ಭೂಪಾಲ್ (ವಿಶ್ವ ಕನ್ನಡಿಗ ನ್ಯೂಸ್) : ಮಾರಕವಾದ ಕೊರೋನಾ ವೈರಸ್ ಸೋಂಕಿನಿಂದ ಗುಣಮುಖವಾಗಿದ್ದ 25 ದಿನದ ಹಸುಗೂಸಿಗೆ ಪ್ರಕೃತಿ ಎಂದು ನಾಮಕರಣ ಮಾಡಲಾಗಿದೆ.
ಏಪ್ರಿಲ್ 7 ರಂದು ಜನಿಸಿದ್ದ ಮಗುವಿಗೆ 9 ದಿನಗಳಾಗಿದ್ದಾಗ ಕೊರೋನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು. ಮಗುವಿಗೆ ಆರೋಗ್ಯ ಕಾರ್ಯಕರ್ತೆಯಿಂದಾಗಿ ಸೋಂಕು ತಗುಲಿತ್ತು ಎಂದು ಹೇಳಲಾಗಿತ್ತು. ಮಗು ಸದ್ಯ ಗುಣಮುಖವಾಗಿದ್ದು, ಶುಕ್ರವಾರ ರಾತ್ರಿ ಮನೆಗೆ ಮರಳಿದೆ. ಇದೀಗ ಮಗುವಿಗೆ ಪ್ರಕೃತಿ ಎಂದು ನಾಮಕರಣ ಮಾಡಿದ್ದಾಗಿ ಮಗುವಿನ ತಂದೆ ತಿಳಿಸಿದ್ದಾರೆ.