ಮಹೇಂದ್ರ ಕುಮಾರ್ ಬಗ್ಗೆ ಎರಡು ಬಹುಮುಖ್ಯವಾದದ್ದು ನನಗೆ ಹೇಳಲಿಕ್ಕಿದೆ…,

ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ನೀವೊಂದು ಹಳೆಯ ಭಾವಚಿತ್ರ ಗಮನಿಸಿರಬಹುದು. ಮಹೆಂದ್ರ ಕುಮಾರ್ ಗೆ ಹಾಕಲ್ಪಟ್ಟ ಹಾರತುರಾಯಿಗಳನ್ನು ಕೈಯಲ್ಲಿ ಹಿಡಿದುಕೊಂದು ಅವರ ಹಿಂದೆಯೇ ಹೆಜ್ಜೆ ಹಾಕುವ ಒಬ್ಬ ವ್ಯಕ್ತಿಯದ್ದು‌. ಆ ವ್ಯಕ್ತಿ ಇವತ್ತು ಸತತವಾಗಿ ಗೆದ್ದು ಬರುತ್ತಿರುವ ಮಂಗಳೂರು ಲೋಕಸಭಾ ಸದಸ್ಯ ಆಡಳಿತ ಪಕ್ಷ ಬಿಜೆಪಿ ರಾಜ್ಯಾಧ್ಯಕ್ಷ. ಬಹುಷಃ ಮಹೇಂದ್ರ ಕುಮಾರ್ ಈಗ ಅವರ ಅದೇ ಹಳೆಯ ಸಿದ್ಧಾಂತಕ್ಕೇ ಬದ್ಧರಾಗಿದ್ದರೆ ಇವತ್ತು ಎಲ್ಲಿರುತ್ತಿದ್ದರು ಎನ್ನುವುದನ್ನೊಮ್ಮೆ ಊಹಿಸಿ ನೋಡಿ. ಹಾಗಿತ್ತು ಅವರ ಚಾರ್ಮ್, ಕೋಮುವಾದದ ಪ್ರಯೋಗಶಾಲೆ ಎಂದೇ ಖ್ಯಾತಿ ಪಡೆದ ಕರಾವಳಿ ಮಲೆನಾಡ ಕಡೆ ಒಂದು ಕಾಲಕ್ಕೆ ಮಹೇಂದ್ರ ಕುಮಾರ್ ಎಂದರೆ ಮುಗೀತು. ಆದರೆ, ಅವರೇ ಹೇಳಿದಂತೆ ಅವರಿಗದು ಸರಿ ಕಾಣದ ಕಾರಣ ಅಲ್ಲಿಂದ ಹೊರಬಂದು ಇನ್ನೇನಕ್ಕೋ ಹಪಹಪಿಸಿದರು. ಎಲ್ಲರೂ ಕೂಡಿ ಬಾಳುವ ಭಾವೈಕ್ಯ ಸಮಾಜದ ಕನಸು ಕಂಡರು. ಶೇಕಡಾ ಎರಡರಷ್ಟಿರುವ ವರ್ಗವೊಂದರ ಚಿತಾವಣೆಯಲ್ಲಿ ಉಳಿದ ತೊಂಬತ್ತೆಂಟು ಪರ್ಸಂಟ್ ಜನ ನರಳಬಾರದೆಂದುಕೊಂಡರು. ಇದು ನಿಜವಾದ ತ್ಯಾಗ.

ಮತ್ತೊಂದು, ಈಗ ನೋಡಿ ಸೋಷಿಯಲ್ ಮೀಡಿಯಾದ ಕಾಲ. ವಾಟ್ಸಾಪಲಿ ಬರುವುದರಲ್ಲಿ ೯೦% ಫೇಕ್. ನಮಗೆ ಎಲ್ಲಕ್ಕೂ ಆತುರ.ನಮ್ಮ ಸಿದ್ಧಾಂತ, ಬದ್ಧತೆಗೆ ಖುಷಿಕೊಡುವಂಥ ಯಾವುದೇ ಬರಹವನ್ನು, ಘಟನೆಯನ್ನು ಪೂರ್ವಾಪರ ಯೋಚಿಸದೇ ಮುಕ್ತವಾಗಿ ಒಪ್ಪಿಕೊಂಡು ಹಂಚುವುದೋ ಅದಕ್ಕಿನ್ನೊಂದಷ್ಟು ಸೇರಿಸಿಯೋ ಬರೆಯುವ ಬರಹಗಾರರ ದಂಡೇ ಇದೆ. ಸದ್ಯ ಮಹೇಂದ್ರ ಕುಮಾರ್ ಕಡೆ ಗುರುತಿಸಿಕೊಂಡಿದ್ದ ನಾನೂ ಸೇರಿದಂತೆ ಹಲವರು ಬರೆಯುತ್ತಿದ್ದ ಬರಹಗಳನ್ನು ಓದಿ, ವಿವೇಚಿಸಿ ಬರೆಯಿರಿ, ಅದು ಸುಳ್ಳೋ, ನಿಜವೋ ಎನ್ನುವುದು ನಿಮಗೆ ಮನದಟ್ಟಾಗಿದೆಯಾ? ಹೀಗೇ ಗೊತ್ತಿಲ್ಲದೇ ಹಂಚುವುದರಿಂದ ಬರೆಯುವುದರಿಂದ ನಾವು ಬಯಸುತ್ತಿರುವ ಸ್ವಸ್ಥ ಸಮಾಜ ಸ್ಥಾಪನೆ ಸಾಧ್ಯ ಇದೆಯಾ? ಹೀಗೇ ಒಬ್ಬ ಹಿರಿಯಣ್ಣನಂತೆ ಬುದ್ಧಿ ಹೇಳುತ್ತಿದ್ದರು. ನನ್ನ ಬರಹ ಬದಲಾಗಿದ್ದರೆ, ಈಗ ಒಂದಿಷ್ಟಾದರೂ ಮಾಗಿದವನಂತೆ ಬರೆಯುತ್ತಿದ್ದೇನೆ ಎಂದೆಲ್ಲಾದರೂ ನಿಮಗೆ ಅನಿಸಿದ್ದರೆ ಅದರ ಪೂರ್ಣ ಕ್ರೆಡಿಟ್ ಮಹೇಂದ್ರ ಕುಮಾರ್ ಗೇ ಕೊಟ್ಟುಬಿಡಿ.ಮತ್ತು ಎಲ್ಲರೂ ಅಷ್ಟೇ, ಒಂದು ಸುದ್ದಿ ಸಿಕ್ಕಿದಾಕ್ಷಣ ಏನೇನೋ ಗೀಚಬೇಡಿ. ಒಂದಷ್ಟು ಕಾಯಿರಿ. ಅದರ ಪೂರ್ಣ ಮಾಹಿತಿ ಬರಲಿ. ಸರಿ ತಪ್ಪುಗಳ ವಿಶ್ಲೇಷಣೆ ಆಗಲಿ. ನಂತರ ನಿಮ್ಮ ಅಭಿಪ್ರಾಯ ಬರೆಯಿರಿ ಅಷ್ಟೇ.
ವಿವೇಚನಾ ಶಕ್ತಿ ಇರುವ ಸರಿ ತಪ್ಪುಗಳನ್ನು ವಿಶ್ಲೇಷಿಸಿ ಅರ್ಥ ಮಾಡಿಕೊಳ್ಳಬಲ್ಲ ಒಂದು ಯುವ ಸಮೂಹ ಮಹೇಂದ್ರ ಕುಮಾರ್ ಕನಸಾಗಿತ್ತು. ಅದಕ್ಕೇ ಅವರು ತನ್ನ ಸ್ಥಾನಮಾನ, ಬಹುಸಂಖ್ಯೆಯ ಬೆಂಬಲಿಗರನ್ನು ತ್ಯಜಿಸಿ ಬಂದು ಹೋರಾಡಿದ್ದು. ನಿಕೇತ್ ರಾಜ್ ರಂಥಾ ಒಂದಿಷ್ಟು ಯುವ ಪ್ರತಿಭೆಗಳನ್ನು ಕರೆದುಕೊಂಡು ನಮ್ಮ ಬಳಿಗೆ ಬಂದದ್ದು.

ಸಾವು ಯಾರಿಗೂ ಮೋಸ ಮಾಡುವುದಿಲ್ಲ, ನಿಮ್ಮ ಹಿಂದೆಯೇ ನಾವೂ ಬರುತ್ತೇವೆ ಮಹೇಂದ್ರ ಸರ್. ಆದರೆ …😥

-ಸಾಹುಕಾರ್ ಅಚ್ಚು

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...