ಮದೀನಾ(ವಿಶ್ವಕನ್ನಡಿಗ ನ್ಯೂಸ್): ಮುಂದಿನ ಸೂಚನೆ ಬರುವವರೆಗೂ ಸಾರ್ವಜನಿಕರು ಮಸ್ಜಿದುನ್ನಬವಿಗೆ ಪ್ರವೇಶಿಸುವುದನ್ನು ಅಮಾನತುಗೊಳಿಸಲಾಗಿದೆ ಎಂದು ಮಸ್ಜಿದುನ್ನಬವಿ ನಿಯಂತ್ರಣ ಮಂಡಳಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.
ಸೌದಿ ಅರೇಬಿಯಾ ಈ ವಾರ ಪ್ರಕಟಿಸಿದ ಕರ್ಪ್ಯೂ ಸಡಿಲಿಕೆಯಲ್ಲಿ ಮಕ್ಕಾ ಮಸೀದಿ ಹೊರತುಪಡಿಸಿ ಇತರ ಮಸೀದಿಗಳನ್ನು ತೆರೆಯಲು ಅನುಮತಿಸಿತ್ತು. ಇದರಿಂದಾಗಿ ಸೌದಿ ಅರೇಬಿಯಾದಲ್ಲಿರುವ ಪ್ರಜೆಗಳು ಮದೀನಾ ಸಂದರ್ಶನಕ್ಕೆ ಖಾತರದಿಂದ ಕಾಯುತ್ತಿದ್ದರು. ಈಗ ಮಸ್ಜಿದುನ್ನಬವಿ ಸಾರ್ವಜನಿಕರಿಗೆ ಪ್ರವೇಶಕ್ಕೆ ತೆರೆಯುವುದಿಲ್ಲ ಎಂಬ ಪ್ರಕಟನೆ ತಿಳಿಸಿದೆ.
ಸೌದಿ ಅರೇಬಿಯಾದಲ್ಲಿ ಕೊರೋನಾ ಸಾಂಕ್ರಮಿಕ ವೈರಸ್ ಹರಡದಂತೆ ತಡೆಯಲು ಮಾರ್ಚ್ 19 ರಿಂದ ಮಕ್ಕಾದ ಹರಂ ಮಸೀದಿ ಮತ್ತು ಮದೀನಾದ ಮಸ್ಜಿದುನ್ನಬವಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದೆ. ಆದರೆ ಶುಕ್ರವಾರ ಪ್ರಾರ್ಥನೆಗಳು ಮತ್ತು ದಿನದ ಐದು ಹೊತ್ತಿನ ಪ್ರಾರ್ಥನೆಗಳು ಇಮಾಮ್ಗಳು ಮತ್ತು ನೌಕರರು ಸೇರಿ ನಡೆಯುತ್ತಿದ್ದವು.
ಸರಿಯಾದ ಮೂಲಗಳಿಂದ ಮಾತ್ರ ಮಾಹಿತಿಯನ್ನು ಪಡೆದುಕೊಳ್ಳುವಂತೆ ಹರಂ ಪ್ರೆಸಿಡೆನ್ಸಿ ಎಲ್ಲಾ ಮುಸ್ಲಿಮರಿಗೆ ಕರೆ ನೀಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.