ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಪುತ್ತೂರು ನಗರ, ಸಂಚಾರ, ಮಹಿಳಾ ಪೊಲೀಸ್ ಠಾಣೆ ಸೇರಿ 8 ಮಂದಿ ಪೊಲೀಸ್ ಸಿಬ್ಬಂಧಿಗಳು ಹೋಮ್ ಕ್ವಾರಂಟೈನ್ ಗೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಹೊರರಾಜ್ಯದಿಂದ ಬಂಧು ಹೋಮ್ ಕ್ವಾರಂಟೈನ್ ಆಗಿರುವವರ ಮಾಹಿತಿ ಪಡೆಯುವ ಕಾರ್ಯ ನಡೆಸಿದ ಹಾಗೂ ಗಡಿ ಭಾಗಗಳಲ್ಲಿ ಕಾರ್ಯನಿರತ ಪೊಲೀಸ್ ಸಿಬ್ಬಂಧಿಗಳಿಗೆ ಇಲಾಖಾ ನಿರ್ದೇಶನದಂತೆ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಕೆಲವರಿಗೆ ಜ್ವರ, ಶೀತ ಗಂಟಲು ನೋವಿನಿಂದಾಗಿ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕಾಗಿದೆ.
ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರತರಾದ ಓರ್ವ ಪೊಲೀಸ್ ಹಾಗೂ ಮಹಿಳಾ ಪೊಲೀಸ್ ಠಾಣೆಯಲ್ಲಿ ಜ್ವರ ಶೀತ ಬಾಧೆಗೆ ಸಂಬಂಧಿಸಿ ಇಬ್ಬರು ಪೊಲೀಸರು, ಮಡಿಕೇರಿಯಲ್ಲಿನ ಸೋಂಕಿತನ ಸಂಪರ್ಕ ಹೊಂದಿದ ವಿಚಾರಕ್ಕೆ ಸಂಬಂಧಿಸಿ ಓರ್ವನನ್ನು ಸೇರಿ ಪುತ್ತೂರು ಪೊಲೀಯ್ ಠಾಣೆಯಲ್ಲಿ ಒಟ್ಟು 8 ಮಂದಿ ಪೊಲೀಸರು ಹೋಮ್ ಕ್ವಾರಂಟೈನ್ ಗೆ ತೆರಳಿದ್ದಾರೆ ಎಂದು ತಿಳಿದಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.