ರಿಯಾದ್(www.vknews.in): ರಂಝಾನ್ ಮಾಸದ ಉಪವಾಸ ನಿರ್ವಹಿಸದ ಕಾರಣಕ್ಕಾಗಿ ಏಷ್ಯಾದ ಮುಸ್ಲಿಮೇತರ ವ್ಯಕ್ತಿಯನ್ನು ನಿಂದಿಸಿದ ಆರೋಪದ ಮೇಲೆ ಸೌದಿ ಪ್ರಜೆಯನ್ನು ತಕ್ಷಣ ಬಂಧಿಸುವಂತೆ ಸೌದಿ ನ್ಯಾಯಾಲಯವು ಆದೇಶಿಸಿದೆ ಎಂದು ಸೌದಿ ಸುದ್ದಿ ಸಂಸ್ಥೆ ಎಸ್ಪಿಎ ಮಂಗಳವಾರ ವರದಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಒಂದರಲ್ಲಿ ಸೌದಿ ಪ್ರಜೆಯೋರ್ವ ಅರೇಬಿಕ್ ಭಾಷೆಯ ಬಗ್ಗೆ ಅಷ್ಟೇನೂ ಜ್ಞಾನವಿಲ್ಲದ ಏಷ್ಯಾ ಮೂಲದ ಮುಸ್ಲಿಮೇತರ ವ್ಯಕ್ತಿಯನ್ನು ಸೌದಿ ಪ್ರಜೆಯೋರ್ವ ಉಪವಾಸ ಮಾಡದಿದ್ದಕ್ಕಾಗಿ ನಿಂಧಿಸುವ ಘಟನೆ ವೈರಲಾಗಿತ್ತು. ಈ ವಿಡಿಯೋದ ಸತ್ಯಾಸತ್ಯತೆಯ ಕುರಿತು ಪರಿಶೀಲಿಸಿದ ಪ್ರಾಸಿಕ್ಯೂಟರ್ ವಿಡಿಯೋ ಅಸಲಿ ಎಂದು ದೃಢಪಟ್ಟ ನಂತರ ವಿಡಿಯೋದಲ್ಲಿರುವ ಸೌದಿ ಪ್ರಜೆಯ ವಿರುದ್ಧ ಬಂಧನದ ವಾರಂಟ್ ಹೊರಡಿಸಿದ್ದಾರೆ.
ನಾಗರೀಕರ ಹಾಗೂ ವಲಸಿಗರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬರುವ ಯಾವುದೇ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲವು ಹೇಳಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.