ರಂಜಾನ್ ಹಬ್ಬಕ್ಕೆ ಸಂಗ್ರಹಿಸಿದ್ದ ಹಣ ಸಿಎಂ ನಿಧಿಗೆ ದೇಣಿಗೆ ನೀಡಿದ ಬಾಲಕರು

ಸಕಲೇಶಪುರ (www.vknews.com) : ರಂಜಾನ್ ಹಬ್ಬಕ್ಕಾಗಿ ಕೂಡಿಟ್ಟ ಹಣವನ್ನು ಕೊರೋಣ ಸಂತ್ರಸ್ತರ ನಿಧಿಗೆ ದೇಣಿಗೆ ನೀಡಿದ ಬಾಲಕರು. ಪಟ್ಟಣದ ಹಳೆಸಂತೆ ವೇರಿ ನಿವಾಸಿಗಳು ಆಕ್ಸ್ಫರ್ಡ್ ಶಾಲೆಯ ವಿದ್ಯಾರ್ಥಿಗಳಾದ ಮಹಮ್ಮದ್ ಮೆಹರಾಜ್ ಮತ್ತು ಮೊಹಮ್ಮದ್ ರೇಯಾನ್ ಹಬ್ಬಕ್ಕೆಂದು ಶೇಖರಿಸಿಟ್ಟಿದ್ದ ₹2000 ಗಳನ್ನು ಗಳನ್ನು ತಹಸೀಲ್ದಾರ್ ಮುಖಾಂತರ ಕೊರೋನ ಸಂತ್ರಸ್ತರ ಮುಖ್ಯಮಂತ್ರಿಗಳ ನಿಧಿಗೆ ಅರ್ಪಿಸಿದರು.

ಆಪ್ತಾಬ್ ಆಲಂ ಮತ್ತು ಸುರಯ್ಯ ತಬಸ್ಸುಮ್ ದಂಪತಿಗಳ ಪುತ್ರರಾದ ಇವರುಗಳು ಈ ಹಿಂದೆ ಹಳೆ ಸಂತವೇರಿ ಬಡಾವಣೆಯ ಜನರಿಗೆ ಮಾಸ್ಕ್ ಗಳನ್ನು ವಿತರಿಸಿದರು.

ಬಾಲಕರಿಂದ ಹಣ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ್, ಇಂತಹ ಕಾರ್ಯಗಳು ಸಮಾಜಕ್ಕೆ ಪ್ರೇರಣೆ ನೀಡುತ್ತವೆ. ಇವರ ತಂದೆ ಸೌದಿ ಅರೇಬಿಯದಲ್ಲಿ ಉದ್ಯೋಗದಲ್ಲಿದ್ದಾರೆ. ಮಧ್ಯಮವರ್ಗದ ಕುಟುಂಬದ ಇವರುಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ. ತಾಯಿ ನೀಡಿದ ಪಾಕೆಟ್ ಮನಿಯನ್ನು ಸಂಗ್ರಹಿಸಿ ರಂಜಾನ್ ತಿಂಗಳಲ್ಲಿ ತಮಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಸಂಗ್ರಹಿಸಿಟ್ಟಿದ್ದ ಹಣವನ್ನು ಕೊರೋನ ಸಂತ್ರಸ್ತರಿಗೆ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...