ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಕೊವಿಡ್ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬರುತ್ತಿದೆ. ಸತತ ಮೂರು ದಿನಗಳಲ್ಲಿ ರೋಗ ಮುಕ್ತರಾಗುತ್ತಿರುವವರ ಸಂಖ್ಯೆಯು ಸೋಂಕಿತರ ಸಂಖ್ಯೆಗಿಂತ ದುಪ್ಪಟ್ಟಾಗುತ್ತಿದೆ. ಸೌದಿಯಲ್ಲಿ ಇಂದು 1618 ಹೊಸ ಪ್ರಕರಣಗಳು ದಾಖಲಾಗಿದ್ದು, 22 ಜನ ಕೊವಿಡ್ ಗೆ ಬಲಿಯಾಗಿದ್ದಾರೆ. 1870 ಜನರು ಹೊಸದಾಗಿ ರೋಗ ಮುಕ್ತರಾಗಿದ್ದಾರೆ. ಸೌದಿಯಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 83384 ತಲುಪಿದೆ. 58883 ಮಂದಿ ರೋಗ ಮುಕ್ತಿ ಹೊಂದಿದ್ದು, 24501 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
