ಕಾಸರಗೋಡು(ವಿಶ್ವಕನ್ನಡಿಗ ನ್ಯೂಸ್): ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕಾಸರಗೋಡು ಕಾಞಿಂಗಾಡ್ ನಲ್ಲಿ ಗುರುವಾರ ಸಂಜೆ ನಡೆದಿದೆ.
ಕಾಞಿಂಗಾಡ್ ಬಾವ ನಗರದ ನೂರುದ್ದೀನ್ ಎಂಬವರ ಪುತ್ರ ಬಶೀರ್ (4), ನಾಸಿರ್ ಎಂಬವರ ಪುತ್ರ ಅಜ್ನಾಸ್ (5), ಸಮೀರ್ ಎಂಬವರ ಪುತ್ರ ನಿಶಾದ್ (6) ಮೃತ ಮಕ್ಕಳು ಎಂದು ಗುರುತಿಸಲಾಗಿದೆ.
ಮನೆಯ ಪಕ್ಕದಲ್ಲಿದ್ದ ಹೊಂಡಕ್ಕೆ ಮಕ್ಕಳು ಇಳಿದಿದ್ದು ಕೆಸರಲ್ಲಿ ಹೂತು ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮಕ್ಕಳನ್ನು ಕೆರೆಯಿಂದ ಮೇಲೆಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವ ಮೊದಲೇ ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ. (ಸಾಂಧರ್ಬಿಕ ಚಿತ್ರ)