ತುಮಕೂರು : ಕರೋನವೈರಸ್ ಸಂಪರ್ಕವನ್ನು ನಿಯಂತ್ರಣ ಮಾಡಲು ಜಿಲ್ಲಾಡಳಿತ ಎಷ್ಟೇ ಕ್ರಮವನ್ನು ಕೈಗೊಂಡರು ಹತೋಟಿಗೆ ಮಾತ್ರ ಬರುತ್ತಿಲ್ಲ. ಒಂದು ಖುಷಿಯ ವಿಚಾರವೆಂದರೆ ಆರಂಭದಿಂದಲೂ ತುಮಕೂರು ಆರೆಂಜ್ ವಲಯವಾಗಿ ಗುರುತಿಸಿಕೊಂಡಿದ್ದು, ಆದರೆ ಇತ್ತೀಚಿನ ಬೆಳವಣಿಗೆಯನ್ನು ನೋಡಿದರೆ ಕೆಂಪು ವಲಯವನ್ನು ಸೇರುವ ಎಲ್ಲ ಲಕ್ಷಣ ಕಾಣುತ್ತಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಬಿಡುಗಡೆ ಮಾಡಿರುವ ಕೋವಿಡ್ 19 ಕುರಿತ ಇಂದಿನ ವರದಿಯಲ್ಲಿ ತುಮಕೂರಿನ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು ಜಿಲ್ಲೆಯ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
P-764 ಸೋಂಕು ತಗುಲಿದ 45 ವರ್ಷದ ಪುರುಷ ಎಂದು ಗುರುತಿಸಲಾಗಿದೆ. ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಈ ವ್ಯಕ್ತಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಕರೋನವೈರಸ್ ಪಾಸಿಟಿವ್ ಸಂಖ್ಯೆ 8 ಕ್ಕೆ ಏರಿಕೆಯನ್ನು ಕಂಡಿದೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.