ಡೆಪ್ಯೂಟಿ ಚೆನ್ನಬಸಪ್ಪ ಉದ್ಯಾನವನದಲ್ಲಿ ಪರಿಸರ ದಿನಾಚರಣೆ

ಧಾರವಾಡ (www.vknews.com) : ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆವರಣದಲ್ಲಿರುವ ಸುಮಾರು 160 ವರ್ಷಗಳಷ್ಟು ಹಳೆಯದಾಗಿರುವ ಚಾರಿತ್ರಿಕ ಡೆಪ್ಯೂಟಿ ಚೆನ್ನಬಸಪ್ಪ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿವಿಧ ಔಷಧಿ ಸಸ್ಯಗಳನ್ನು ನೆಡಲಾಯಿತು.
ಜಿಲ್ಲಾ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿರ್ದೇಶಕ ಅಬ್ದುಲ್ ವಾಜೀದ್ ಖಾಜಿ ಸಸಿಗಳನ್ನು ನೆಟ್ಟು ನೀರುಣಿಸಿದರು. ಪ್ರಸ್ತುತ ಡೆಪ್ಯೂಟಿ ಚೆನ್ನಬಸಪ್ಪ ಉದ್ಯಾನವನದಲ್ಲಿ ಇರುವ ನಿರುಪಯುಕ್ತ ಇತರೇ ಗಿಡಗಳನ್ನು ತೆಗೆದು ಸಂಪೂರ್ಣವಾಗಿ ಈ ಚಾರಿತ್ರಿಕ ಉದ್ಯಾವನವನ್ನು ಔಷಧಿ ಸಸ್ಯಗಳ ವನವನ್ನಾಗಿ ಪರಿವರ್ತಿಸಲಾಗುವುದು ಎಂದು ಈ ಸಂದರ್ಭದಲ್ಲಿ ಉಪನಿರ್ದೇಶಕ ಅಬ್ದುಲ್ ವಾಜೀದ್ ಖಾಜಿ ಹೇಳಿದರು.

ಡಯಟ್ ಹಿರಿಯ ಉಪನ್ಯಾಸಕರುಗಳಾದ ಉಮಾ ಬೇರಗೇರ, ವೈ.ಬಿ.ಬಾದವಾಡಗಿ, ಡಾ.ಗುರುನಾಥ ಹೂಗಾರ, ಪ್ರಶಿಕ್ಷಕಿ ಅಫ್ರೋಜಾ ಕಾಥೇವಾರಿ, ಕೃಷಿ ಸಹಾಯಕ ಪ್ರಭಾನಂದ ಅಂಚಟಗೇರಿ, ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಸಹ ಸಂಪಾಸಕರುಗಳಾದ ಡಾ. ಗುರುಮೂರ್ತಿ ಯರಗಂಬಳಿಮಠ ಹಾಗೂ ರಾಜು ಭೂಶೆಟ್ಟಿ ಇದ್ದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...