ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ಕ್ರಿಕೆಟಿನಿಂದ ನಿಷೇಧಕ್ಕೊಳಗಾಗಿದ್ದ ಕೇರಳದ ಎಸ್ ಶ್ರೀಶಾಂತ್ ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಚಾರಗಳನ್ನು ಮಾತನಾಡಿದ್ದಾರೆ.
ಕ್ರಿಕೆಟ್ ಗೆ ಮರಳುವ ಬಗ್ಗೆ ಅಭಿಲಾಶೆ ವ್ಯಕ್ತಪಡಿಸಿದ್ದ ಶ್ರೀಶಾಂತ್, ನಾನು ಮತ್ತೆ ವೃತ್ತಿಪರ ಕ್ರಿಕೆಟ್ ಗೆ ಮರಳುತ್ತೇನೆ. ಕೇರಳ ಕ್ರಿಕೆಟ್ ತಂಡದ ತರಬೇತಿಯಲ್ಲಿ ಭಾಗಿಯಾಗಿದ್ದು, ಮುಂದಿನ ರಣಜಿಯಲ್ಲಿ ಕೇರಳ ತಂಡದ ಪರವಾಗಿ ಆಡುವ ವಿಶ್ವಾಸದಲ್ಲಿದ್ದೇನೆ ಎಂದಿದ್ದಾರೆ.
ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಕೆ.ಎಲ್ ರಾಹುಲ್ ಜೊತೆ ಆಡುತ್ತೇನೆ ಎಂಬ ವಿಶ್ವಾಸವಿದೆ. ಕನ್ನಡಿಗ ಕೆ.ಎಲ್ ರಾಹುಲ್ ಕ್ರಿಕೆಟ್ ಆಸಕ್ತಿ ಮತ್ತು ಶಿಸ್ತು ನನಗೆ ತಂಬಾ ಇಷ್ಟವಾಗಿದೆ. ಅವರಿಗೆ ವೈಯಕ್ತಿಕ ದಾಖಲೆಗಿಂತ ತಂಡಕ್ಕಾಗಿ ಆಡುವ ಗುಣವಿದೆ. ಕೊಹ್ಲಿ, ರೋಹಿತ್ ನಂತರ ಟೀಂ ಇಂಡಿಯಾ ನಾಯಕನಾಗುವ ಗುಣ ರಾಹುಲ್ ಗೆ ಇದೆ ಎಂದು ಶ್ರೀಶಾಂತ್ ಹೇಳಿದ್ದಾರೆ.