ಕುಂಬ್ರ(ವಿಶ್ವಕನ್ನಡಿಗ ನ್ಯೂಸ್): ಎಸ್ಡಿಪಿಐ ಕುಂಬ್ರ ವಲಯ ವ್ಯಾಪ್ತಿಗೆ ಒಳಪಟ್ಟ ಬಡಗನ್ನೂರು ಗ್ರಾಮ ಸಮಿತಿಯನ್ನು ದಿನಾಂಕ 07/06/2020 ರಂದು ಪಕ್ಷದ ವಲಯ ಕಚೇರಿಯಲ್ಲಿ ಕಾರ್ಯಕರ್ತರ ಸೇರ್ಪಡೆ ಮತ್ತು ಗ್ರಾಮ ಸಮಿತಿಯನ್ನು ರಚಿಸಲಾಯಿತು.
ಈ ಸಂದರ್ಭದಲ್ಲಿ ಬಡಗನ್ನೂರು ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಜಾಬೀರ್ ಕೊಯಿಲ ಮತ್ತು ಕಾರ್ಯದರ್ಶಿಯಾಗಿ ಶಂಶುದ್ದೀನ್ ಪೆರಿಗೇರಿ ಯವರನ್ನು ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಎಸ್ಡಿಪಿಐ ಕುಂಬ್ರ ವಲಯ ಅಧ್ಯಕ್ಷರಾದ ಶರೀಫ್ ಕಟ್ಟತ್ತಾರ್ ರವರು ಪಕ್ಷದ ಕಾರ್ಯ ಸಿದ್ಧಾಂತಗಳನ್ನು ವಿವರಿಸಿ ಹೊಸದಾಗಿ ಸೇರ್ಪಡೆಯಾದ ಕಾರ್ಯಕರ್ತರಿಗೆ ಪಕ್ಷದ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಮ ಸಮಿತಿ ಅಧ್ಯಕ್ಷರಾದ ಉಮರ್ ಪಿ.ಎಂ ಮತ್ತು ಕುಂಬ್ರ ವಲಯದ ಉಪಾಧ್ಯಕ್ಷರಾದ ಎಸ್ ಎಂ ಮಹಮ್ಮದ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.