ಕೊಪ್ಪಳ ಜಿಲ್ಲೆಯಲ್ಲಿ 397 ಕರೋನ ಪಾಸಿಟಿವ್ ಸಾಧ್ಯತೆ, 19 ಜನರ ಜೀವಕ್ಕೆ ಕುತ್ತು..!

ಜಿಲ್ಲೆಯಲ್ಲಿ 397 ಕರೋನ ಪಾಸಿಟಿವ್ ಸಾಧ್ಯತೆ ಎಂದ ಉಪ- ವಿಭಾಗ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಶೋಕಾಸ್ ನೋಟಿಸ್ ನೀಡಿದ ಜಿಲ್ಲಾಧಿಕಾರಿ

ಕೊಪ್ಪಳ: ಸರ್ಕಾರಿ ವೈದ್ಯ ನೀಡಿದ ಕೊರೋನ ಸುದ್ದಿಗೆ ಕೊಪ್ಪಳದ ಜನತೆಯಲ್ಲಿ ಆಂತಕ

ಡಾ. ಈಶ್ವರ್ ಸವಡಿ ಉಪ-ವಿಭಾಗ ವೈದ್ಯಾದಿಕಾರಿಗಳು ಗಂಗಾವತಿ.

ಕೊಪ್ಪಳ (www.vknews.com) : ‘ಹಸಿರು ವಲಯದಲ್ಲಿ ಗುರುತಿಸಿಕೊಂಡಿರುವ ಕೊಪ್ಪಳ ಜಿಲ್ಲೆ ಕರೋನಗೆ ಸಂಬಂಧಿಸಿದಂತೆ ಎಲ್ಲ ಸುರಕ್ಷಿತ ಎಂದುಕೊಳ್ಳಬೇಡಿ. ಜಿಲ್ಲೆಯಲ್ಲಿ ೩೯೭ ಕೊರೋನಾ ಪಾಸಿಟಿವ್ ಕೇಸ್ ದೃಢಪಡಲಿವೆ ಮತ್ತು ಅದರಲ್ಲಿ ೧೯ ಜನರ ಜೀವಕ್ಕೆ ಕಂಟಕವಾಗಲಿದೆ’ ಎಂದು ಜಿಲ್ಲೆಯ ಗಂಗಾವತಿ ಉಪ-ವಿಭಾಗದ ಸರ್ಕಾರಿ ವೈದ್ಯರೊಬ್ಬರು ಸಾರ್ವಜನಿಕರ ಸಭೆಯಲ್ಲಿ ಹೇಳುವ ಮೂಲಕ ಕೊಪ್ಪಳ ಜನತೆಗೆ ‘ಕೊರೋನಾ ಶಾಕಿಂಗ್ ನ್ಯೂಸ್’ ನೀಡಿದ್ದಾರೆ.

ಈ ಹೇಳಿಕೆಯನ್ನು ನೀಡಿದ್ದು ಜಿಲ್ಲೆಯ ಗಂಗಾವತಿಯ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ !
ಬುಧವಾರ ಗಂಗಾವತಿಯಲ್ಲಿ ನಡೆದ ವ್ಯಾಪಾರಿಗಳ ಸಭೆಯಲ್ಲಿ ವೈದ್ಯ ಡಾ. ಈಶ್ವರ ಸವಡಿ ಈ ಹೇಳಿಕೆ ನೀಡಿದ್ದಾರೆ.

ಕೊಪ್ಪಳ ಜಿಲ್ಲೆಯನ್ನು ಗ್ರೀನ್ ಜೋನ್ ಎಂದು ಘೋಷಿಸಲು ಆರೋಗ್ಯ ಇಲಾಖೆಯ ವಿರೋಧವಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಕೇಸ್ ಬಂದಿಲ್ಲ ಎಂದ ಮಾತ್ರಕ್ಕೆ ನಾವು ಸುರಕ್ಷಿತ ಅಂತಲ್ಲ. ಐಸಿಎಂಆರ್ ವರದಿ ಪ್ರಕಾರ ಕೊಪ್ಪಳ ಜಿಲ್ಲೆಯು ಅಪಾಯದಲ್ಲಿದೆ. ಇದು ಕೂಡ ಸೋಂಕಿತ ಜಿಲ್ಲೆ, ಬೇರೆ ರಾಜ್ಯದಿಂದ ಕಾರ್ಮಿಕರು ಕೊಪ್ಪಳಕ್ಕೆ ಬಂದಿದ್ದಾರೆ.ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸಿದರೂ ೩೯೭ ಜನರಿಗೆ ಸೋಂಕು ತಗುಲುವ ಅಪಾಯ ಇದೆ ಎಂದು ಡಾ. ಸವಡಿ ಎಚ್ಚರಿಸಿದ್ದಾರೆ.
ಸುಮಾರು ೧೯ ಜನ ಕೊರೋನಾ ಸೋಂಕಿನಿಂದ ಸಾವನ್ನಪ್ಪುವ ಅಂದಾಜು ಐಸಿಎಂಆರ್ ವರದಿಯಲ್ಲಿದೆ. ಇದು ಐಸಿಎಂಆರ್ ನೀಡಿರುವ ಯೂನಿವರ್ಸಲ್ ವರದಿ. ಇದು ಕೇವಲ ಕೊಪ್ಪಳ ಜಿಲ್ಲೆಯನ್ನು ಮಾತ್ರ ಸರ್ವೆ ಮಾಡಿ ಹೇಳಿದ್ದಲ್ಲ. ಈ ಕಾರಣಕ್ಕೆ ಕೊಪ್ಪಳ ಜಿಲ್ಲೆ ಸುರಕ್ಷಿತವಲ್ಲ ಎಂಬುದು ನನ್ನ ಭಾವನೆ ಎಂದು ಡಾ. ಈಶ್ವರ್ ಸವಡಿ ಹೇಳಿದ್ದಾರೆ.

ಆದರೆ, ಇದುವರೆಗೂ ಐಸಿಎಂಆರ್ ಅಂತಹ ವರದಿಯನ್ನು ಸಾರ್ವಜನಿಕವಾಗಿ ಎಲ್ಲೂ ಬಿಡುಗಡೆ ಮಾಡಿಲ್ಲ, ಅದಲ್ಲದೇ ಕೊರೋನಾ ಕುರಿತಂತೆ ಜಿಲ್ಲಾಧಿಕಾರಿಗಳನ್ನ ಹೊರತುಪಡಿಸಿ ಯಾರೂ ಇಂತಹ ಗಂಭೀರ ವಿಷಯವನ್ನು ಪ್ರಸ್ತಾಪಿಸಬಾರದು ಎಂಬ ಪ್ರೊಟೊಕಾಲ್ ಇದೆ. ಹೀಗಿರುವಾಗ ಡಾ.ಈಶ್ವರ್ ಸವಡಿ ಅವರ ಈ ಹೇಳಿಕೆ ವಿಚಿತ್ರವಾಗಿದೆ ಪ್ರಜ್ಞಾವಂತರಲ್ಲಿ ಆತಂಕ ಸೃಷ್ಟಿಸಿ ಪ್ರಶ್ನೆಗೆ ಗ್ರಾಸವಾಗಿತ್ತು.

ಅಲ್ಲದೆ ಈ ಕುರಿತು ಜಿಲ್ಲೆಯಲ್ಲಿ ಮಾದ್ಯಮ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಗಮನಿಸಿದ ಡಾ.ಈಶ್ವರ್ ಸವಡಿ ಇಲ್ಲ ಇಂತಹ ಯಾವುದೇ ಹೇಳಿಕೆಯನ್ನು ನಾನು ನೀಡಿಲ್ಲವೆಂದು ಪ್ರಕರಣ ತಣ್ಣಗಾಗಿಸಲು ಇಂದು ಪತ್ರಿಕಾ ಪ್ರಕಟಣೆ ಅನುಸರಿಸಿದ್ದು ಹೀಗೆ

ಉಪ-ವಿಭಾಗ ಆಸ್ಪತ್ರೆ ಗಂಗಾವತಿಯ ಮುಖ್ಯ ವೈದ್ಯಾದಿಕಾರಿಯಾದ ನಾನು ಗಂಗಾವತಿ ನಗರದಲ್ಲಿ ಕೋವಿಡ್ -19 397 ಪಾಸಿಟಿವ್ ಪ್ರಕರಣ ಬಂದಿರುತ್ತವೆ ಎಂದು ಹಾಗೂ 19 ರೋಗಿಗಳು ಮರಣ ಹೊಂದಿರುತ್ತಾರೆಂದು ಹೇಳಿಕೆ ನೀಡಿರುವುದಾಗಿ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ಸದರಿ ಮಾಹಿತಿಯು ತಪ್ಪಾಗಿರುತ್ತದೆ ನನ್ನಿಂದ ಯಾವುದೇ ಆ ರೀತಿ ಹೇಳಿಕೆ ನೀಡಿರುವುದಿಲ್ಲ. ಗಂಗಾವತಿ ನಗರದಲ್ಲಿ 54 ಜನರನ್ನು ಕ್ವಾರೆಂಟೈನ್ ನಲ್ಲಿ ಇಡಲಾಗಿತ್ತು ಸದರಿಯವರನ್ನು ಕೋವಿಡ್-19 ಟೆಸ್ಟ್ ಮಾಡಲಾಗಿ ನೇಟಿವ್ ಬಂದಿರುತ್ತದೆ. ಅದೆ ರೀತಿ ಆಸ್ಪತ್ರೆಯಲ್ಲಿ ಸುಮಾರು 249 ILR &SARI ಲಕ್ಷಣಗಳಿರುವ ರೋಗಿಗಳಲ್ಲಿ ಕೋವಿಡ್-19 ಮಾದರಿ ಪರೀಕ್ಷೆ ಮಾಡಿದ್ದು ನೆಗೆಟಿವ್ ವರದಿ ಬಂದಿರುತ್ತದೆ .ಗಂಗಾವತಿ ನಗರದಲ್ಲಿ ಯಾವುದೇ ಕೋವಿಡ್- 19 ಪ್ರಕರಣಗಳು ಪತ್ತೆಯಾಗಿಲ್ಲ ಕಾರಣ ಸಾರ್ವಜನಿಕರು ಭಯಪಡುವ ಅಗತ್ಯವಿರುವುದಿಲ್ಲ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕೋವಿಡ್-19 ರೋಗಿಗಳು/ಪ್ರಕರಣ ಇರುವುದರಿಂದ ಗಂಗಾವತಿ ನಗರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸಾರ್ವಜನಿಕರು ಮುಂಜಾಗೃತ ಕ್ರಮವಹಿಸಲು ಕೋರಿದೆ ಎಂದು ಪತ್ರಿಕಾ ಪ್ರಕಟಣೆ ಹೋರಡಿಸಿದ್ದಾರೆ.

ದಿನಾಂಕ 29-04-2020 ಸುದ್ದಿ ಮಾಧ್ಯಮಗಳಲ್ಲಿ 397 ಮಂದಿಗೆ ಕೋವಿಡ್- 19 ಸೋಂಕು ಬೀತಿ ಎಂಬ ಶೀರ್ಷಿಕೆಯಲ್ಲಿ ಆರೋಗ್ಯ ಅಧಿಕಾರಿಗಳ ಹೇಳಿಕೆಯನ್ನಾದರಿಸಿ ಪ್ರಸಾರವಾದ ಸುದ್ದಿ/ಪ್ರಕಟವಾದ ವರದಿ ಸಂಪೂರ್ಣ ಸುಳ್ಳು ಸುದ್ದಿಯಾಗಿರುತ್ತದೆ. ಕಾರಣ ಕೋವಿಡ್ -19 ಕುರಿತು ಜಿಲ್ಲಾಧಿಕಾರಿಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಯಾವುದೇ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ಸೂಚಿಸಿ ಹಾಗೂ ಮಾಧ್ಯಮ ಮಿತ್ರರು ಕೂಡ ಯಾವುದೇ ಅಧಿಕಾರಿಗಳನ್ನು ಸಂಪರ್ಕಿಸದೆ ನೇರವಾಗಿ ಜಿಲ್ಲಾಧಿಕಾರಿಗಳಿಂದ ಮಾತ್ರ ಮಾಹಿತಿ ಪಡೆದುಕೊಳ್ಳಲುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗೆ ಶೋ ಕಾಸ್ ನೋಟಿಸ್ ನೀಡಲಾಗಿದೆ.-
ಪಿ. ಸುನೀಲ್ ಕುಮಾರ್ ಜಿಲ್ಲಾಧಿಕಾರಿಗಳು

ವರದಿ: ಮರಿಗೌಡ ಬಾದರದಿನ್ನಿ

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...