ಯುಎಇ(ವಿಶ್ವಕನ್ನಡಿಗ ನ್ಯೂಸ್): ಹಿರಿಯ ವಿದ್ವಾಂಸರು ಸೂಫಿವರ್ಯರೂ ಆದ, ನಕ್ಷಬಂದಿ ತ್ವರೀಖತ್ನ ಆತ್ಮೀಯ ನಾಯಕ, ಪ್ರವಾದಿ ಪ್ರೇಮಿ ಶೈಖ್ ಮುಹಮ್ಮದ್ ಈದ್ ಬಿನ್ ಯಅ್ಕೂಬ್ ಅಲ್ ಹುಸೈನಿ ರವರು ಪವಿತ್ರ ರಮಳಾನಿನ 15 ರಂದು ಶುಕ್ರವಾರ ಉಪವಾಸಿಗರಾಗಿ ವಫಾತಾದರು.
ಹುಟ್ಟಿದ್ದು ಪ್ಯಾಲೆಸ್ತೀನ್ನಲ್ಲಿ. ನಂತರ ಸಿರಿಯಕ್ಕೆ ಕುಟುಂಬ ಸಮೇತ ಬಂದು ಜೀವಿಸಿದರು. ಸಿರಿಯಾದಲ್ಲಿ ಬೋಧನಾ ರಂಗದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ಅವರು , ನಂತರ ಜೀವನದ ಕೊನೆಗಳಿಗೆಯಲ್ಲಿ ಯುಎಇಯಲ್ಲಿ ವಾಸವಾಗಿದ್ದರು.
ಅವರ ವಸತಿಯಲ್ಲಿ ನಡೆಯುವ ಧಾರ್ಮಿಕ ತರಗತಿಗಳು, ಆಧ್ಯಾತ್ಮಿಕ ಶಿಬಿರಗಳು, ಪ್ರವಾದಿ ಪ್ರೇಮ ಸ್ಪುರಿಸುವ ಮದ್ಹ್ ಸಂಗಮಗಳು ಸಾವಿರಾರು ಜನರ ಬದುಕನ್ನು ಬೆಳಗಿಸಿತ್ತು.
ಸಮಯ ನಿಮ್ಮನ್ನು ಕೊಲ್ಲುವ ಮುಂಚೆ ನೀವು ಸಮಯವನ್ನು ಸದುಪಯೋಗಪಡಿಸಿ. ನಿಮ್ಮ ಎಲ್ಲಾ ಆಟಗಳು ಕೊನೆಗೊಳ್ಳಲಿದೆ. ಅಲ್ಲಾಹನನ್ನು ಕಾಣುವ ಮೊದಲು ನೀವು ಬದಲಾಗಿರಿ..ಇದು ತನ್ನನ್ನು ಕಾಣಲು ಬರುವವರೊಂದಿಗೆ ಅವರು ನೀಡುವ ಉಪದೇಶವಾಗಿತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.