಹಿಸಿ ಜೋಯಿನ್ ಮಾಡಿಸಬಹುದು. ಒಂದು ಡಿಸ್ಪ್ಪೆಯಲ್ಲಿ ನಾಲ್ಕು ಜನರನ್ನು ನೋಡಬಹುದು. Swipe ಮಾಡುತ್ತಾ ಹೋದರೆ ಎಲ್ಲರನ್ನೂ ಕಾಣಬಹುದು.

(ವೀಡಿಯೋ)

ವಿಷಯ ಸೂಚನೆ:
ಈ ಎಪ್ಲಿಕೇಶನ್ ಮೀಟಿಂಗ್ ಸಮಯದಲ್ಲಿ ಮಾತ್ರ ತೆರೆಯಬಹುದು. ಯಾರು ಇದರ ಐಡಿ ಕಳುಹಿಸಿ ಮೀಟಿಂಗ್ ರೂಂ ಓಪನ್ ಮಾಡಿ ಇಡುತ್ತಾರೋ ಆ ಸಮಯದಲ್ಲಿ ಮಾತ್ರ ಜೋಯಿನ್ ಆಗಬಹುದು. ಇಮೋ, ಟೋಟೋಕ್ ಗ್ರೂಪ್ ಕಾಲ್ ಮೀಟಿಂಗ್ ಗಿಂತ zoom ಉತ್ತಮವಾಗಿದೆ.

✍️Nizzu4ever👁
ಉರುವಾಲು ಪದವು
[email protected]

[highlight bgcolor=”#eeee22″ txtcolor=”#dd3333″][/highlight]

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...