ತೋಪಲಕಟ್ಟಿಯಲ್ಲಿ ಸಿಡಿಲು ಬಡಿದು ಮೃತಪಟ್ಟ ರೈತನ ಕುಟುಂಬಕ್ಕೆ ಪರಿಹಾರ

ಕುಷ್ಟಗಿ (www.vknews.com) : ತಾಲೂಕಿನ ತೋಪಲಕಟ್ಟಿ ಗ್ರಾಮದಲ್ಲಿ ಭಾರಿ ಮಳೆ ಆರ್ಭಟಕ್ಕೆ ಸಿಡಿಲು ಬಡಿದು ಓರ್ವ ರೈತ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ಜರುಗಿದೆ. ಮತ್ತೊಬ್ಬ ರೈತನಿಗೆ ಗರ್ಭಿರ ಗಾಯ ಹುಟ್ಟು ಸಾವು ಮದ್ಯ ಹೋರಾಟ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಮದೇ ಸ್ವಂತ ಹೊಲದಲ್ಲಿ ಹೆಸರು ಬಿತ್ತುಲು ಹೋದಾಗ ಇಂದು ಸಂಜೆ ೪ ಗಂಟೆಯ ಸುಮಾರಿಗೆ ಬಡಿದ ಸಿಡಿಲಿಗೆ ರೈತ ಮುದಿಯಪ್ಪ ಮಲಿಯಪ್ಪ ಟಕ್ಕಳಕಿ ವಯಸ್ಸು (32) ಸ್ಥಳದಲ್ಲೆ‌ ಸಾವನ್ನಪ್ಪಿದ್ದಾನೆ.

ತೋಪ್ಪಲಕಟ್ಟಿ ಗ್ರಾಮದ ಬೀಮಪ್ಪ ಎಂಬ ರೈತನ ಮಗನಾದ ಮಲ್ಲಪ್ಪ ಬೀಮಪ್ಪ ಟಕ್ಕಳಕಿ ವಯಸ್ಸು (34) ಎಂಬ ರೈತನಿಗೆ ಗಂಭೀರ ಗಾಯದಿಂದ ಪ್ರಾಣ ಹಾನಿ ಹುಟ್ಟು ಸಾವು ಮದ್ಯ ಹೋರಾಟ ಓರ್ವ ರೈತ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ತೋಪಲಕಟ್ಟಿ ಗ್ರಾಮಕ್ಕೆ ಕುಷ್ಟಗಿ ಮತಕ್ಷೇತ್ರ ಶಾಸಕರಾದ ಅಮರೇಗೌಡ ಬಯ್ಯಾಪೂರು, ಕುಷ್ಟಗಿ ತಹಶಿಲ್ದಾರರ ಎಂ. ಶಿದ್ದೇಶ್ವರ ಮೃತನ ಮನೆಗೆ ಬೇಟಿ ಸಾಂತ್ವನ ಹೇಳಿ ಸಿಡಿಲು ಬಡಿದು ಮೃತಪಟ್ಟಿದ್ದ ಸಣ್ಣಹನಮಪ್ಪ ತಂದೆ ಮಲಿಯಪ್ಪ ಟಕ್ಕಳಕಿಯವರ ಪತ್ನಿಯವರಾದ ಮಲ್ಲಮ್ಮ ಗಂ ಸಣ್ಣಹನಮಪ್ಪ ಟಕ್ಕಳಕಿ ಇವರಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂಗಳ ಪರಿಹಾರ ಚೆಕ್ ವಿತರಿಸಲಾಯಿತು.

ವರದಿ: ಮರಿಗೌಡ ಬಾದರದಿನ್ನಿ

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...