ಮುನಿರಾಬಾದ್ ಚೆಕ್‌ ಪೋಸ್ಟ್ ಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ

ಕೊಪ್ಪಳ(ವಿಶ್ವಕನ್ನಡಿಗ ನ್ಯೂಸ್): ಕೋವಿಡ್-19ರ ನಿಮಿತ್ತ ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆ ತಾಲ್ಲೂಕಿನ ಮುನಿರಾಬಾದ್ ಚೆಕ್‌ಪೋಸ್ಟ್ಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ರವರು ಆಕಸ್ಮಿಕ ಭೇಟಿ ನೀಡಿ ಪರಿಶೀಲಿಸಿದರು.

ಕೋವಿಡ್-19ರ ಹಿನ್ನೆಲೆ ಪಕ್ಕದ ಹೊಸಪೇಟೆಯು ಕಂಟೈನ್ಮೆಂಟ್ ವಲಯ ಆಗಿರುವದರಿಂದ ಜನಗಳ ಓಡಾಟವನ್ನು ನಿಷೇಧಿಸಲಾಗಿದೆ. ಆದರೂ ಕೆಲ ಜನರು ಓಡಾಡುತ್ತಿದ್ದು ಅಂತಹವರನ್ನು ಸ್ವತಃ ಜಿಲ್ಲಾಧಿಕಾರಿಗಳು ತಡೆದು ವಾಪಸ್ಸು ಕಳಿಸಿದರು.

ಮುಂದುವರೆದು ಕೊಪ್ಪಳ ನಗರದಲ್ಲಿರುವ ವಿವಿಧ ಚೆಕ್‌ಪೋಸ್ಟ್ಗಳಿಗೂ ಸಹ ಆಕಸ್ಮಿಕ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸ್ ಸಿಬ್ಬಂದಿಗಳು ಹಾಗೂ ಇತರ ಅಧಿಕಾರಿಗಳು ಇದೆ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವರದಿ: ಮರಿಗೌಡ ಬಾದರದಿನ್ನಿ

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...