ಹಾವೇರಿ (www.vknews.com) : ಹೆಣ್ಮಕ್ಕಳೇ ಸ್ಟ್ರಾಂಗ್ ಗುರು ಅನ್ನೋದ್ರಲ್ಲಿ ಡೌಟೇ ಇಲ್ಲ ಬಿಡಿ , ಪೊಲೀಸರ ನಡುವೆ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿ ಮದ್ಯದ ಅಂಗಡಿಗಳ ಮೇಲೆ ನಾರೆಯರು ಕಲ್ಲೆಸೆದು ಮದ್ಯದ ಅಂಗಡಿಗಳನ್ನ ಬಂದ್ ಮಾಡಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಹೌದು ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಎಂಎಸ್ಐಎಲ್ ಮತ್ತು ಎರಡು ಎಂಆರ್ಪಿ ಮದ್ಯದ ಅಂಗಡಿಗಳಿಗೆ ಮಹಿಳೆಯರು ಕಲ್ಲು ತೂರಾಟ ನಡೆಸಿ ಅಂಗಡಿಗಳನ್ನ ಬಂದ್ ಮಾಡಿಸಿ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿ ಕುಡುಕರ ಕಿಕ್ ಇಳಿದಿದ್ದಾರೆ.
ಕರೋನ ಲಾಕ್ಡೌನ್ ಹಿನ್ನೆಲೆ ಒಂದಷ್ಟು ದಿನಗಳು ಮದ್ಯದ ಅಂಗಡಿಗಳು ಬಂದ್ ಆಗಿದ್ದರಿಂದ ಪುರುಷರು ಮನೆಯಲ್ಲಿ ಸುಮ್ಮನಿದ್ದು ಕುಡಿತವನ್ನು ಮರೆಯುವ ಸ್ಥಿತಿಗೆ ತಲುಪಿದ್ದರು. ಆದರೆ ಈಗ ಮದ್ಯದ ಅಂಗಡಿಗಳು ಆರಂಭ ಆಗಿದ್ದರಿಂದ ಮತ್ತೆ ಕುಟುಂಬಗಳು ಬೀದಿಗೆ ಬರುವ ಸಾಧ್ಯತೆ ಇರುವುದರಿಂದ ರೊಚ್ಚಿಗೆದ್ದ ವೀರ ವನಿತೆಯರು ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿ ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿ ತಮ್ಮ ಆಕ್ರೋಶ ಹೊರಹಾಕಿದರು.
ಇನ್ನೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿಯೇ ಇದ್ದರೂ ಕ್ಯಾರೇ ಅನ್ನದ ಮಹಿಳಾ ಮಣಿಯರು ಅಂಗಡಿಗಳನ್ನ ಬಂದ್ ಮಾಡಿಸಿದ್ದ ವಿಡಿಯೋ ಈಗ ಸಕತ್ ವೈರಲ್ ಆಗುತ್ತಿದೆ.
ವರದಿ : ನಯನ್ ಮಹೇಶ್