(ವಿಶ್ವ ಕನ್ನಡಿಗ ನ್ಯೂಸ್ ) : ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶದ ವಾಯುಸೇನೆಯಲ್ಲಿ ಹಿಂದೂ ಒಬ್ಬ ಪೈಲಟ್ ಆಗಿ ಆಯ್ಕೆಯಾಗಿದ್ದಾನೆ. ರಾಹುಲ್ ದೇವ್ ಎಂಬ ಯುವಕನನ್ನು ಪಾಕಿಸ್ತಾನ ವಾಯುಸೇನೆಯಲ್ಲಿ ಜನರಲ್ ಡ್ಯೂಟಿ ಪೈಲಟ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಪಾಕಿಸ್ತಾನದ ಮಾಧ್ಯಮಗಳಲ್ಲಿ, ರಾಹುಲ್ ದೇವ್ ಸಿಂಧ್ ಪ್ರಾಂತ್ಯದ ಅತಿದೊಡ್ಡ ಜಿಲ್ಲೆ ಥಾರ್ಪಾರ್ಕರ್ ಮೂಲದವರು. ಹಿಂದೂ ಸಮುದಾಯದ ಹೆಚ್ಚಿನ ಜನಸಂಖ್ಯೆ ವಾಸಿಸುವ ಸ್ಥಳ ಥಾರ್ಪಾರ್ಕರ್.
ಪಾಕಿಸ್ತಾನ ಹಿಂದೂ ಪಂಚಾಯತ್ ಕಾರ್ಯದರ್ಶಿ ರವಿ ದವಾನಿ ದೇವ್ ಅವರ ನೇಮಕಕ್ಕೆ ಸಂತಸ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತ ಸಮುದಾಯದ ಅನೇಕ ಸದಸ್ಯರು ನಾಗರಿಕ ಸೇವೆಯ ಜೊತೆಗೆ ಸೇನೆಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು.
ದೇಶದ ಅನೇಕ ವೈದ್ಯರು ಹಿಂದೂ ಸಮುದಾಯಕ್ಕೆ ಸೇರಿದವರು. ಸರ್ಕಾರ ಅಲ್ಪಸಂಖ್ಯಾತರತ್ತ ಗಮನ ಹರಿಸುತ್ತಿದ್ದರೆ, ಮುಂದಿನ ದಿನಗಳಲ್ಲಿ ಅನೇಕ ರಾಹುಲ್ ದೇವ್ಗಳು ದೇಶದ ಸೇವೆ ಮಾಡಲು ಸಿದ್ಧರಾಗುತ್ತಾರೆ ಎಂದು ಅವರು ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.