ಬಪ್ಪಳಿಗೆ(ವಿಶ್ವಕನ್ನಡಿಗ ನ್ಯೂಸ್): ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ರಿ. BGF ವತಿಯಿಂದ ರಾಗಿಕುಮೇರಿ ಅಂಗನವಾಡಿ ಕೇಂದ್ರಕ್ಕೆ ಇಲೆಕ್ಟ್ರೋನಿಕ್ ತೂಕದ ಯಂತ್ರವನ್ನು BGF ಇದರ ಗೌರವ ಸಲಹೆಗಾರರೂ ಬಪ್ಪಳಿಗೆ ಖತೀಬರೂ ಆದ ಬಹು ಉಸ್ತಾದ್ ಅಹ್ಮದ್ ನಈಂ ಫೈಝಿ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಸ್ತಾಂತರಿಸಲಾಯಿತು.
ನಂತರ ಮಾತನಾಡಿದ ಖತೀಬರು ಕೊಡುಗೆ ಸ್ವೀಕರಿಸಿದ ಬಳಿಕ ಅದರ ಪೂರ್ಣ ಸದುಪಯೋಗವನ್ನು ಪಡೆಯಬೇಕೆಂದು, ಮಾನವೀಯ ಹಾಗೂ ಸಾಮಾಜಿಕ ಸೇವೆಗಳ ಕುರಿತು ತಿಳಿಸಿ ಸಾರ್ವಜನಿಕರ ಸಹಕಾರ ಬೆಂಬಲ ಮತ್ತು ಪ್ರಾರ್ಥನೆ ಸದಾ ಅನಿವಾರ್ಯ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸುಮಿತ್ರಹರೀಶ್ ಸಂಧರ್ಬೋಚಿತವಾಗಿ ಮಾತನಾಡಿ ಸಮಿತಿಗೆ ಅಂಗನವಾಡಿ ಕೇಂದ್ರದ ಪರವಾಗಿ ಧನ್ಯವಾದ ಸಲ್ಲಿಸಿದರು.
ಮುಖ್ಯ ಅಥಿತಿಯಾಗಿ ಮಾಜಿ ಕೌನ್ಸಿಲರ್ ಸ್ವರ್ಣಲತಾ ಹೆಗ್ಡೆ ಉಪಸ್ಥಿತರಿದ್ದರು. ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ಉಪಾಧ್ಯಕ್ಷರಾದ ಇಬ್ರಾಹಿಂ ಬಪ್ಪಳಿಗೆ ರವರು ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಇಕ್ಬಾಲ್ ಯುಕೆ, ಸಂಘಟನಾ ಕಾರ್ಯದರ್ಶಿ ಸಮೀರ್ ಎಸ್ ಎಸ್ ಸ್ಕೇಲ್, ಕಾರ್ಯದರ್ಶಿ ಸಂಶುದ್ದೀನ್ ಯುಎಂ, ಸದಸ್ಯರಾದ ಇಂತಿಯಾಝ್ ಪಿಬಿ, ಶೈಖ್ ರಿಯಾಝ್ ಮುನ್ನ, ನಾಸಿರುದ್ದೀನ್ ಕರ್ಕುಂಜ, ಬಾಲ ವಿಕಾಸ ಸಂಘದ ಅಧ್ಯಕ್ಷೆ ಜಯಂತಿ, ಅಂಗನವಾಡಿ ಸಹಾಯಕಿ ಪ್ರೇಮ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.