ಸರ್ಕಾರದ ಆದೇಶಗಳನ್ನು ಪಾಲಿಸಿ ಮಸೀದಿಗಳನ್ನು ಓಪನ್ ಮಾಡಬೇಕು : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ

ಕಲ್ಲಿಕೋಟೆ (www.vknews.com) : ಮಸೀದಿಗಳನ್ನು ಓಪನ್ ಮಾಡಿ ಆರಾಧನೆ ನಿರ್ವಹಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಅನುಮತಿ ಕೊಟ್ಟಿರುವ ಈ ಸಂದರ್ಭದಲ್ಲಿ, ಸರ್ಕಾರದ ಆದೇಶಗಳನ್ನು ಪಾಲಿಸಿ ಮಸೀದಿಗಳನ್ನು ಓಪನ್ ಮಾಡಿ ಕಾರ್ಯಾಚರಿಸಬೇಕು. ಜುಮುಅ (ಶುಕ್ರವಾರ) ನಮಾಝ್ ನಿರ್ವಹಣೆಗಾಗಿ ಅಗತ್ಯವಾದ ಕಾರ್ಯಗಳನ್ನು ಮಾಡಬೇಕು ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ರಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್ ಮತ್ತು ಪ್ರಧಾನ ಕಾರ್ಯದರ್ಶಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ರವರು ಪ್ರಸ್ತಾಪಿಸಿದ್ದಾರೆ.

ಅಪರಿಚಿತರು ಭಾಗವಹಿಸಲು ಸಾಧ್ಯತೆಯಿರುವ ಪಟ್ಟಣಗಳ ಮಸೀದಿಗಳ ಓಪನ್ ಕಾರ್ಯವನ್ನು ಕೆಲವು ವಾರಗಳಿಗೆ ಮುಂದೂಡುವುದೇ ಒಳ್ಳೆಯದು. ಅದೇ ಸಂದರ್ಭದಲ್ಲಿ ಸರ್ಕಾರದ ಆದೇಶಗಳನ್ನು ಪಾಲಿಸಿ ಹಳ್ಳಿ ಪ್ರದೇಶಗಳ ಮಸೀದಿಗಳಲ್ಲಿ ಜುಮುಅಃ ನಮಾಝ್ ಪುನರಾರಂಭಿಸಬೇಕು. ಕಾರಣ ಜುಮುಅ ನಮಾಝ್ ಅತ್ಯಂತ ಮಹತ್ವವುಳ್ಳದ್ದೂ ಕಡ್ಡಾಯ ಆರಾಧನೆಯೂ ಆಗಿರುತ್ತದೆ. ಆರಾಧನಾಲಯಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸರಕಾರವು ಆಜ್ಞಾಪಿಸಿದಾಗ ಮುಸ್ಲಿಮರು ಸರ್ಕಾರದ ಆಜ್ಞೆಯನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದರು. ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಮತಿಸಿ ನೀಡಿರುವುದರಿಂದ ತೊಂದರೆಯಾಗದಂತೆ ಜುಮುಅಃ ಆರಂಭಿಸಲು ಪ್ರಯತ್ನಿಸಬೇಕೆಂದು ಸಮಸ್ತ ನಾಯಕರು ಹೇಳಿದರು.

– MKM ಕಾಮಿಲ್ ಕೊಡಂಗಾಯಿ

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...