ನಳಿನ ಡಿ ಇವರ ವಚನವಾಣಿ : ಭಾಗ 6

(www.vknews.com) :

1. ಅಕ್ಕರೆಯ ಅಮ್ಮನೆಲ್ಲಿ, ಸವತಿ ಮತ್ಸರದಿ ಕುದಿವ
ತಾಟಗಿತ್ತಿ ಅತ್ತೆಯೆಲ್ಲಿ,
ಇದ್ದೊಬ್ಬ ಮಗನಿಗೆ ಕದ್ದು ಮರುಮದುವೆಗೆ ನೋಡಿ,
ದುಡ್ಡಿನ ಸಮಾಧಿ ಹೊಂದುವಳೇನು?
ಇಂತಿಪ್ಪ ಸೃಷ್ಠಿಯೂ ನಿನ್ನದೇ ಏನು
ಕಾಡುಮಲ್ಲಿಕಾರ್ಜುನ.

2. ಮಗಳೊಂದಿಗೆ ಕಾಮಕ್ಕೆಳೆಸುವ ಅಪ್ಪನೆಂತವನು?
ಅಂಗದ ತೃಷೆಗೆ ಮಗುವ ಮಂಗನ ಮಾಡಬಹುದು,
ತನ್ನೊಳಗಿನ ಕಾಡುಮಲ್ಲಿಕಾರ್ಜುನನ
ಅನಂತತೆಯೊಳಗೆ ಎಲ್ಲಾದರೂ
ಕಪಟಗೈದು ಮರೆಮಾಚಲುಂಟೇ?

3. ಅಪ್ಪಟ ಅಜ್ನಾನಿ ನಾನು,
ನನ್ನಂತರಂಗದಲಿ ಸದಾ ನಿನ್ನ
ಅಲಂಕರಿಸುವನ್ನಷ್ಟೇ ಬಲ್ಲೆನು.
ಹೊರಗಿನ ದೊಂಬರಾಟಕ್ಕಂಜಿ
ಒಳಗಿನ ನಿನ್ನ ಮರೆತುಬಿಟ್ಟೆನೆಂಬ ಭಯಕೆ
ನಿನ್ನನೇ ಸದಾ ಧ್ಯಾನಿಸುವೆನೋ
ಕಾಡುಮಲ್ಲಿಕಾರ್ಜುನ.

4. ಹಗಲು ದಿಗಿಲಾಗಿ,
ಇರುಳು ಪಲಾಯನವಾಗಿ,
ಕಾದಿದ್ದ ಪರಪೂಜೆಗೆ
ದೇಹ ಕೊರಡಾಗಿ,
ಹಲುಬಾಟವೆಲ್ಲಾ
ಹೊರದಾಗಿಸೋ ಕಾಡುಮಲ್ಲಿಕಾರ್ಜುನ.

5. ಅಪ್ಪಂತರಿಹರು ಲೋಕದಲಿ, ಅಪ್ಪಂತಾಗರು,
ಇಹ-ಪರ ಒಂದುಗಾಣಿಸಿ ಸೊಪ್ಪು ಉಪ್ಪಿಲ್ಲದೆ
ಗಂಜಿ ಕಾಸೂ ಬಿಡದೆ
ಲಪಟಾಯಿಸಿ ಹೋದರೋ ಕಾಡುಮಲ್ಲಿಕಾರ್ಜುನ.

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...