ಶ್ರೀ ಕರಿಬಸವೇಶ್ವರ ಚಾಮಲಾಪುರ ಮಠದಿಂದ ಬಡವರಿಗೆ ಹಾಗೂ ನಿರ್ಗತಿಕರಿಗೆ ಕೊಪ್ಪಳದಲ್ಲಿ ಊಟದ ವ್ಯವಸ್ಥೆ

ಕೊಪ್ಪಳ (www.vknews.com) : ಚಾಮಲಾಪುರ ಗ್ರಾಮದ ಶ್ರೀ ಕರಿಬಸವೇಶ್ವರ ಮಠದಿಂದ ದಿನಾಂಕ 15.4.2020 ರಿಂದ ಕೊಪ್ಪಳದ ನಗರದ ನಿರ್ಗತಿಕ ಜನರಿಗೆ ಹಾಗೂ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಸ್ವಯಂಪ್ರೇರಿತರಾಗಿ ಶ್ರೀಮಠಾಧೀಶರ ನೇತೃತ್ವದಲ್ಲಿ ಪ್ರತಿನಿತ್ಯ ಮಾಡಲಾಗುತ್ತಿದೆ.

ಮಠದ ಪೂಜ್ಯನೀಯ ಶ್ರೀ ಕರಿಬಸವೇಶ್ವರ ಸ್ವಾಮೀಜಿಗಳು ಮಾತನಾಡಿ ನಮ್ಮ ದೇಶದಲ್ಲಿ ಕೋರೋನಾ ಮಹಾಮಾರಿ ರೋಗವು ದೀನ ದಲಿತರ ಹಾಗೂ ಕೂಲಿ ಕಾರ್ಮಿಕರ, ದೈನಂದಿನ ಬದುಕಿಗೆ ಮಾರಕವಾಗಿ ದುಡಿದು ತಿನ್ನುವ ಕೈಗಳನ್ನು ಕಟ್ಟಿಹಾಕಿ ಬೇಡಿ ತಿನ್ನುವ ಊಹಿಸಲಿಕ್ಕೆ ಸಾಧ್ಯವಾಗದ ಪರಿಸ್ಥಿತಿಯನ್ನು ಕಂಡು ಮಠಾಧೀಶರ ಭಕ್ತವೃಂದಕ್ಕೆ ನೀಡಿದ ಒಂದು ಸಂದೇಶ ವೆ ಇವತ್ತು ಹಸಿದ ಹೊಟ್ಟೆಗೆ ಆಸರೆಯಾಗಿ ಯಶಸ್ವಿ ಮೂರನೇ ದಿನಕ್ಕೆ 550 ಪೊಟ್ಟಣಗಳನ್ನು ಕಡು ಬಡವರಿಗೆ ಇದ್ದಲ್ಲಿಯೇ ಹುಡುಕಾಡಿ ತಲುಪಿಸುತ್ತಿರುವ ಪರಿ, ಎಂಥವರ ಕಣ್ಣಲ್ಲಿ ನೀರು ತರಿಸುತ್ತದೆ.

ಪ್ರಸ್ತಾವನೆ ಮಠದಿಂದ ಬಂದ ತಕ್ಷಣ ಕಾರ್ಯೊನ್ಮುಖ ರಾದಂಥ ಕೊಪ್ಪಳದ ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ಜಿಲ್ಲೆಯ ಗವಿಮಠದವರು ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಿದ್ದಾರೆ.ನಿಮ್ಮ ಮಠದಿಂದ ರಾತ್ರಿಯ ಪ್ರಸಾದದ ವ್ಯವಸ್ಥೆಯನ್ನು ಮಾಡಲು ಸಾಧ್ಯವೇ ಎಂದಾಗ ಚಾಮಲಾಪುರದ ಮಠಾಧೀಶರು ಯಾವುದೇ ಸಂಕೋಚವಿಲ್ಲದೆ ಕೈಂಕರ್ಯ ದಲ್ಲಿ ತೊಡಗಿದರು.ಅಜ್ಜಾವರ ಒಂದು ಸಂದೇಶ ಭಕ್ತರು ಸಮರೋಪಾದಿಯಲ್ಲಿ ದಾನಿಗಳಾದರು.

ಐದು ಕ್ವಿಂಟಾಲ್ ಅಕ್ಕಿಯನ್ನು ಒಬ್ಬರು ಕೊಟ್ಟರೆ ತಲುಪಿಸುವ ವಾಹನದ ಹೊಣೆ ಮತ್ತೊಬ್ಬರು ಹೀಗೆ ಏನಾದರೂ ಸೇವೆಯನ್ನು ನೀಡಲೇಬೇಕೆಂದು ಬಂದ ಭಕ್ತರಿಂದ ಸೇವೆಯನ್ನು ಐದು ದಿನದಿಂದ ಹತ್ತು ದಿನಗಳವರೆಗೆ ಮುಂದುವರೆಸಲು ಕೋರಿಕೆ ಬಂದು ಹಂಪಾದೇವನಹಳ್ಳಿಯ ಭಕ್ತದ್ವಯರು ಒಂದೇ ಬಾರಿಗೆ 11000/-ರೂಪಾಯಿಗಳ ನಾನು ಸಹಾಯ ಮಾಡಿದಾಗ ನಮ್ಮ ಭಾರತೀಯ ಪರಂಪರೆಯ ಶ್ರೇಷ್ಠ ತೆ ನಮ್ಮ ಧರ್ಮದ ಆಳ ಅವುಗಳ ಸಮಾಜ ಮುಖಿ ತುಡಿತ, ಅವಶ್ಯಕತೆ ಇರುವಾಗ ಸಿಡಿದೇಳುವ ವಾಯುಪುತ್ರನಂತೆ ಎಂಬುದು ಅಕ್ಷರಶಃ ನಿಜ

ದಯವಿಟ್ಟು ಶಾಂತತೆ ಮತ್ತು ಸುವ್ಯವಸ್ಥೆ ಯನ್ನು ಕಾಪಾಡುವಂತೆ ಭಕ್ತರಲ್ಲಿ ಸೂಚಿಸಿದೆ ಅಜ್ಜನವರು ತಾವೇ ತಮ್ಮ ಕೈಯಾರೆ ಪ್ರಸಾದವನ್ನು ನೀಡಿ ಸರಳತೆ ಹಾಗೂ ಮಾನವೀಯತೆಯೇ ಧರ್ಮ ಎಂದು ಸಾರಿದ್ದಾರೆ.

ದಯವೇ ಧರ್ಮದ ಮೂಲ ವಯ್ಯ ಎಂಬಂತೆ ಪ್ರತಿದಿನ ಊಟದ ವ್ಯವಸ್ಥೆಗೆ ಸೇವೆಯನ್ನು ಮಾಡಿರುವಂತಹ ಎಲ್ಲಾ ಭಕ್ತವೃಂದಕ್ಕೆ ಪವಾಡ ಪುರುಷ ಅಜ್ಜಯ್ಯನ ಅಶಿರ್ವಾದ ಸದಾಇರಲಿ. ಶ್ರೀ ಕರಿಬಸವೇಶ್ವರ ಮಠದಿಂದ ಇಂತಹ ಸಮಾಜ ಮುಖಿ ಕಾರ್ಯಗಳಿಗೆ ತಾವೇ ಮುಂಚೂಣಿಯಲ್ಲಿ ನಿಂತು ಸದಾ ಬೆಂಬಲ ನೀಡುವ ಭಕ್ತರಿಗೆ ಅಜ್ಜಯ್ಯನವರು ಅನ್ನದಾತೋ ಸುಖೀಭವ ಎಂದು ಹಾರೈಸಿ ತಾವೊಂದು ಮಾಧ್ಯಮ ಅವಧೂತರ ಅಷ್ಟೆ ಎಲ್ಲಾ ಆ ಕರೀಬಸವೇಶ್ವರನ ಮಹಿಮೆ ಎಂದು ಹೇಳಿದ್ದು, ತಮ್ಮ ದಯೆಯ ಗುಣದಿಂದಲೆ ಮನೆಮಾತಾಗಿದ್ದಾರೆ. ಪ್ರತಿ ದಿನ ರಾತ್ರಿಯ ಆಹಾರ ವಿತರಣೆ ಚಮಾಲಾಪೂರ ಗ್ರಾಮ ದಿಂದ ಸುಮಾರು 15 ಕಿಲೋಮೀಟರ್ ದೂರದಿಂದ ತಂದು ನಮ್ಮ ಕೊಪ್ಫಳದ ಬಡವರ್ಗದ ಜನರಿಗೆ ಮತ್ತು ಆಸ್ಪತ್ರೆಯಲ್ಲಿ ಇರುವಂತಹ ಬಡ ಅನಾರೋಗ್ಯ ಪೀಡಿತರಿಗೆ ನಮ್ಮ ಮಠದಿಂದ ಎಲ್ಲ ಭಕ್ತರು ಸೇರಿ ಸೇವೆಯನ್ನು ಅಮಿಕೊಂಡಿದೆವಿ.

ಹಾಗೂ ವಿನಾಯಕ ಹೆಗಡೆ ಅವರು ಮಾತನಾಡಿ ಕೊರೊನ ಮುಕ್ತ ದೇಶಕ್ಕಾಗಿ ಹೋರಾಡೋಣ ನಾವು ಎಲ್ಲಾ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದೀವೆ, ಹಾಗೂ ಸಾಮಾನ್ಯ ಜನರಿಗೆ ಅರಿವೂ ಮೂಡಿಸುವ ಸಲುವಾಗಿ ಈ ಕಾರ್ಯವನ್ನು ಕೈಗೊಂಡಿದ್ದು
ಆಹಾರ ವಿತರಣೆ ಸಮಯದಲ್ಲಿ ಚಾಮಲಾಪೂರ ಗ್ರಾಮದ ಹಿರಿಯರು ಅದಂತಹ ರಾಮನ ಗೌಡ ದಳಪತಿ, ಬೆಟ್ಟದಪ್ಪ ಯಲಮಗೇರಿ, ಗ್ರಾಮದ ಹಿರಿಯರು ಭಾಗವಹಿಸಿದರು.

ಸನಾತನ ಧರ್ಮದಲ್ಲಿ ತಿಳಿಸಿದಂತೆ ಧರ್ಮೋರಕ್ಷತಿ ರಕ್ಷಿತಾ ಎಂಬಂತೆ ನಾವು ಇಂತಹ ಉದಾತ್ತ ವಿಚಾರಗಳು ಚಿಂತನೆಗಳು ಇರುವ ಮಠಗಳನ್ನು ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...