ದುಬೈ(www.vknews.in): ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮೋಫೋಬಿಕ್ ಪೋಸ್ಟ್ ಮಾಡಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುತ್ತಿರುವ ಯುಎಇ ಸರಕಾರವು ಇದೀಗ ಮೂವರು ಭಾರತೀಯರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಸತತವಾಗಿ ಇಸ್ಲಾಮ್ ಹಾಗೂ ಮುಸ್ಲಿಮರ ವಿರುದ್ಧ ಫೇಸ್ ಬುಕ್ ಪೋಸ್ಟ್ ಮಾಡುತ್ತಿದ್ದ ದುಬೈಯಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ನಿರ್ವಹಿಸುತ್ತಿರುವ ಕರ್ನಾಟಕದ ಸಚಿನ್ ಕಿನ್ನಿಗೋಳಿ, ದುಬೈಯ ಹೊಟೇಲ್ ಒಂದರಲ್ಲಿ ಚೆಫ್ ಆಗಿರುವ ರಾವತ್ ರೋಹಿತ್ ಹಾಗೂ ಇನ್ನೋರ್ವನ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಇಸ್ಲಾಮ್ ವಿರೋಧಿಗಳಿಗೆ ಯುಎಇಯಲ್ಲಿ ಅವಕಾಶವಿಲ್ಲ. ಯಾರಾದರೂ ಇಸ್ಲಾಮೋಫೋಬಿಯಾ ಪೋಸ್ಟ್ ಗಳನ್ನು ಹಾಕಿದರೆ ಅವರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುವುದು ಮಾತ್ರವಲ್ಲದೇ ಕಠಿನ ಶಿಕ್ಷೆಗೆ ಒಳಪಡಿಸಿ ಯುಎಇಯಿಂದ ಗಡಿಪಾರು ಮಾಡಲಾಗುವುದು ಎಂದು ಶಾರ್ಜಾ ರಾಜಕುಮಾರಿ ಶೈಖಾ ಹಿಂದ್ ಈಗಾಗಲೇ ಎಚ್ಚರಿಕೆಯನ್ನೂ ನೀಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.