(www.vknews.com) : ರಸ್ತೆಯಲ್ಲಿ ನವಿಲುಗಳು ನರ್ತನ ದಿಂದ ಟ್ರಾಫಿಕ್ ಜಾಮ್ ಆಗಿದ್ದು, ವನ್ಯ ಜೀವಿಗಳು ರಸ್ತೆಯನ್ನು ತಮ್ಮದಾಗಿಸಿಕೊಂಡಿವೆ
ಹೌದು ವಾಹನಗಳಿಂದ ಟ್ರಾಫಿಕ್ ಜಾಮ್ ಉಂಟಾಗುವುದು ಸಾಮಾನ್ಯ. ಆದರೆ ಇದೀಗ ಲಾಕ್ಡೌನ್ನಿಂದಾಗಿ ಇದೀಗ ಹತ್ತಾರು ನವಿಲುಗಳ ಗುಂಪು ರಸ್ತೆಯಲ್ಲೇ ನರ್ತಿಸಿ, ನಲಿದು ಊಹಿಸಲಾಗದ ಟ್ರಾಫಿಕ್ ಜಾಮ್ ಉಂಟು ಮಾಡಿರುವ ಘಟನೆಯೊಂದು ನಡೆದಿದೆ.
ಯಾರ ಭಯವಿಲ್ಲದೆ ಹತ್ತಾರು ನವಿಲುಗಳು ರಸ್ತೆಯಲ್ಲೇ ನರ್ತಿಸಿ, ನಲಿದು ಗರಿಬಿಚ್ಚಿ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ರಸ್ತೆ ತುಂಬೆಲ್ಲ ನವಿಲುಗಳದ್ದೇ ಕಾರುಬಾರು ಎನ್ನುವಂತಾಗಿದ್ದು, ಗುಂಪಾಗಿ ಸೇರಿಕೊಂಡು ಫುಲ್ ಟ್ರಾಫಿಕ್ ಜಾಮ್ ಮಾಡಿವೆ. ಸಾಮಾನ್ಯ ದಿನಗಳಲ್ಲಿ ವಾಹನಗಳ ಟ್ರಾಫಿಕ್ ಜಾಮ್ ನೋಡುತ್ತಿದ್ದ ಜನತೆ ನವಿಲುಗಳ ಟ್ರಾಫಿಕ್ ಜಾಮ್ ಕಂಡು ಆಶ್ಚರ್ಯಚಿಕಿತರಾಗಿದ್ದಾರೆ. ನವಿಲುಗಳ ಸೌಂದರ್ಯವನ್ನು ಕಂಡು ಮಾರುಹೋಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.