ಕುಷ್ಟಗಿ (www.vknews.com) : ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲಾ ಬಗೆಯಲ್ಲಿ ಕ್ರಮ ತೆಗೆದುಕೊಳ್ಳುತ್ತಿದೆ. ಸೋಂಕು ಲಕ್ಷಣ ಇರುವ ಜನರಿಗೆ ಮತ್ತು ರೋಗಿಗಳಿಗೆ ಸರ್ಕಾರವೇ ಚಿಕಿತ್ಸೆ ಒದಗಿಸುತ್ತಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರು ಮುಖ್ಯಮಂತ್ರಿಗಳು ಕೋವಿಡ್ 19 ವಿರುದ್ಧ ಹೋರಾಡಲು ದೇಣಿಗೆ ನೀಡಲು ಮುಖ್ಯ ಮಂತ್ರಿಗಳು ಮನವಿ ಮಾಡಿದ್ದರು.
ಮನವಿಗೆ ಓಗೊಟ್ಟು ಶ್ರೀಮತಿ ನೀಲವ್ವ ಸೋಮಪ್ಪ ಕುರಬರ ಶ್ರೀ ಫಕೀರಪ್ಪ ವಕೀಲರು, ಚಳಗೇರಿ ಪ್ರಭುರಾಜ, ಸೊಮಪ್ಪ ಕುರಬರ, ಹಾಗೂ ಯಲ್ಲಪ್ಪ ಪಕೀರಪ್ಪ ಚಳಗೇರಾ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ಕೋವಿಡ್-19 ನಿಧಿಗೆ 25.000/- ರೂ ಗಳ ಚೆಕ್ಕನ್ನು ಕುಷ್ಟಗಿ ತಹಶಿಲ್ದಾರರಾದ ಎಂ.ಸಿದ್ದೇಶ ರವರಿಗೆ ಚಕ್ ನೀಡಿದರು.
ವರದಿ: ಮರಿಗೌಡ ಬಾದರದಿನ್ನಿ