ದುಬೈ(www.vknews.in): ದುಬೈಯಿಂದ ರಜೆ ನಿಮಿತ್ತ ತಾಯ್ನಾಡಿಗೆ ಮರಳಿದ ಭಾರತೀಯರ ಪ್ರಯಾಣಕ್ಕೆ ಅನುವು ಮಾಡಿಕೊಡಲು ಭಾರತ ಸರ್ಕಾರವು ನಿಗದಿಪಡಿಸಿದ ಹೊಸ ವೀಸಾ ನಿಯಮವು ದುಬೈಯಲ್ಲಿ ಉದ್ಯೋಗದಲ್ಲಿರುವ ಅನಿವಾಸಿ ಭಾರತೀಯರನ್ನು ಸಂಕಷ್ಟಕ್ಕೀಡು ಮಾಡಿದೆ.
ಜೂನ್ 1 ರಂದು ಭಾರತೀಯ ಗೃಹ ಸಚಿವಾಲಯ ಕಚೇರಿಯು ವಿದೇಶಕ್ಕೆ ಪ್ರಯಾಣಿಸಲು ಇಚ್ಚಿಸುವ ಯುಎಇ ವೀಸಾವನ್ನು ಹೊಂದಿರುವ ಭಾರತೀಯರ ಪ್ರಯಾಣಕ್ಕಾಗಿ ಪರಿಷ್ಕೃತ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಟೊಕಾಲ್ (ಎಸ್ಒಪಿ) ಯನ್ನು ಬಿಡುಗಡೆ ಮಾಡಿತ್ತು. ಈ ಹೊಸ ವೀಸಾ ನಿಯಮದ ಪ್ರಕಾರ ಯುಎಇಗೆ ತೆರಳಲಿಚ್ಚಿಸುವ ಭಾರತೀಯರು ತಮ್ಮ ವೀಸಾಗಳಲ್ಲಿ ಕನಿಷ್ಠ ಮೂರು ತಿಂಗಳ ಮಾನ್ಯತೆಯನ್ನು ಹೊಂದಿರಬೇಕಾಗುತ್ತದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಅದಲ್ಲದೇ ಶಿಕ್ಷಣ ಸಂಸ್ಥೆಗಳು ಇತರ ನೌಕರರು ಕಂಪೆನಿಯ ಎನ್ಓಸಿ ಹೊಂದಿದ್ಜರೂ ಕೂಡ ಕನಿಷ್ಠ ಒಂದು ತಿಂಗಳ ವೀಸಾ ಹೊಂದಿರಬೇಕಾಗುತ್ತದೆ. ಇದು ದುಬೈಯಿಂದ ತಾಯ್ನಾಡಿಗೆ ರಜೆಯಲ್ಲಿ ಬರುವ ಭಾರತೀಯರಿಗೆ ಕಗ್ಗಂಟಾಗಿ ಪರಿಣಮಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.