ಕೊಲ್ಲಂ(www.vknews.in): ಕೇರಳದ ಕೊಲ್ಲಂ ನಿವಾಸಿ ಸೂರಜ್(27) ತನ್ನ ಪತ್ನಿ ಉತ್ತರಳನ್ನು ಕೊಲ್ಲಲು ಬಳಸಿದ ಉಪಾಯವು ಎಂತಹವರನ್ನೂ ಕೂಡ ಬೆಚ್ಚಿ ಬೀಳಿಸುವಂತಿದೆ. ಮೇ 24 ರಂದು ಸೂರಜ್ ಪತ್ನಿ ಉತ್ತರ ತನ್ನ ತಾಯಿಯ ಮನೆಯಲ್ಲಿ ವಿಷಪೂರಿತ ಹಾವಿನ ಕಡಿತಕ್ಕೊಳಗಾಗಿ ಮೃತಪಟ್ಟಿದ್ದಳು. ಇದು ಸಹಜ ಸಾವೆಂದು ಮನೆಯವರು ಸುಮ್ಮನಿರುತ್ತಿದ್ದರು ಆದರೆ ಉತ್ತರ ಎರಡು ತಿಂಗಳ ಹಿಂದೆ ಕೂಡ ಹಾವಿನ ಕಡಿತಕ್ಕೊಳಗಾಗಿ ಅಪಾಯದಿಂದ ಪಾರಾಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿತು.
ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಸೂರಜ್ ತನ್ನ ಪತ್ನಿ ಉತ್ರಾಳನ್ನು ಕೊಲ್ಲಲು ಹಾವಾಡಿಗನಿಂದ ಹಾವೊಂದನ್ನು ಖರೀದಿಸಿದ್ದಾನೆ ಮತ್ತು ಅಂತರ್ಜಾಲದಲ್ಲಿ ಹಾವಿನ ವಿಡಿಯೋವನ್ನೂ ನೋಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆಕೆಯ ಹಣ ಮತ್ತು ಚಿನ್ನವನ್ನು ತೆಗೆದುಕೊಂಡು ಬೇರೊಬ್ಬಳನ್ನು ಮದುವೆಯಾಗುವುದು ಅವನ ಯೋಜನೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೇ 7 ರಂದು ಕೊಲ್ಲಂನಲ್ಲಿರುವ ತನ್ನ ಮನೆಯಲ್ಲಿ ಉತ್ರಾ ಶವವಾಗಿ ಪತ್ತೆಯಾಗಿದ್ದಳು, ಆಕೆಗೆ ಹಾವು ಕಚ್ಚಿದೆ ಎಂದು ಆಕೆಯ ಕುಟುಂಬಕ್ಕೆ ತಿಳಿದಾಗ, ಅವರು ಅನುಮಾನಾಸ್ಪದರಾದರು. ಮಾರ್ಚ್ ನಲ್ಲಿಯೂ ಕೂಡ ಆಕೆ ಹಾವು ಕಡಿತಕ್ಕೊಳಗಾಗಿದ್ದಳು. ಅವರಿಗೆ ಒಂದು ವರ್ಷದ ಮಗನಿದ್ದನು.
ಪೊಲೀಸರು ಈ ಪ್ರಕರಣವನ್ನು ಭೇದಿಸಲು ಪ್ರಾರಂಭಿಸಿದಾಗ, 27 ವರ್ಷದ ಸೂರಜ್ ಫೆಬ್ರವರಿ ಅಂತ್ಯದಲ್ಲಿ ಪತ್ನಿಯನ್ನು ಕೊಲ್ಲಲು ಮೊದಲ ಪ್ರಯತ್ನವನ್ನು ಮಾಡಿದ್ದನು ಎಂಬ ಅಂಶ ಬೆಳಕಿಗೆ ಬಂತು. ಹಾವಾಡಿಗ ತನ್ನ ಸ್ನೇಹಿತ ಸುರೇಶ್ ಸಹಾಯದಿಂದ ಹೆಚ್ಚು ವಿಷಪೂರಿತ ಹಾವೊಂದನ್ನು ಖರೀದಿಸಿದ ಸೂರಜ್ ಹಾವನ್ನು ಉತ್ರಾಳು ಮಲಗಿದ ಕೊಠಡಿಯೊಳಗಿಟ್ಟ. ಹಾವು ಕಡಿತಕ್ಕೊಳಗಾಗಿ ಚೀರಿದಾಗ ನಾಟಕವಾಡಿದ ಸೂರಜ್ ಉತ್ರಾಳನ್ನು ಆಸ್ಪತ್ರೆಗೆ ಸೇರಿಸುತ್ತಾನೆ. ಒಂದು ತಿಂಗಳ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಹೊಂದಿದ ಉತ್ರ ತನ್ನ ಹೆತ್ತವರ ಮನೆಗೆ ಹೋಗುತ್ತಾಳೆ.
ಮೊದಲ ಪ್ರಯತ್ನದಲ್ಲಿ ವಿಫಲನಾದ ಸೂರಜ್ ಅದೇ ಸ್ನೇಹಿತನಿಂದ ಏಪ್ರಿಲ್ ನಲ್ಲಿ ಮತ್ತೊಂದು ನಾಗರಹಾವನ್ನು ಖರೀದಿಸುತ್ತಾನೆ. ಮೇ 6 ರಂದು ಸೂರಜ್ ಮಲಗಿದ್ದ ತನ್ನ ಹೆಂಡತಿಯ ಮೇಲೆ ಹಾವನ್ನು ಎಸೆಯುತ್ತಾನೆ. ಈ ಬಾರಿ ಹಾವು ಕಡಿತಕ್ಕೊಳಗಾದ ಉತ್ರ ಸಾವನ್ನಪ್ಪುತ್ತಾಳೆ. ಮಗಳ ಸಾವಿನಿಂದ ಸಂಶಯಗೊಂಡ ಉತ್ರಾಳ ಹೆತ್ತವರು ಪೊಲೀಸರಿಗೆ ದೂರು ನೀಡುತ್ತಾರೆೆ. ಪ್ರಾಥಮಿಕ ತನಿಖೆಗಾಗಿ ಪೊಲೀಸರು ಪತಿ ಸೂರಜ್ ನನ್ನು ತನಿಖೆ ನಡೆಸುತ್ತಾರೆೆ. ಅಲ್ಲಿ ಹೊರಬಿತ್ತ ನೋಡಿ ಭಯಾನಕ ಕಥೆ.
ಶ್ರೀಮಂತ ಮನೆತನದ ಅಂಗವಿಕಲೆ ಉತ್ರಳನ್ನು ಎರಡು ವರ್ಷದ ಹಿಂದೆ ನಾನು 100 ಪವನ್ ಚಿನ್ನ, 5 ಲಕ್ಷ ನಗದು ಹಾಗೂ ಒಂದು ಕಾರು ವರದಕ್ಷಿಣೆಯಾಗಿ ಪಡೆದು ಮಗುವೆಯಾಗಿದ್ದೇನೆ. ಬೇರೊಂದು ಹೆಣ್ಣನ್ನು ಮದುವೆಯಾಗುವ ಸಲುವಾಗಿ ತಾನು ಪತ್ನಿಯನ್ನು ಕೊಲ್ಲಲು ನಿರ್ಧರಿಸಿ ಈ ಕೃತ್ಯ ಎಸಗಿದ್ದೇನೆ. ಉತ್ರಳನ್ನು ಕೊಲ್ಲದೇ ಇನ್ನೊಬ್ಬಳನ್ನು ಮದುವೆಯಾದರೆ ತಾನು ಪಡೆದಿದ್ದ ವರದಕ್ಷಿಣೆಯನ್ನು ಹಿಂದಿರುಗಿಸ ಬೇಕಾಗಬಹುದೆಂಬ ಭಯದಿಂದ ಈ ಕೃತ್ಯ ಎಸಗಿದ್ದಾಗಿ ಆರೋಪಿ ಸೂರಜ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ಜಾನೆ. ಇಷ್ಟೆಲ್ಲಾ ರಂಪಾಟ ಮಾಡಿ ಕೈಹಿಡಿದ ಪತ್ನಿಯನ್ನು ಕೊಂದ ಭೂಪ ಇದೀಗ ಜೈಲಿನ ಕಂಬಿ ಎಣಿಸುತ್ತಿದ್ದಾನೆ.