ಅನೈತಿಕ ಸಂಬಂಧದ ಕೋಲೆ ಪ್ರಕರಣವನ್ನು ಭೇದಿಸಿ, ಆರೋಪಿಯನ್ನು ಬಂಧಿಸಿದ ಪೊಲೀಸರು

ಯಲಬುರ್ತಿ ಗ್ರಾಮದ ಮಹಿಳೆ ಕೊಲೆ ಪ್ರಕರಣ ಭೇದಿಸಿದ ಕ್ರೈಂ ತನಿಖಾ ತಂಡದ ಪೊಲೀಸರು

ಕೊಪ್ಪಳ (www.vknews.com) : ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಯಲಬುರ್ತಿಯಲ್ಲಿ ಜೂನ್-1 ರಂದು ಮಹಿಳೆಯ ಕೊಲೆ ಆಗಿತ್ತು ಈ ಪ್ರಕರಣವನ್ನು ಭೇದಿಸುವಲ್ಲಿ ಹನಮಸಾಗರ ಪಿಎಸ್ಐ ಅಮರೇಶ ಹುಬ್ಬಳ್ಳಿ ನೇತೃತ್ವದ ತನಿಖಾ ತಂಡವು ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಯಾಗಿದೆ.

ದಿನಾಂಕ : 01.06.2020 ರಂದು ಫಿರ್ಯಾದಿ ಶರಣಪ್ಪ ತಂದೆ ಕಳಕಪ್ಪ ಮ್ಯಾಗೇರಿ, ಸಾ: ಯಲಬುರ್ತಿ ರವರು ತನ್ನ ಹೆಂಡತಿ ಶರಣಮ್ಮ ಈಕೆಯು ಅದೇ ಗ್ರಾಮದ ಬಸವರಾಜ ತಂದೆ ಶರಣಪ್ಪ ಕಂಡಕ್ಟರ ತಟ್ಟಿ ಈತನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಹಾಗೂ ಅವರಿಬ್ಬರೂ ಓಡಿ ಹೋಗಿದ್ದಾಗಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರುದಾರ ತನ್ನ ಹೆಂಡತಿ ಕಾಣೆಯಾದ ಬಗ್ಗೆ ಕಂಪ್ಲೇಟ್ ಕೊಟ್ಟಿದ್ದರು.

ಜೂ.13ರಂದು ಶರಣಪ್ಪ ತಟ್ಟಿ ರವರ ಜಮೀನಿನ ಹತ್ತಿರದಲ್ಲಿರು ತೆಗ್ಗಿನ ನಾಲೆಯಲ್ಲಿ ಶರಣಮ್ಮಳನ್ನು ಹೊಡೆದು, ಕುತ್ತಿಗೆ ಹಿಚುಕಿ ಕೊಕೆ ಮಾಡಿ ಹಾಕಿರುತ್ತಾರೆ ಎಂದು ನೀಡಿದ ಕಂಪ್ಲೇಟ್ ನ ಮೇಲೆ ಕುಷ್ಟಗಿ ಠಾಣೆಯಲ್ಲಿ ಠಾಣೆ ಕ್ರೈಂ ನಂಬರ್ 147/2020. ಐಪಿಸಿ ಸೆಕ್ಷನ್ 302, 201 ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜ.ಸಂಗೀತಾ ರವರು ಸದರಿ ಪ್ರಕರಣದ ಆರೋಪಿತನ ಪತ್ತೆ ಕುರಿತು ಕೊಪ್ಪಳ ಜಿಲ್ಲೆಯ ಎಸ್ಪಿ ಜಿ. ಸಂಗೀತಾ, ಡಿ.ಎಸ್.ಪಿ. ಗಂಗಾವತಿ ಬಿ.ಪಿ.ಚಂದ್ರಶೇಖರ ರವರ ನೇತೃತ್ವದಲ್ಲಿ ಜಿ.ಚಂದ್ರಶೇಖರ, ಸಿ.ಪಿ.ಐ. ಕುಷ್ಟಗಿ ವೃತ್ತ ಹಾಗೂ ಅಮರೇಶ.ಹುಬ್ಬಳ್ಳಿ, ಪಿ.ಎಸ್.ಐ. ಹನಮಸಾಗರ ಠಾಣೆ ಮತ್ತು ಹೀರಪ್ಪ ನಾಯಕ, ಎ.ಎಸ್.ಐ. ಕುಷ್ಟಗಿ ಹಾಗೂ ಸಿಬ್ಬಂದಿಯವರಾದ ಶಿವರಾಜ, ಅಮರೇಶ, ಶ್ರೀಧರ, ಷಣ್ಮುಖಪ್ಪ, ನೀಲಕಂಠಪ್ಪ, ಪರಶುರಾಮರವರನ್ನ ಒಳಗೊಂಡ ತಂಡವನ್ನು ಈ ಪ್ರಕರಣ ಬೇಧಿಸಲೆಂದು ಕ್ರೈಂ ತನಿಖಾ ತಂಡ ರಚಿಸಲಾಗಿತ್ತು.

ಈ ಕೊಲೆ ಪ್ರಕರಣದ ಕುರಿತು ತನಿಖೆಯನ್ನು ಚುರುಕು ಗೊಳಿಸಿದ ತನಿಖಾ ತಂಡದ ಪೊಲೀಸರು ವೈಜ್ಞಾನಿಕ ತನಿಖೆ ಕೈಗೊಂಡು ಜೂ.18 ರಂದು ಬಂಡಿ ಕ್ರಾಸ್ ಹತ್ತಿರ ಖಚಿತ ಬಾತ್ಮಿ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದಾವಿಸಿದ ಪೊಲೀಸರ ತಂಡಕ್ಕೆ ಆರೋಪಿತನಾದ ಬಸವರಾಜ ತಂದೆ ಶರಣಪ್ಪ ಕಂಡಕ್ಟರ ತಟ್ಟಿ, ಈತನನ್ನು ಬಂಧಿಸಿ ಸದರಿಯವನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಸದರಿಯವನು ಕೃತ್ಯವನ್ನು ಎಸಗಿದ ಬಗ್ಗೆ ಆರೋಪಿತ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕೊಪ್ಪಳ ಜಿಲ್ಲೆಯ ಎಸ್ಪಿ ಜಿ.ಸಂಗೀತಾ ರವರು ಸತತ 5 ದಿನಗಳ ಕಾಲ ಅವಿರತವಾಗಿ ತನಿಖೆ ಕೈಗೊಂಡು ಕ್ಲಿಷ್ಟಕರ ಪ್ರಕರಣವನ್ನು ಭೇದಿಸಿದ ತನಿಖಾ ತಂಡವನ್ನು ಶ್ಲಾಘನೆ ಮಾಡಿದ್ದಾರೆ.

ವರದಿ: ಮರಿಗೌಡ ಬಾದರದಿನ್ನಿ

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...