ಅಬುಧಾಬಿ (www.vknews.com) : ಕೋವಿಡ್ -19 ನಡುವೆ ಬಹುಮಾನಗಳು, ಉದ್ಯೋಗವಕಾಶಗಳ, ಶಾಪಿಂಗ್ ರಿಯಾಯಿತಿ ಬಗ್ಗೆ ಸೋಷಿಯಲ್ ಮೀಡಿಯಾ ನಕಲಿ ಸಂದೇಶಗಳು ರವಾನೆಯಾಗುತ್ತಿದ್ದು, ಯುಎಇ ನಿವಾಸಿಗಳು ನಕಲಿ ಸಂದೇಶವನ್ನು ಕ್ಲಿಕ್ ಮಾಡಿ ಮತ್ತು ಸೂಚನೆಗಳನ್ನು ಅನುಸರಿಸಿದರೆ, ವಂಚಕರು ತಮ್ಮ ಖಾತೆಗಳನ್ನು ಹ್ಯಾಕ್ ಮಾಡಲು ಸಾಧ್ಯವಾಗುತ್ತದೆ ಈ ಬಗ್ಗೆ ಎಚ್ಚರದಿಂದಿರಿ ಎಂದು ಅಬುಧಾಬಿ ಪೊಲೀಸ್ ತಿಳಿಸಿದೆ.
ಈ ವಿಚಾರದಲ್ಲಿ ಅಬುಧಾಬಿ ಪೊಲೀಸರು ಶನಿವಾರ ಯುಎಇ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದು, ಇಂತಹ ಸಂದೇಶಗಳು ಸಾಮಾನ್ಯವಾಗಿ ವಾಟ್ಸಾಪ್ ಮತ್ತು ಇತರ ಸಾಮಾಜಿಕ ತಾಣಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ಅತ್ಯನ್ನತ ತಂತ್ರಜ್ಞಾನದ ಬಳಕೆಯ ಮೂಲಕ ಇಂತಹ ನಕಲಿ ಸಂದೇಶಗಳನ್ನು ಪ್ರಸಾರ ಮಾಡುತ್ತಿದ್ದು, ಈ ಸಂದೇಶವನ್ನು ಕ್ಲಿಕ್ ಮಾಡಿ ಮತ್ತು ಸೂಚನೆಗಳನ್ನು ಅನುಸರಿಸಿದರೆ, ವಂಚಕರು ಖಾತೆಗಳನ್ನು ಹ್ಯಾಕ್ ಮಾಡಲು ಮತ್ತು ಇತರ ವೈಯಕ್ತಿಕ ವಿವರಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಚ್ಚರವಹಿಸಿ ಎಂದು ತಿಳಿಸಿದ್ದಾರೆ.
ಇಂತಹ ಘಟನೆಗಳನ್ನು ತಕ್ಷಣವೇ ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ 999, ಟೋಲ್ ಫ್ರೀ ಸಂಖ್ಯೆ 8002626 (AMAN2626), ಪಠ್ಯ ಸಂದೇಶಗಳ ಮೂಲಕ 2828 ಗೆ ಅಥವಾ [email protected] ಇ-ಮೇಲ್ ಮೂಲಕ ವರದಿ ಮಾಡಲು ಜನರನ್ನು ಕೋರಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.