“2021ರ ಅಂತ್ಯದ ಮೊದಲು ಕೊರೊನವೈರಸ್ ಗೆ ಲಸಿಕೆ ಪಡೆಯುವ ಸಾಧ್ಯತೆಯಿಲ್ಲ” :ವಿಶ್ವ ಆರೋಗ್ಯ ಸಂಸ್ಥೆ

( ವಿಶ್ವ ಕನ್ನಡಿಗ ನ್ಯೂಸ್): ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಲಸಿಕೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾಕಷ್ಟು ದೇಶಗಳು ಪ್ರಯತ್ನ ಪಡುತ್ತಿದ್ದರು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) 2021 ರ ಅಂತ್ಯದ ಮೊದಲು ನಾವು ಲಸಿಕೆ ಪಡೆಯುವ ಸಾಧ್ಯತೆಯಿಲ್ಲ ಎಂದು ಎಚ್ಚರಿಸಿದೆ.

ಯುಎಸ್ನ ಮೂರು ದೊಡ್ಡ ಛೆ ಷಧೀಯ ಕಂಪನಿಗಳು – ಇನೋವಿಯೊ ಮಾಡರ್ನಾ ಮತ್ತು ಫಿಜರ್ – ಈಗಾಗಲೇ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿವೆ ಇದು ಲಸಿಕೆ ಅಭಿವೃದ್ಧಿಪಡಿಸುವ ಮೊದಲ ಹಂತವಾಗಿ ಕಂಡುಬರುತ್ತದೆ. ಯುಕೆ ನಲ್ಲಿ ಸರ್ಕಾರದಿಂದ ಬೆಂಬಲಿತವಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಶರತ್ಕಾಲದ ವೇಳೆಗೆ ಲಸಿಕೆ ತಯಾರಿಸುವ ಗುರಿ ಹೊಂದಿದ್ದಾರೆಂದು ಹೇಳಿದ್ದಾರೆ . ಆದರೆ ಯಾವುದೇ ಪ್ರಯತ್ನ ಕೂಡ ಅತಿ ಶೀಘ್ರದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಂದು ಹೇಳಿದೆ

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...