ಹೊಸನಗರದಲ್ಲಿ ಬಡ ಕುಟುಂಬಗಳಿಗೆ ಉಚಿತ ತರಕಾರಿ ವಿತರಣೆ ಮಾಡಿದ ಯಾಸೀರ್ ಸಹೋದರರು

ಹೊಸನಗರ (www.vknews.in) : ಹೊಸನಗರದಲ್ಲಿ ಬಡ ಕುಟುಂಬಗಳಿಗೆ ಸೆಲೆಕ್ಷನ್ ವೆಜಿಟೆಬಲ್ಸ್ ಅಂಗಡಿ ಮಾಲೀಕರಿಂದ ಉಚಿತ ತರಕಾರಿ ವಿತರಿಸಲಾಯಿತು. ಉಚಿತ ತರಕಾರಿ ವಿತರಿಸಿದ ಯಾಸೀರ್ ಹಾಗೂ ಸಿದ್ದಿಕ್ ಸಹೋದರರು.

ಸುಮಾರು ನೂರು ಬಡ ಕುಟುಂಬಗಳಿಗೆ ತಲಾ ರೂ ಮುನ್ನೂರು ಬೆಲೆಯ ವಿವಿಧ ಬಗೆಯ ತರಕಾರಿ ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಬದ್ರಿಯಾ ಜುಮ್ಮ ಮಸೀದಿ ಅಧ್ಯಕ್ಷರಾದ ಕೆ ಎ ಅಮಾನುಲ್ಲಾ ಉದ್ಘಾಟಿಸಿದರು. ಈ ವೇಳೆ ಪ.ಪಂ.ಮುಖ್ಯಾಧಿಕಾರಿ ಟಿ.ಬಾಲಚಂದ್ರಪ್ಪ, ಮಾಜಿ ಅಧ್ಯಕ್ಷ ಮಹಾಬಲ ರಾವ್, ಚಾಲುಕ್ಯ ಬಸವರಾಜ್ ಮೊದಲಾದವರು ಉಪಸ್ಥಿತರಿದ್ದರು.

ಕೋವಿಡ್ 19 ತಡೆಯ ಹಿನ್ನಲೆ ಇಡೀ ದೇಶವೇ‌ಲಾಕ್ ಡೌನ್ ಆಗಿರುವ ಕಾರಣ ಬಡ ಕುಟುಂಬಗಳು ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಯಾಸೀರ್ ಸಹೋದರರು ಜನತೆ ನೈತಿಕ ಬೆಂಬಲ ತುಂಬಿದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...