(www.vknews.com) : ಕೋಲಾರದಲ್ಲಿಇನ್ನೂ ಕೆಲವೇ ದಿನಗಳಲ್ಲಿ ಮಾವಿನ ಕೊಯ್ಲ ಪ್ರಾರಂಭವಾಗುತ್ತಿದ್ದು, ಮಾವಿನ ಕೊಯ್ಲಿನ ಸಮಯದಲ್ಲಿ ಮತ್ತುಕೊಯ್ಲಿನ ನಂತರ ಮಾವು ಬೆಳೆಗಾರರು ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಮಾವು ಬೆಳೆಯಲ್ಲಿ ಹೆಚ್ಚಿನಆದಾಯ ಗಳಿಸಬಹುದಾಗಿದೆ.
ಮಾವಿನ ಬಾದಾಮಿ ತಳಿಯಲ್ಲಿ ‘ಸ್ಪಂಜು ಅಂಗಾಂಶ’ ಎಂಬ ಶಾರೀರಿಕತೊಂದರೆ ಹೆಚ್ಚಾಗಿ ಕಂಡುಬರುತ್ತಿದ್ದು, ಇದನ್ನು ನಿವಾರಿಸಲು ಮಾವು ಬೆಳೆಗಾರರು ಬಾದಾಮಿ ತಳಿಯ ಮಾವಿನ ಕಾಯಿ 3/4 ರಷ್ಟು ಪಕ್ವವಾದಾಗಕಟಾವು ಮಾಡಬೇಕು ಮತ್ತುಕಟಾವಿನ ನಂತರ ನೇರವಾದ ಸೂರ್ಯನಕಿರಣ/ತಾಪದಿಂದರಕ್ಷಿಸಬೇಕು. ಕಟಾವಾದ ಕಾಯಿಗಳನ್ನು ಕಡಿಮೆತಾಪಮಾನಕ್ಕೆ (10-150 ಸೆಲ್ಸಿಯಸ್) 10 ರಿಂದ 18 ಗಂಟೆಯ ಕಾಲ ಒಡ್ಡುವುದರಿಂದ ‘ಸ್ಪಂಜು ಅಂಗಾಂಶ’ ವನ್ನು ನಿವಾರಿಸಬಹುದು.
ಮಾವಿನ ಕಾಯಿಯನ್ನುತೊಟ್ಟು ಸಮೇತಕೊಯ್ಯುವುದರಿಂದ ಸೊನೆಯಿಂದ ಮುಕ್ತಗೊಳಿಸಿ ಕಾಯಿಯಗುಣಮಟ್ಟ ಮತ್ತುಆಕರ್ಷಣೆಯನ್ನು ಹೆಚ್ಚಿಸಬಹುದು ಹಾಗೂ ಇದರಿಂದಕಟಾವಿನ ನಂತರ ಭಾದಿಸುವ ರೋಗಗಳನ್ನು ತಕ್ಕಮಟ್ಟಿಗೆ ನಿರ್ವಹಿಸಬಹುದು. ಭಾರತೀಯತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಅಭಿವೃದ್ದಿಪಡಿಸಿರುವ ಸುಧಾರಿತ ಮಾವುಕೊಯ್ಲು ಸಾಧನ (ಕತ್ತರಿಸುವ ಬ್ಲೇಡ್ ಮತ್ತುಅದರಅಡಿಯಲ್ಲಿಚೀಲವನ್ನು ಹೊಂದಿರುವಉದ್ದನೆಯ ಕೋಲು) ವನ್ನು ಬಳಸಿ ಕೊಯ್ಲು ಮಾಡುವುದುಉತ್ತಮ. ಇದು ಸುಲಭ ವಿಧಾನವಾಗಿದ್ದುಒಂದು ಇಂಚು ಉದ್ದದತೊಟ್ಟಿನೊಂದಿಗೆಕೊಯ್ಲು ಮಾಡುವುದರಿಂದ ಮಾವಿನ ಶೇಖರಣಾ ಸಾಮಥ್ರ್ಯವನ್ನು ಹೆಚ್ಚಿಸುವುದು. ಈ ಸಾಧನವುಒಂದುಗಂಟೆಗೆ 100 ಕೆ.ಜಿ. ಯಷ್ಟುಕೊಯ್ಲು ಮಾಡುವ ಸಾಮಥ್ರ್ಯಹೊಂದಿದ್ದುಇದರ ಬಳಕೆಯಿಂದ ಸಮಯ ಉಳಿತಾಯವಾಗುವುದರ ಜೊತೆಗೆ ಶೇಕಡಾ 50 ರಷ್ಟು ಕೂಲಿಯಾಳುಗಳ ಉಳಿತಾಯವಾಗುವುದು. ಇದನ್ನು ಬಳಸುವುದರಿಂದ ಮರ ಹತ್ತುವಅವಶ್ಯಕತೆಇರುವುದಿಲ್ಲ.
ಕಟಾವಿನ ನಂತರ ಮಾವಿನಕಾಯಿಗಳನ್ನು ಒಂದೆರಡು ಗಂಟೆಗಳ ಕಾಲ ನೆರಳಿನಲ್ಲಿಡಬೇಕು. ಕಾಯಿಗಳ ಮೇಲೆ ಸೊನೆ ಅಂಟಿಕೊಡಿದ್ದರೆ ನೀರಿನಲ್ಲಿಚೆನ್ನಾಗಿ ತೊಳೆಯಿರಿ ನಂತರ 550 ಸೆಂಟಿಗ್ರೇಡ್ಉಷ್ಣತೆಯ ಬಿಸಿನೀರಿನಲ್ಲಿ 5 ನಿಮಿಷಗಳ ಕಾಲ ಮುಳುಗಿಸಿ ನಂತರ ಬಟ್ಟೆಯಿಂದಒರಸಬೇಕು. ಈ ರೀತಿ ಮಾಡುವುದರಿಂದತೊಟ್ಟಿನ ಬುಡ ಕೊಳೆ ರೋಗವನ್ನು ಹತೋಟಿಯಲ್ಲಿಡಬಹುದು ಹಾಗೂ ಸಿಪ್ಪೆಯ ಅಡಿಯಲ್ಲಿ ಹಣ್ಣು ನೊಣ ಮೊಟ್ಟೆಇಟ್ಟಿದ್ದರೆಅದು ನಾಶವಾಗುವುದು.
ಮಾವಿನ ಕಾಯಿಗಳನ್ನು 18 ರಿಂದ 24 ಗಂಟೆಯತನಕಎಥಿಲೀನ್ ಅನಿಲಕ್ಕೆ ಒಡ್ಡುವುದರಿಂದ ಕಾಯಿಗಳನ್ನು ಸಮನಾಂತರವಾಗಿ ಮಾಗಿಸಬಹುದು. ಇದಕ್ಕಾಗಿ ಭಾರತೀಯತೋಟಗಾರಿಕಾ ಸಂಶೋಧನಾ ಸಂಸ್ಥೆಯು ಮಾವು ಮಾಗಿಸುವಕೊಠಡಿ/ಘಟಕಗಳನ್ನು ಅಭಿವೃದ್ಧಿಪಡಿಸಿದೆ. ಈ ಮುಚ್ಚಿದಕೊಠಡಿಗಳಲ್ಲಿ ಇಥ್ರೇಲ್ ಮತ್ತು ಕಾಸ್ಟಿಕ್ ಸೋಡದ ಬಳಕೆಯಿಂದ ಎಥಿಲೀನ್ ಅನೀಲ ಉತ್ಪನ್ನವಾಗಿ ಹಣ್ಣಾಗುವುದು. ಈ ಘಟಕವುಒಂದುಟನ್ ಸಾಮಥ್ರ್ಯವುಳ್ಳ 4 ಘನ ಮೀ. ಅಳತೆಯ ಕಡಿಮೆ ವೆಚ್ಚದ ಹಣ್ಣು ಮಾಗಿಸುವಘಟಕವಾಗಿದೆ.
ಮಾವಿನ ಹಣ್ಣುಗಳನ್ನು 130 ಸೆಂಟಿಗ್ರೇಡ್ತಾಪಮಾನ ಹಾಗೂ 85-95% ಆದ್ರ್ರತೆಯಲ್ಲಿ ಮಾವಿನ ಹಣ್ಣನ್ನು 4 ವಾರದ ವರೆಗೂಉತ್ತಮರೀತಿಯಲ್ಲಿ ಶೇಖರಣೆ ಮಾಡಬಹುದು. ಶೇಕಡ 7 ರಷ್ಟು ಪ್ಯಾರಾಫಿನ್ ಮೇಣದದ್ರಾವಣದೊಂದಿಗೆ ಹಣ್ಣುಗಳನ್ನು ಲೇಪನ ಮಾಡುವುದರಿಂದ ಹಣ್ಣುಗಳ ಸಂಗ್ರಹಣಾ ಸಾಮಥ್ರ್ಯ ಹೆಚ್ಚುವುದು.
ಮಾವಿನ ಹಣ್ಣುಗಳನ್ನು ರಫ್ತು ಮಾಡಲು ಹಣ್ಣಿನತೂಕದಆಧಾರದ ಮೇಲೆ ಎಕ್ಸ್ಟ್ರಾಕ್ಲಾಸ್- 551-800 ಗ್ರಾಂ, ಕ್ಲಾಸ್I- 351-550 ಗ್ರಾಂ ಮತ್ತುಕ್ಲಾಸ್II- 200-350 ಗ್ರಾಂಎಂದು ವರ್ಗೀಕರಿಸಲಾಗುವುದು.
ನೂಲುಯುಕ್ತಕಾಗದದರಟ್ಟಿನ ಪೆಟ್ಟಿಗೆಯಲ್ಲಿಒಂದುಅಥವಾಎರಡು ಪದರಗಳಲ್ಲಿ 4 ಅಥವಾ 16 ಕೋಶಗಳಾಗಿ ವಿಂಗಡಿಸಿ ಪ್ರತಿ ಪೆಟ್ಟಿಗೆಯಲ್ಲೂ 25 ಅಥವಾ 32 ಹಣ್ಣುಗಳನ್ನು ಜೋಡಿಸಿ ರವಾನಿಸುತ್ತಾರೆ. ಈ ರೀತಿಯ ಪೆಟ್ಟಿಗೆಯಗಾತ್ರ ಸಾಮಾನ್ಯವಾಗಿ 45x26x17 ಸೆಂ.ಮೀ. ಅಥವಾ 32x27x10 ಸೆಂ.ಮೀ. ಇರುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.