ಪ್ರವಾದಿ ನಿಂದಕಳ ಬಂಧನಕ್ಕೆ ಮೀನಾಮೇಶ ಎಣಿಸುತ್ತಿರುವ ಅಧಿಕಾರಿ ವರ್ಗದವರು…
(ವಿಶ್ವ ಕನ್ನಡಿಗ ನ್ಯೂಸ್) : ಕುಶಾಲನಗರ ನಿವಾಸಿಯಾದಂತಹ ವಿಂದ್ಯಾ ಪೂಣಚ್ಚ ಎಂಬ ಮಹಿಳೆ ಪ್ರವಾದಿ ಸ.ಅ. ರವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿ, ಮುಸ್ಲಿಂ ಸಮುದಾಯಕ್ಕೆ ಬಹಳ ಘಾಸಿಯುನ್ನುಂಟು ಮಾಡಿರುತ್ತಾರೆ. ಈ ಘಟನೆ ಬಗ್ಗೆ ಪೋಲೀಸರಿಗೆ ಹಲವು ಸಂಘ ಸಂಸ್ಥೆಗಳು ಪ್ರಕರಣವನ್ನು ದಾಖಲಿಸಿದರು ಕೂಡಾ ಇದುವರೆಗೂ ಬಂಧಿಸುವ ಯಾವುದೇ ಗೋಜಿಗೆ ಅದಿಕಾರಿಗಳು ಹೊಗಿಲ್ಲ. ಅವರ ಬಂಧನಕ್ಕೆ ಯಾರದೋ ಒತ್ತಡಕ್ಕೆ ಮಣಿದಂತೆ,ಪ್ರಕರಣದ ಗಾಂಭೀರ್ಯತೆ ಅರಿಯದ ಅಧಿಕಾರಿಗಳು FIR ದಾಖಲಿಸಿ ಸುಮ್ಮನೆ ಕುಳಿತಿದ್ದಾರೆ.
ಅಥವಾ ಇದು ಮುಸ್ಲಿಮರ ವಿಷಯ ನಮಗೆ ಏಕೆ ಅಂತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೋ ಏನೋ…? ಆದರೆ ಪ್ರವಾದಿ ಮಹಮ್ಮದ್ ಸ.ಅ.ರವರು ಬರೀ ಮುಸಲ್ಮಾನರ ನಾಯಕರಲ್ಲ ಬದಲು, ಇಡೀ ಮನುಕುಲಕ್ಕೆ ನಾಯಕರು ಮಾರ್ಗದರ್ಶಕರು ಶಾಂತಿ ದೂತರು. ಅವರು ಈ ಲೋಕಕ್ಕೆ ಹಾಗೂ ಪಾರತ್ರಿಕ ಲೋಕಕ್ಕೆ ನಾಯಕರು ಅಂತಹ ಪ್ರವಾದಿಯವರನ್ನು ನಿಂದಿಸಿರುವುದು ಇಡೀ ಮನುಕುಲವನ್ನು ನಿಂದಿಸಿದಕ್ಕೆ ಸಮಾನ.
ಉತ್ತಮ ಹಾಗೂ ದಕ್ಷ ಆಡಳಿತಕ್ಕೆ ಹೆಸರು ವಾಸಿಯಾಗಿರುವ ಕೊಡಗು ಜಿಲ್ಲಾಡಳಿತ, ತಮ್ಮ ಕಾಲಡಿಯಲ್ಲೇ ಇಂತಹ ಸಮಾಜಘಾತುಕ ವ್ಯಕ್ತಿಗಳು ನಡೆಸುತ್ತಿರುವ ಕಿಡಿಗೇಡಿ ಕೃತ್ಯಗಳನ್ನು ಕೂಡಲೇ ಮಟ್ಟ ಹಾಕಿ, ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಶಾಂತಿ ಹಾಗೂ ಸೌಹಾರ್ದವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯ. ಕಾರ್ಯಪ್ರವೃತ್ತರಾಗಬೇಕು , ಹಾಗೂ ಈ ಮೇಲಿನ ಘಟನೆಯನ್ನು ತೀವ್ರವಾಗಿ ಖಂಡಿಸುತ್ತಾ, ಕಿಡಿಗೇಡಿ ವಿಂದ್ಯಾಪೂಣಚ್ಚಳನ್ನು ಆದಷ್ಟು ಬೇಗನೆ ಬಂಧಿಸಬೇಕೆಂದು ಎಸ್. ಕೆ. ಎಸ್. ಎಸ್. ಎಫ್. ಜಿ ಸಿ ಸಿ ಕೊಡಗು ಜಿಲ್ಲಾ ಘಟಕ ಈ ಮೂಲಕ ಆಗ್ರಹಪಡಿಸುತ್ತೇವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.