ಕುಷ್ಟಗಿ (www.vknews.com) : ಪುರಸಭೆ ಕುಷ್ಟಗಿ ವತಿಯಿಂದ ಆಯೋಜಿಸಲಾಗಿದ್ದ ಕೊರೊನ ಜಾಗೃತಿ ಜಾಥಕ್ಕೆ ಕುಷ್ಟಗಿ ಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ್ ತಳವಾರ್ ಚಾಲನೆ ನೀಡಿದರು ನಂತರ ಕೋರೋನಾ ನಿಯಂತ್ರಣ ಕಾರ್ಯಾದಲ್ಲಿ ಸೈನಿಕರಂತೆ ಕಾರ್ಯ ನಿರ್ವಹಿಸಿ, ಪಟ್ಟಣದ ನೈರ್ಮಲ್ಯ ಕಾಪಾಡುತ್ತಿರುವ ಪೌರಕಾರ್ಮಿಕರ ಯೋಗಕ್ಷೇಮವನ್ನ ವಿಚಾರಿಸಿ, ಪೌರಕಾರ್ಮಿಕರು ಸೇರಿದಂತೆ ಎಲ್ಲಾ ಸಿಬ್ಬಂದಿಗೂ ಸ್ಯಾನಿಟೈಸರ್, ಮಾಸ್ಕ್ ವಿತರಿಸಿ ಪೌರ ಕಾರ್ಮಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಪೌರಕಾರ್ಮಿಕರು ಮುನ್ನೆಚ್ಚರಿಕೆ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಕೋರೋನಾ ಜಾಗೃತ ಜಾಥಕ್ಕೆ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀ ಚಂದ್ರಶೇಖರ್ ತಳವಾರ್ ಚಾಲನೆ ನೀಡಿದರು ಈ ಸಂಧರ್ಭದಲ್ಲಿ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ರಪೀಕ್ ಅಹಮ್ಮದ್, ಪುರಸಭೆ ಮುಖ್ಯಾಧಿಕಾರಿ ಅಶೋಕ್ ಪಾಟೀಲ್, ಪ್ರಹ್ಲಾದ್ ಜೋಶಿ, ನ್ಯಾಯಾಂಗ ಇಲಾಖೆಯ ಶಿರೆಸ್ತೆದಾರ್ ಲೋಕೇಶ್.ಎನ್, ಸುನಿಲ್ ಮಠ್, ವೀರೇಶ್ ಬಡಿಗೇರ್, ಹಾಗೂ ಪೊಲೀಸ್ ಇಲಾಖೆ ಮತ್ತು ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಮರಿಗೌಡ ಬಾದರದಿನ್ನಿ