(www.vknews.com) : ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಹೆರಗನಹಳ್ಳಿ ಗ್ರಾಮದಲ್ಲಿ ರಾತ್ರಿ ವೇಳೆ ಇದ್ದಕಿದ್ದಂತೆ ಬೆಳಕು ಗೋಚರಿಸಿ ಹಗಲಿನಂತೆ ಕಂಡುಬಂದಿರುವ ಘಟನೆ ನಡೆದಿದೆ. ಸುಮಾರು ರಾತ್ರಿ 7.15ರ ಸಮಯದಲ್ಲಿ ದಿಢೀರ್ ಬೆಳಕು ಬಂದಿದೆ ಇದನ್ನ ನೋಡಿದ ಗ್ರಾಮಸ್ಥರು ಅಚ್ಚರಿಗೊಳಗಾಗಿದ್ದಾರೆ.
ಗ್ರಾಮದಲ್ಲಿ ರಾತ್ರಿ ಆಗಿದ್ದರಿಂದ ಬೀದಿದೀಪಗಳನ್ನು ಉರಿಸಲಾಗಿತ್ತು, ರಾತ್ರಿ ವೇಳೆ ಸುಮಾರು 5 ನಿಮಿಷಗಳ ಕಾಲ ಬೆಳಕು ಗೋಚರಿಸಲಾಗಿತ್ತು ಎಂದು ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ. ಬೆಳಕಿನ ತೀವ್ರತೆ ಮಧ್ಯಾಹ್ನದ ವೇಳೆ ಸೂರ್ಯನ ಬೆಳಕಿರುವಂತೆ ಕಂಡಿದೆ
ಕೂಡಲೇ ಗ್ರಾಮದ ಯುವಕರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿಯೇ ಹರಿ ಬಿಟ್ಟಿದ್ದಾರೆ ಇನ್ನೂ ಅಕ್ಕಪಕ್ಕದ ಗ್ರಾಮಗಳಲ್ಲೂ ಬೆಳಕು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಉಲ್ಕೆಗಳ ಡಿಕ್ಕಿ ಸಂಭವಿಸಿ ಬೆಳಕು ಬಂದಿದೆ ಎಂದು ಅಂದಾಜಿಸಲಾಗಿದೆ. ಅಕ್ಕಪಕ್ಕದ ಗ್ರಾಮಗಳಾದ ಬಸ್ಥಿ ಹೊಸಕೋಟೆ, ನಲ್ಲೆಗೆರೆ ಗ್ರಾಮದಲ್ಲೂ ಬೆಳಕು ಮೂಡಿದೆ ಎನ್ನಲಾಗಿದೆ.