ಕೊರೋನಾ ನಿರ್ವಹಣೆಗೆ 50 ಸಾವಿರ ದೇಣಿಗೆ

ಧಾರವಾಡ (www.vknews.com) : ಇಲ್ಲಿಗೆ ಸಮೀಪದ ಮರೇವಾಡ ಗ್ರಾಮದ ಶ್ರೀಬಸವಣ್ಣ (ನಂದೀಶ್ವರ) ದೇವರ ಜಾತ್ರಾ ಮಹೋತ್ಸವಕ್ಕೆ ಸದ್ಭಕ್ತರು ಸಲ್ಲಿಸಿದ 50 ಸಾವಿರ ರೂ.ಗಳ ಹಣವನ್ನು ಕೊರೋನಾ ನಿಯಂತ್ರಣದ ನಿರ್ವಹಣೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಲಾಯಿತು.

ಮೇ 11 ರಂದು ಆಗಿಹುಣ್ಣಿಮೆಯ ದಿನ ನಡೆಯಬೇಕಿದ್ದ ಮರೇವಾಡ ಗ್ರಾಮದ ಶ್ರೀಬಸವಣ್ಣ (ನಂದೀಶ್ವರ) ದೇವರ ಜಾತ್ರಾ ಮಹೋತ್ಸವವನ್ನು ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಸಮಸ್ತ ಗ್ರಾಮಸ್ಥರ ಪರವಾಗಿ 50 ಸಾವಿರ ರೂ.ಗಳ ಚೆಕ್ಕನ್ನು ತಾಲೂಕಾ ದಂಡಾಧಿಕಾರಿ ಸಂತೋಷಕುಮಾರ ಬಿರಾದಾರ ಅವರಿಗೆ ಸಲ್ಲಿಸಲಾಯಿತು. ಕಂದಾಯ ನಿರೀಕ್ಷಕ ರಮೇಶ ಬಂಡಿ, ಮರೇವಾಡ ಗ್ರಾಮದ ಹಿರಿಯರಾದ ರುದ್ರಪ್ಪ ಕುಂದಗೋಳ, ಕುಶಾಲ ಕೋರಕೊಪ್ಪ, ಚಂದ್ರಶೇಖರ ಹೆಬ್ಬಾಳ, ಮಲ್ಲಿಕಾರ್ಜುನ ಅಮರಗೋಳ, ಬಸವರಾಜ ಮಾದನಬಾವಿ, ಮಲ್ಲಿಕಾರ್ಜುನ ಭಂಡಿವಾಡ, ಚೆನ್ನಬಸಪ್ಪ ಹೆಬ್ಬಾಳ, ಜಗದೀಶ ಕುಂದಗೋಳ, ನಾಗರಾಜ ನೀಲಣ್ಣವರ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...