ಕೋವಿಡ್-19 ನಿಯಂತ್ರಣ ಸರ್ಕಾರದ ಮಾರ್ಗಸೂಚಿಗಳನ್ವಯ ಜಿಲ್ಲೆಯಲ್ಲಿ ಕೆಲವು ಕ್ಷೇತ್ರಗಳಿಗೆ ವಿನಾಯತಿ – ಪಿ.ಸುನೀಲ್ ಕುಮಾರ್ ಜಿಲ್ಲಾಧಿಕಾರಿ

ಕೊಪ್ಪಳ (www.vknews.com) : ರಾಜ್ಯ ಸರ್ಕಾರದಿಂದ ಕೋವಿಡ್-19 ನಿಯಂತ್ರಣ ಕುರಿತು ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಗಳ ಆಧಾರದ ಮೇಲೆ ಜಿಲ್ಲೆಯಲ್ಲಿನ ಕೆಲವು ಕ್ಷೇತ್ರಗಳಿಗೆ ವಿನಾಯತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಕೋವಿಡ್-19 ನಿಯಂತ್ರಣ ಕುರಿತು ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಗಳ ಆಧಾರದ ಮೇಲೆ ಜಿಲ್ಲೆಯ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಟೆಲಿಮೆಡಿಸಿನ್, ಜನಔಷಧಿ ಕೇಂದ್ರಗಳು, ವೈದ್ಯಕೀಯ ಪ್ರಯೋಗಾಲಯಗಳು, ಕೋವಿಡ್-19 ಸಂಬಂಧಿಸಿದ ಪ್ರಯೋಗಾಲಯಗಳು, ಪಶು ವೈದ್ಯಕೇಂದ್ರಗಳು, ಔಷಧಿ ಸರಬರಾಜು ಮತ್ತು ಮಾರಾಟಕ್ಕೆ ವಿನಾಯತಿ ನೀಡಲಾಗಿದೆ. ಕೋವಿಡ್-19 ಅನ್ನು ತಡೆಗಟ್ಟಲು ಅಧಿಕೃತ ಖಾಸಗಿ ಸಂಸ್ಥೆಗಳು, ಮನೆಯ ಆರೈಕೆ ನೀಡುಗರು, ಆಸ್ಪತ್ರೆಗಳಿಗೆ ಸೇವೆ ಸಲ್ಲಿಸುವ ಸರಪಳಿ ಸಂಸ್ಥೆಗಳು ಒದಗಿಸುವ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಅಂಬುಲೆನ್ಸ್ ಸೇರಿದಂತೆ ವೈದ್ಯಕೀಯ ಹಾಗೂ ಪಶು ವೈದ್ಯಕೀಯ ಸಿಬ್ಬಂದಿ, ವೈದ್ಯ ವಿಜ್ಞಾನ, ನರ್ಸ ಮುಂತಾದ ಅಂತರ್ ರಾಜ್ಯ,
ಹೊರರಾಜ್ಯಗಳಲ್ಲಿ ಚಲನವಲನಗಳನ್ನು ಅನುಮತಿಸಲಾಗಿದೆ.

ಕೃಷಿ ಹಾಗೂ ಇತರೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ;
ರೈತರು & ಕೃಷಿ ಕಾರ್ಮಿಕರ ಜಮೀನುಗಳಲ್ಲಿ ಕೃಷಿ ಕಾರ್ಯಚರಣೆ ಜರುಗಿಸುವುದು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯಚಟುವಟಿಕೆ, ಕೃಷಿ ಯಂತ್ರೋಪಕರಣಗಳ ಮಾರಾಟ, ಕೃಷಿ ಬೀಜ, ಗೊಬ್ಬರ, ಕೀಟನಾಶಕ ತಯಾರಿಸುವ, ಸರಬರಾಜು ಹಾಗೂ ಮಾರಾಟ ಕೇಂದ್ರಗಳಿಗೆ ವಿನಾಯಿತಿ.
ಮೀನುಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜಲಚರ ಸಾಕಣೆ ಉದ್ಯಮ, ಹಾರ್ವೆಸ್ಟಿಂಗ್, ಪ್ಯಾಕೆಜಿಂಗ್, ಕೋಲ್ಡ್ಚೈನ್, ಮಾರಾಟ ಮತ್ತು ಮಾರುಕಟ್ಟೆ ಚಟುವಟಿಕೆಗೆ ಅನುಮತಿ. ಹಾಲು ಸಂಸ್ಕರಣಾ ಕೇಂದ್ರಗಳಿಂದ ಹಾಲು ಮಾರಾಟ, ಪಶು ಸಂಗೋಪನಾ ಕೇಂದ್ರಗಳು, ಕೋಳಿ ಸಾಗಾಣಿಕೆ ಕೇಂದ್ರಗಳು, ಮೊಟ್ಟೆ ಕೇಂದ್ರಗಳು, ಜಾನುವಾರು ಸಾಗಾಣಿಕೆ ಕೇಂದ್ರಗಳು ಹಾಗೂ ಪಶು ಆಹಾರ ಸಂಬಂಧಿತ ಮೆಕ್ಕೆಜೋಳ, ಸೋಯಾ, ಕಚ್ಚಾ ಸಾಮಗ್ರಿಗಳನ್ನು ಸರಬರಾಜು ಮಾಡಬಹುದು.

ಎಲ್ಲಾ ರೀತಿಯಾ ಬ್ಯಾಂಕ್ ಮತ್ತು ಎ.ಟಿ.ಎಂ ಸೇವೆಗಳು ಲಭ್ಯವಿರಲಿವೆ. ಸಾಮಾಜಿಕ ವಲಯಗಳಾದ ವೃದ್ದಾಶ್ರಮ, ಬಾಲ ಮಂದಿರ, ನಿರ್ಗತಿಕರ ಕೇಂದ್ರಗಳು, ಮಕ್ಕಳು, ವಿಕಚೇತನರು, ಮಾಸಿಕ ಅಸ್ವಸ್ಥರು, ಹಿರಿಯ ನಾಗರಿಕರಿಗೆ ಹಾಗೂ ವಿಧವೆಯರಿಗೆ ತೆರೆಯಲಾದ ಆಶ್ರಮಗಳು ಕಾರ್ಯನಿರ್ವಹಿಸಲಿವೆ. ಎಲ್ಲಾ ರೀತಿಯಾ ಪಿಂಚಣಿ ಸೇವೆಗಳ ವಿತರಣೆ ಆಗಲಿದೆ. ಅಂಗನವಾಡಿಗಳಿಂದ ಆಹಾರ ಸಾಮಾಗ್ರಿಗಳು ಮತ್ತು ಪೌಷ್ಠಿಕಗಳನ್ನು ಪ್ರತಿ 15 ದಿನಗಳಿಗೊಮ್ಮೆ ಫಲಾನುಭವಿಗಳ ಮನೆ ಬಾಗಿಲಿಗೆ ವಿತರಿಸಲಾಗುವುದು. ಶೈಕ್ಷಣಿಕ ಹಾಗೂ ತರಬೇತಿ ಸಂಸ್ಥೆಗಳು ಮಾಡುವ ಆನ್‌ಲೈನ್ ಭೋದನೆ ಮೂಲಕ ಶೈಕ್ಷಣಿಕ ವೇಳಾಪಟ್ಟಿಯನ್ನು ಪಾಲಿಸುವುದು. ಬೋಧನಾ ಉದ್ದೇಶಕ್ಕಾಗಿಯೇ ದೂರದರ್ಶನ (ಡಿಡಿ) ಹಾಗೂ ಇತರೆ ಶೈಕ್ಷಣಿಕ ಚಾನಲ್‌ಗಳನ್ನು ಉಪಯೋಗಿಸಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ಗಳನ್ನು ಧರಿಸಿಕೊಂಡು ಎಂ.ಎನ್.ಆರ್.ಇ.ಜಿ.ಎ ಕೆಲಸಗಳನ್ನು ಮಾಡಲು ಹಾಗೂ ನೀರಾವರಿ ಮತ್ತು ಜಲ ಸಂರಕ್ಷಣೆ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ.

ಸಾರ್ವಜನಿಕ ಉಪಯುಕ್ತತೆಗಳು/ ಚಟುವಟಿಕೆಗಳು;
ಪೆಟ್ರೋಲ್, ಡೀಸಲ್, ಸೀಮೆಎಣ್ಣೆ, ಸಿಎನ್‌ಜಿ, ಎಲ್‌ಪಿಜಿ, ಪಿಎನ್‌ಜಿ ಮತ್ತು ಇತರೆ. ವ್ಯಾಪಾರಗಳನ್ನೊಳಗೊಂಡ ಇಂಧನ ಹಾಗೂ ಅನಿಲ ಪೂರೈಕೆ ಸಂಬಧೀತ ಸೆಕ್ಟರ್‌ಗಳು ಕಾರ್ಯನಿರ್ವಹಿಸಲಿವೆ. ಅಂಚೆ ಕಚೇರಿ ಸೇವೆ, ನೀರು ನೈರ್ಮಲ್ಯ ಮತ್ತು ತಾಜ್ಯ ನಿರ್ವಹಣೆ, ದೂರಸಂಪರ್ಕ ಮತ್ತು ಅಂತರ್ಜಾಲ ವ್ಯವಸ್ಥೆ ಇರಲಿದೆ. ಸರಕುಗಳ ಸಾಗಣೆ/ ಲೋಡಿಂಗ್/ಅನ್ ಲೋಡಿಂಗ್(ರಾಜ್ಯ ಮತ್ತು ಅಂತರ್‌ರಾಜ್ಯ) ಕೈಗೊಳ್ಳಲು ಅನುಮತಿಸಿದೆ. ರಾಜ್ಯ ಮತ್ತು ಅಂತರ್ ರಾಜ್ಯದಿಂದ ಸಿಮೆಂಟ್, ಜೆಲ್ಲಿ, ಸ್ಟೀಲ್, ಟೈಲ್ಸ್, ಇಟ್ಟಿಗೆ, ಪೆಂಟ್ಸ್ ಹಾಗೂ ಟಾರ್ ಸೇರಿದಂತೆ ಎಲ್ಲಾ ಸರಕುಗಳನ್ನು ಸಾಗಿಸಲು ಅನುಮತಿಸಿದೆ. ಎಲ್ಲಾ ಸರಕು ಸಾಗಾಣಿಕಾ ವಾಹನಗಳ ಚಾಲನೆಗೆ ಅನುಮತಿ ನೀಡಲಾಗಿದ್ದು, 02 ಚಾಲಕರು, 01 ಸಹಾಯಕನಿಗೆ ಮಾತ್ರ ಪರವಾನಗಿ ನೀಡಿದೆ. ವಾಹನ ಚಾಲಕರಿಗೆ ಅಧಿಕೃತ ಚಾಲನಾ ಪರವಾನಗಿ ಇರಬೇಕು. ಟ್ರಕ್‌ಗಳ ದುರಸ್ತಿಗಾಗಿ ಅಂಗಡಿಗಳು ಮತ್ತು ಹೆದ್ದಾರಿಗಳಲ್ಲಿಯ ಡಾಬಾಗಳು ನಿಗದಿತ 20ಕಿ.ಮೀ ಅಂತರದಲ್ಲಿ ಕಾರ್ಯನಿರ್ವಹಿಸಲು ಜಿಲ್ಲಾಡಳಿತದ ಪರವಾನಿಗೆ ಪಡೆಯಬೇಕು.

ಅಗತ್ಯ ಸರಕುಗಳ ಸಾಗಾಣಿಕೆ;
ಅಗತ್ಯ ವಸ್ತುಗಳ ಪೂರೈಕೆ ಸರಪಳಿಯಲ್ಲಿನ ಎಲ್ಲಾ ಸೌಲಭ್ಯಗಳು, ಸ್ಥಳೀಯ ಮಳಿಗೆಗಳು ಅಥವಾ ಇ-ಕಾಮರ್ಸ್ ಕಂಪನಿಗಳ ಮೂಲಕ ಅಂತಹ ಸರಕುಗಳ ಉತ್ಪಾದನೆ, ಸಗಟು ಅಥವಾ ಚಿಲ್ಲರೆ ವ್ಯಾಪಾರದಲ್ಲಿ ತೊಡಗಿದ್ದಲ್ಲಿ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯನಿರ್ವಹಿಸಲು ಅವಕಾಶ ನೀಡುವುದು. ಆಹಾರ, ದಿನಸಿ ವಸ್ತುಗಳು (ಕಿರಣಿ ಅಂಗಡಿಗಳನ್ನೊಳಗೊಂಡ) ಹಣ್ಣುಗಳು, ತರಕಾರಿಗಳು, ಡೈರಿ,ಹಾಲಿನ ಬೂತ್‌ಗಳು, ಕೋಳಿ ಮಾಂಸ, ಮೀನು, ಪಶು ಆಹಾರ ಮೇವು ಇತ್ಯಾದಿಗಳೊಂದಿಗೆ ವ್ಯವಹರಿಸುವ ಪಡಿತರ ಅಂಗಡಿಗಳು, ಬಂಡಿಗಳು ತಮ್ಮ ಸಮಯದ ಮೇಲೆ ಯಾವುದೇ ನಿರ್ಬಂಧವಿಲ್ಲದೆ ಕಟ್ಟುನಿಟ್ಟಾದ ಸಾಮಾಜಿಕ ದೂರವನ್ನು ಖಾತ್ರಿಪಡಿಸಿಕೊಂಡು ಕಾರ್ಯನಿರ್ವಹಿಸುವುದು. ಪ್ರಸಾರ ಮಾಧ್ಯಮ, ಡಿಟಿಎಚ್, ಕೇಬಲ್ ಸೇವೆ ಗಳನ್ನೊಳಗೊಂಡಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಸಹ ನಡೆಯಲಿವೆ.

ಐಟಿ-ಬಿಟಿ ಆಧಾರಿತ ಸೇವೆಗಳು ಕನಿಷ್ಠ ಕೆಲಸಗಾರರಿಂದ ಕಾರ್ಯನಿರ್ವಸಬಹುದು ಉಳಿದವರು ಮನೆಯಿಂದಲೆ ಕೆಲಸ ಮಾಡಬಹುದು. ಸರ್ಕಾರದ ಚಟುವಟಿಕೆಗಳ ಸಲುವಾಗಿ ಡಾಟಾ ಮತ್ತು ಕಾಲ್ ಸೆಂಟರ್‌ಗಳ ಕಾರ್ಯನಿರ್ವಣೆ. ಲಾಕ್‌ಡೌನ್ ಸಂದರ್ಭದಲ್ಲಿ ಸಿಕ್ಕಿಕೊಂಡಿರುವ ಸಂತ್ರಸ್ಥರಿಗೆ ತುರ್ತು ಸೇವೆಗಳಲ್ಲಿ ನಿರತರಾದ ನೌಕರರು, ಸಿಬ್ಬಂದಿಗಳಿಗೆ ಹಾಗೂ ವೈದ್ಯಕೀಯ ಮತ್ತು ತುರ್ತು ಸಿಬ್ಬಂದಿಗಳು, ವಾಯು ಮತ್ತು ಸಮುದ್ರಯಾನ ಸಿಬ್ಬಂದಿಗಳವರಿಗೆ ಹೋಟಲ್, ವಸತಿ ಗೃಹಗಳು, ಹೊಂಸ್ಟೆಗಳಿಗೆ ಅವಕಾಶ. ಕ್ವಾರಂಟೈನ್ ಸೌಲಭ್ಯಕ್ಕಾಗಿ ಮೀಸಲಿರಿಸಿರುವ ಅಥವಾ ಗುರುತಿಸಿರುವ ಸಂಸ್ಥೆಗಳು ಹಾಗೂ ಎಲೆಕ್ಟಿçಷಿಯನ್, ಐಟಿ ರಿಪೇರಿ, ಪ್ಲಂಬರ್, ಮೆಕಾನಿಕ್ ಹಾಗೂ ಬಡಿಕೆ ಕೆಲಸಗಾರರು ಸೇವೆಗಳು ಇರಲಿವೆ.

ಖಾಸಗಿ ಹಾಗೂ ಸರ್ಕಾರಿ ಕೈಗಾರಿಕೋದ್ಯಮಗಳ ಕಾರ್ಯನಿರ್ವಹಣೆ;
ಔಷಧ ತಯಾರಕ, ವೈದ್ಯಕೀಯ ಸಲಕರಣೆಗಳ, ಕಚ್ಚಾ ವಸ್ತುಗಳ ಅಂಗಡಿಗಳನ್ನು ಒಳಗೊಂಡಂತೆ ಅಗತ್ಯ ವಸ್ತುಗಳ ತಯಾರಿಕಾ ಘಟಕಗಳು ಹಾಗೂ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾದ ಆಹಾರ ಸಂಸ್ಕರಣಾ ಘಟಕಗಳು, ಕೈಗಾರಿಕೆಗಳು, ಪ್ಯಾಕೆಜಿಂಗ್ ಸಾಮಾಗ್ರಿಗಳ ಉತ್ಪಾದನಾ ಘಟಕಗಳಿಗೆ ವಿನಾಯತಿ ನೀಡಲಾಗಿದೆ.

ನಿರ್ಮಾಣ ಚಟುವಟಿಕೆಗಳು;
ಗ್ರಾಮೀಣ ಪ್ರದೇಶಗಳಲ್ಲಿನ ಅತಿ ಸಣ್ಣ, ಹಾಗೂ ಮಧ್ಯಮ ಎಂಟರ್ ‌ಪ್ರೇಸೆಸ್‌ಗಳು ಒಳಗೊಂಡಂತೆ ರಸ್ತೆ ನಿರ್ಮಾಣ ಕಾಮಗಾರಿ, ನೀರಾವರಿ ಯೋಜನೆ, ಕಟ್ಟಡ ಹಾಗೂ ಇತರೆ ಕೈಗಾರಿಕಾ ನಿರ್ಮಾಣಗಳಿಗೆ ಅನುಮತಿ ನೀಡಲಾಗಿದೆ.

ವ್ಯಕ್ತಿಗಳ ಚಲನ ವಲನಗಳು;
ವೈದ್ಯಕೀಯ ಹಾಗೂ ಪಶು ವೈದ್ಯಕೀಯ ಸೇವೆಗಳು ಸೇರಿದಂತೆ ತುರ್ತು ಸೇವೆಗಳಿಗಾಗಿ ಪರವಾನಿಗೆ ಪಡೆದಿರುವ ಖಾಸಗಿ ವಾಹನಗಳು ಹಾಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಕಚೇರಿಗಳು ಹಾಗೂ ಕೇಂದ್ರ ಸ್ವಾಮ್ಯದ, ಅಧೀನ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ರಕ್ಷಣಾ ಇಲಾಖೆ, ಕೇಂದ್ರ ಸಶಸ್ತ ಆರಕ್ಷಕ ಪಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಪತ್ತು ನಿರ್ವಹಣೆ ಹಾಗೂ ಸಂಬಂಧಿಸಿದ ಏಜೆನ್ಸಿಗಳು, ಎನ್.ಐ.ಸಿ ಗಳು, ಭಾರತ ಆಹಾರ ನಿಗಮ, ಎನ್.ಸಿ.ಸಿ, ನೆಹರು ಯುವ ಕೇಂದ್ರಗಳು ಮತ್ತು ಕಸ್ಟಮ್ಸ್ ಇಲಾಖೆಯವರು ಯಾವುದೇ ನಿರ್ಬಂಧಗಳಿಲ್ಲದೇ ಕಾರ್ಯನಿರ್ವಹಿಸುವುದು. ಪೊಲೀಸ್, ಗೃಹ ರಕ್ಷಕ ದಳ, ನಾಗರಿಕ ರಕ್ಷಣಾ, ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಕಾರಾಗೃಹ ಮತ್ತು ಪೌರಾಡಳಿತ ಇಲಾಖೆ ಸೇವೆಗಳು ಹಾಗೂ ಜಿಲ್ಲಾಡಳಿತ ಮತ್ತು ಖಜಾನೆ ಇಲಾಖೆಯವರು ನಿರ್ಭಂದಿತ ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಿಸುವುದು.

ನಿರ್ಭಂಧಗಳು;
ಕೊಪ್ಪಳ ಜಿಲ್ಲೆಯಾದ್ಯಾಂತ ಸಿನಿಮಾ ಮಂದಿರ, ಮಾಲ್, ನಾಟಕಗಳು, ರಂಗಮಂದಿರ, ಪಬ್, ನೈಟ್ ಕ್ಲಬ್, ಮ್ಯಾರಥಾನ್, ಕ್ರೀಡೆಗಳು, ಟ್ಯೂಷನ್, ಜಾತ್ರೆ, ಸಂತೆ, ಸಭೆ, ಎಲ್ಲ ರೀತಿಯ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಆಟೋ ರಿಕ್ಷಾ, ಟ್ಯಾಕ್ಸಿ ಇತರೆ ಬಾಡಿಗೆ ಪ್ರಯಾಣ ಸೇವೆಗಳಿಗೆ ನಿರ್ಭಂಧಿಸಲಾಗಿದೆ. ಶವ ಸಂಸ್ಕಾರದಲ್ಲಿ 20 ಕ್ಕಿಂತ ಹೆಚ್ಚು ಜನರು ಭಾಗವಹಿಸಲು ಅವಕಾಶವಿಲ್ಲ. ವೈದ್ಯಕೀಯ ತುರ್ತು ಮತ್ತು ಅನಿವಾರ್ಯ ಸನ್ನಿವೇಶಗಳನ್ನು ಹೊರತುಪಡಿಸಿದರೆ ಮುಂತಾದ ಎಲ್ಲಾ ಚಟುವಟಿಕೆಗಳನ್ನು ಕಡಿವಾಣ ಹಾಕಲಾಗಿದೆ.

ಲಾಕ್‌ಡೌನ್ ಜಾರಿಯಲ್ಲಿ ಅನುಸರಿಸಬೇಕಾದ ಕ್ರಮಗಳು;
ಸಾರ್ವಜನಿಕರು ಕೆಲಸದ ಮಾಡುವ ವೇಳೆಯಲ್ಲಿ ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಕೆಲಸದ ಸ್ಥಳಗಳಲ್ಲಿ ಉಸ್ತುವಾರಿವಹಿಸಿದ ವ್ಯಕ್ತಿಗಳು ಸಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಗಮನಹರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ 5 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಮದುವೆ ಹಾಗೂ ಅಂತ್ಯ ಸಂಸ್ಕಾರದ ಕೂಟಗಳನ್ನು ಜಿಲ್ಲಾಡಳಿತ ನಿಯಂತ್ರಿಸಲ್ಪಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸಲಾಗುತಿದ್ದು,. ಮದ್ಯ, ತಂಬಾಕು, ಗುಟ್ಕಾ ಮಾರಾಟ ನಿಷೇಧ ಮಾಡಲಾಗಿದೆ.

ಕೆಲಸದ ಸ್ಥಳಗಳಲ್ಲಿ ಅನುಸರಿಸಬೇಕಾದ ಕ್ರಮಗಳು;
ಕೆಲಸ ಮಾಡುವ ವೇಳೆಯಲ್ಲಿ ಸ್ಯಾನಿಟೈಸರ್ ಬಳಕೆ ಮಾಡಬೇಕು. ಕೆಲಸದ ವೇಳೆಯಲ್ಲಿ ಒಂದು ಶಿಫ್ಟಿನ ನಡುವೆ 1 ಗಂಟೆ ಅಂತರ ಇರಬೇಕು. 65 ವರ್ಷ ಹಾಗೂ 5 ವರ್ಷದ ಒಳಗಿನ ಮಕ್ಕಳು ಮನೆಯಲ್ಲಿ ಕೆಲಸ ಮಾಡಬೇಕು. ಸರ್ಕಾರಿ ಹಾಗೂ ಖಾಸಗಿ ನೌಕರರು ಆರೋಗ್ಯ ಸೇತು ಆಪ್ ಉಪಯೋಗಿಸಬೇಕು. ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ.

ಉತ್ಪಾದನಾ ಘಟಕಗಳಲ್ಲಿ ಕೆಲಸದ ಬಿಡುವಿನ ಸಮಯದಲ್ಲಿ ಕಡ್ಡಾಯವಾಗಿ ಕೈ,ಕಾಲುಗಳನ್ನು ತೊಳೆಯಬೇಕು. ಶಿಫ್ಟ್ಗಳು ಹೆಚ್ಚಾಗುವಂತಿಲ್ಲ ಹಾಗೂ ಕ್ಯಾಂಟಿನ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳವುದು.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಸರಿಸುವ ಕ್ರಮಗಳು;
ಕಚೇರಿ, ಕೆಲಸದ ಸ್ಥಳ, ಕೈಗಾರಿಕೆ, ಸಂಸ್ಥೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಸರಿಸುವ ಕ್ರಮಗಳು ಕಟ್ಟಡದ ಪ್ರವೇಶ ದ್ವಾರ, ಕಚೇರಿ, ಚಹಾ ಅಂಗಡಿ ಮತ್ತು ಕ್ಯಾಂಟಿನ್‌ಗಳು, ಸಭಾಂಗಣ, ಸಂವಾದ ಕೊಠಡಿ, ಪ್ರಾಂಗಣ, ಸ್ಥಳದ ಪ್ರವೇಶ ದ್ವಾರ, ಬಂಕರ್‌ಗಳು, ಪೋರ್ಟಾ ಕ್ಯಾಬಿನ್‌ಗಳು, ಲಿಫ್ಟ್ಗಳು, ಶೌಚಾಲಯ, ಕೈ ತೊಳೆಯುವ ಸಿಂಕ್‌ಗಳು, ಸ್ನಾನಗೃಹಗಳು ಇತ್ಯಾದಿಗಳನ್ನು ಸಂಪೂರ್ಣವಾಗಿ ಸೊಂಕುರಹಿತವನ್ನಾಗಿ ಮಾಡುವುದು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇಲೆ ಅವಲಂಬನೆ ಆಗದೆ ಸಂಬAಧಿಸಿದ ಕಂಪನಿಯವರು ಹೊರಗಡೆಯಿಂದ ಬರುವಂತಿದ್ದರೆ ಅವರಿಗೆ ಪ್ರತ್ಯೇಕವಾದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು.

ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಕೆಲಸದ ಸ್ಥಳಗಳಿಗೆ ಆಗಮಿಸುವ ಎಲ್ಲರೂ ಕಡ್ಡಾಯವಾಗಿ ಥರ‍್ಮಲ್ ಸ್ಕಾನಿಂಗ್ ಮಾಡುವುದು. ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಕಡ್ಡಾಯವಾಗಿ ಆರೋಗ್ಯ ವಿಮೆ ಮಾಡುವುದು. ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಕೆಲಸದ ಸ್ಥಳಗಳಿಗೆ ಆಗಮಿಸುವ ಎಲ್ಲರೂ ಕಡ್ಡಾಯವಾಗಿ ಹ್ಯಾಂಡ್ ವಾಶ್ ಹಾಗೂ ಸ್ಯಾನಿಟೈಸರ್‌ಗಳನ್ನು ಒದಗಿಸುವುದು ಮತ್ತು ಎಲ್ಲಾ ಸಾಮಾಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ದೊಡ್ಡ ದೊಡ್ಡ ಸಭೆ, ಸಮಾರಂಭಗಳಿಗೆ ನಿರ್ಭಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಮರಿಗೌಡ ಬಾದರದಿನ್ನಿ

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...