ಈ ಬಾರಿಯ ಹಜ್ ಸಾಧ್ಯತೆ ವಿರಳ:ಭಾರತದ ಹಜ್ ಸಮಿತಿಯಿಂದ ಹಣ ಮರುಪಾವತಿ ಪ್ರಕ್ರಿಯೆ ಪ್ರಾರಂಭ

ನವದೆಹಲಿ(www.vknews.in): ವಿಶ್ವಾದ್ಯಂತ ಕೊವಿಡ್ ಹರಡುತ್ತಿರುವ ಕಾರಣದಿಂದಾಗಿ ಈ ವರ್ಷ ಹಜ್ ತೀರ್ಥಯಾತ್ರೆ ನಡೆಯುವ ಸಾಧ್ಯತೆ ಶೇಕಡಾ 5 ಕ್ಕಿಂತ ಕಡಿಮೆಯಿದೆ . ಹಜ್ 2020 ತೀರ್ಥಯಾತ್ರೆ ರದ್ದುಗೊಳ್ಳುವುದು ಈಗ ಬಹುತೇಕ ಖಚಿತವಾಗಿದೆ ಎಂದು ಹಜ್ ಸಮಿತಿಯ ಸಿಇಒ ಮಕ್ಸೂದ್ ಅಹ್ಮದ್ ಖಾನ್ ಶುಕ್ರವಾರ ಹೇಳಿದ್ದಾರೆ. ಯಾತ್ರಾರ್ಥಿಗಳಿಗೆ ತಮ್ಮ ಹಜ್ ತೀರ್ಥಯಾತ್ರೆಗಾಗಿ ಅವರು ಠೇವಣಿ ಇಟ್ಟಿದ್ದ ಮೊತ್ತದ ಮೇಲೆ ಶೇ 100 ರಷ್ಟು ಮರುಪಾವತಿ ನೀಡುವಂತೆ ಅವರು ಶುಕ್ರವಾರ ಸಂಜೆ ಆದೇಶಿಸಿದ್ದಾರೆ.

ಭಾರತದ ಹಜ್ ಸಮಿತಿಯ ಪರವಾಗಿ ಹೊರಡಿಸಲಾದ ಆದೇಶದಲ್ಲಿ ಮಾರ್ಚ್ 13ರಂದು ಸೌದಿ ಅಧಿಕಾರಿಗಳಿಂದ ಹಜ್ ಕುರಿತು ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ಸೂಚನೆ ದೊರೆತ ನಂತರದಿಂದ ತಮ್ಮ ಹಜ್ ಯಾತ್ರೆಯನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳಿಗೆ ಶೇಕಡಾ 100 ರಷ್ಟು ಮರುಪಾವತಿ ನೀಡಲಾಗುತ್ತಿದೆ. ಸೌದಿ ಸರಕಾರವು ಹಜ್ 2020ರ ಸಿದ್ಧತೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ತಿಳಿಸಿದೆ. ಈ ಭಾರಿಯ ಹಜ್ ಗಾಗಿ ಭಾರತದಲ್ಲಿ ಪೂರ್ವಸಿದ್ಧತಾ ಕಾರ್ಯಗಳಿಗೆ ಕೆಲವೇ ವಾರಗಳು ಮಾತ್ರ ಉಳಿದಿವೆ, ಆದರೆ ಸೌದಿ ಅಧಿಕಾರಿಗಳಿಂದ ಯಾವುದೇ ಹೆಚ್ಚಿನ ಪೂರಕ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಮಕ್ಸೂದ್ ಅಹ್ಮದ್ ಹೇಳಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...