ಜೆದ್ದಾ(www.vknews.in): ಮೇ 31 ಆದಿತ್ಯಾವಾರದಿಂದ ಜಾರಿಗೆ ಬರುವಂತೆ ಮುನ್ನೆಚ್ಚರಿಕೆ ಕ್ರಮಗಳ ಅಡಿಯಲ್ಲಿ ಸೌದಿ ದೊರೆ ಸಲ್ಮಾನ್ ಅವರು ವಿಶ್ವಾಸಿಗಳಿಗೆ ಮದೀನಾದ ಮಸ್ಜಿದುನ್ನಬವಿಯ ಸಂದರ್ಶನಕ್ಕೆ ಅನುಮತಿ ನೀಡಿದ್ದಾರೆ. ಆದರೆ ಸಂದರ್ಶಕರು ಸೌದಿ ಸರಕಾರವು ನಿರ್ದೇಶಿಸಿದ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸ ಬೇಕಾಗುತ್ತದೆ.
