(www.vknews.com) : ಕೋರೋನ ಮಹಾಮಾರಿ ವೈರಸ್ ಹರಡುವಿಕೆ ತಡೆಗಟ್ಟುವ ಲಾಕ್ ಡೌನ್ ಪರಿಣಾಮ ಉಚಿತ ಆಹಾರ, ನೀರು ಮತ್ತು ಐಸ್-ಕ್ರೀಮ್ ಸೇವೆ ಮುಂದುವರಿಕೆ ಮಾಡಲಾಗಿದ್ದು. ಶಿವಮೊಗ್ಗ ವಿವಿಧ ಹಾಸ್ಪಿಟಲ್ ಗಳಲ್ಲಿ ಕೆಲಸ ಮಾಡುವ ಸ್ಟಾಫ್ ನರ್ಸ್ ರೋಗಿಗಳ ನೋಡಿಕೊಳ್ಳುವವರಿಗೆ ಹಾಗೂ ರಸ್ತೆ ಬದಿಯಲ್ಲಿ ತರಕಾರಿ ಹಣ್ಣು ಹೂ ಮಾರುವವರಿಗೆ ನಗರದ ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುವವರಿಗೆ ಇಂದು ಉಚಿತವಾಗಿ ಆಹಾರ ನೀರು ಮತ್ತು ಐಸ್ ಕ್ರೀಂ ನೀಡಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪ, ಜಿಲ್ಲಾ ಭಾರತೀಯ ಮಜ್ದೂರ್, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಕವಿತಾ, ಡಿಕೆ ಶಿವಕುಮಾರ್ ಬ್ರಿಗೇಡ್ ನ ಅರ್ಜುನ್ ರಾಘವೇಂದ್ರ ಹಣ್ಣಪ್ಪ ಉಮೇಶ್ ವಿಜಯಶ ಮುಂತಾದವರು ಭಾಗವಹಿಸಿದ್ದರು.