(www.vknews.com) : ಅಮ್ಮೆಂಬಳ ಹೆಲ್ಪ್ ಲೈನ್ ವತಿಯಿಂದ ನಿನ್ನೆ ಅಮ್ಮೆಂಬಳ ಜಮಾಅತ್ ಗೊಳಪಟ್ಟ 53 ಕುಟುಂಬಗಳಿಗೆ ಸರಿ ಸುಮಾರು 2 ಲಕ್ಷದ 25 ಸಾವಿರ (ಎರಡು ಲಕ್ಷದ ಇಪ್ಪತೈದು ಸಾವಿರ ಮೊತ್ತದಲ್ಲಿ) ರಂಝಾನ್ ಕಿಟ್ ವಿತರಿಸಲಾಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಅಮ್ಮೆಂಬಳ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷರು ಹಾಗೂ ಅಮ್ಮೆಂಬಳ ಹೆಲ್ಪ್ ಲೈನ್ ಸಂಚಾಲಕರು ಆದ ಉಬೈದ್ ಬಿ.ಎಚ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಅಮ್ಮೆಂಬಳ ಹೆಲ್ಪ್ ಲೈನ್ ಸದಸ್ಯರಾದ ಜವಾದ್ ಸ್ವಾಗತ ಭಾಷಣ ಮಾಡಿದರು. ಪ್ರಸ್ತುತ ಸಮಾವೇಶದಲ್ಲಿ ಅಮ್ಮೆಂಬಳ ಹೆಲ್ಪ್ ಲೈನ್ ಸಂಚಾಲಕರಾದ MSA ಸಿರಾಜುದ್ದೀನ್ ಅಮ್ಮೆಂಬಳ ಸಂದೇಶ ಭಾಷಣ ಮಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಅಮ್ಮೆಂಬಳ ಕೇಂದ್ರ ಜುಮಾ ಮಸ್ಜಿದ್ ಉಪಾಧ್ಯಕ್ಷರಾದ ಹನೀಫ್ BIT, ಕರೀಂ ಜಿ., ಮಾಜಿ ಅಧ್ಯಕ್ಷರದ ಬಂಡಸಾಲೆ ಬಾವಾಕ, ಸಿದ್ದೀಕ್ ಜಿ., ಹನೀಫ್ ಎಸ್, ಕೇಂದ್ರ ಜುಮಾ ಮಸ್ಜಿದ್ ಪ್ರ.ಕಾರ್ಯದರ್ಶಿ ಶಬೀರ್ ಕೋಟೆ ಅಮ್ಮೆಂಬಳ ಹೆಲ್ಪ್ ಲೈನ್ ಸಂಚಾಲಕರಾದ ಪರ್ವಿಝ್, ನಿಝಾಂ, ಮನ್ಸೂರ್, ಲತೀಫ್, ನಬೀಲ್ ಮತ್ತು ನಿಸಾರ್ ದುಬೈ, ಪಾರೂಕ್ ಕೋಟೆ ಅಮ್ಮೆಂಬಳ ಹೆಲ್ಪ್ ಲೈನ್ ಸದಸ್ಯರು, ಊರಿನ ಹಿರಿಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಎಲ್ಲಾ ಮನೆ – ಮನೆಗೆ ತೆರಳಿ ರಂಝಾನ್ ಕಿಟ್ ವಿತರಿಸಿ ಸಹಕರಿಸಿದ ಎಲ್ಲಾರಿಗೂ ದುವಾ ಮಾಡಲು ಪ್ರತ್ಯೇಕವಾಗಿ ಮನವಿ ಮಾಡಲಾಯಿತು.
ಸಂಚಾಲಕರು ಹಾಗೂ ಅಡ್ಮೀನ್ ಬಳಗ ಅಮ್ಮೆಂಬಳ ಹೆಲ್ಪ್ ಲೈನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.