ಕಲಿವೀರನಿಗೆ ದಕ್ಕಲಿಲ್ಲ ಕೆಜಿಎಫ್ ವಿಲ್ಲನ್

(www.vknews.com) : ಕನ್ನಡ ಸಿನಿಮಾ ಇತಿಹಾಸದಲ್ಲಿ ಕೆಜಿಎಫ್ ಒಂದು ದೊಡ್ಡ ಮೈಲುಗಲ್ಲಿನ ಸಿನಿಮಾ. ಕೆಜಿಎಫ್ ಖಳನಟ ಗರುಡನ ಪಾತ್ರ ಯಾರಿಗೆ ತಾನೆ ಇಷ್ಟ ಆಗಲಿಲ್ಲ. ಗರುಡ ರಾಮ್ ಎಂದೇ ಖ್ಯಾತಿ ಪಡೆದಿರುವ ಇವರು, ಉತ್ತರ ಕರ್ನಾಟಕದ ಪ್ರತಿಭಾವಂತ ಏಕಲವ್ಯ ಚೊಚ್ಚಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ ಕಲಿವೀರ ಚಿತ್ರದ ಮುಖ್ಯ ಖಳನಟನ ಪಾತ್ರ ನಿರ್ವಹಿಸಬೇಕಿತ್ತು. ಮುಂಚೆ ಇದೆ ಪಾತ್ರಕ್ಕಾಗಿ ಖಡಕ್ ಧ್ವನಿ ರವಿಶಂಕರ್ ಅವರನ್ನು ಕೂಡ ನಿರ್ದೇಶಕ ಅವಿ ಸಂಪರ್ಕಿಸಿದರು, ರವಿಶಂಕರ್ ರವರ ಕಾಲ್ ಶೀಟ್ ಸಿಗದ ಕಾರಣ ಗರುಡ ರಾಮ್ ರನ್ನು ಕಲಿವೀರ ಚಿತ್ರತಂಡ ಆಯ್ಕೆ ಮಾಡಿಕೊಂಡಿತು.

ಆದ್ರೆ ವಿಧಿ ಆಟ ಬೇರೆ ಇತ್ತು, ರಾಣೆಬೆನ್ನೂರಿನ ಜ್ಯೋತಿ ಆರ್ಟ್ಸ್ ಅದ್ದೂರಿಯಾಗಿ ನಿರ್ಮಿಸುತ್ತಿರುವ ಕಲಿವೀರ ಚಿತ್ರದ ನಿರ್ದೇಶಕ ಅವಿ ರವರು ಹೇಳಿದ ಕಥೆ ಕೇಳಿ ಮೆಚ್ಚುಗೆ ಸೂಚಿಸಿದ ಗರುಡ ರಾಮ್ ರವರು, ಚಿತ್ರೀಕರಣಕ್ಕಾಗಿ ಡೇಟ್ಸ್ ಹೊಂಚಲು ಸ್ವಲ್ಪ ಟೈಮ್ ಕೇಳಿದರು. ಹೇಗೊ ಕೊನೆಗೂ ಕಲಿವೀರನ ಎದುರು ಕೆಜಿಎಫ್ ನ ಖಡಕ್ ವಿಲ್ಲನ್ ಸಿಕ್ಕಿದ ಎಂಬ ನಿಟ್ಟುಸಿರು ಬಿಟ್ಟ ಚಿತ್ರತಂಡಕ್ಕೆ ನಿರಾಸೆ ಮೂಡಿತ್ತು. ಗರುಡ ರಾಮ್ ರವರು ನಿರ್ದೇಶಕ ಅವಿ ಗೆ ಕರೆ ಮಾಡಿ ಡೇಟ್ಸ್ ಸಮಸ್ಯೆಗಳಿಂದ ಕಲಿವೀರದಲ್ಲಿ ನಟಿಸಲು ಸಾದ್ಯವಿಲ್ಲ ಎಂದರು. ಈ ಶಾಕಿಂಗ್ ಸುದ್ದಿಯನ್ನು ಕೇಳಿದ ಚಿತ್ರತಂಡಕ್ಕೆ ಮತ್ತೆ ಉತ್ಸಾಹದ ಚಿಲುಮೆ ತುಂಬಿದ್ದು ಅಪರೂಪದ ನಟ ಸೂರ್ಯನಾರಾಯಣ್. ಈ ದೈತ ನಟನಿಗೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅನುಭವವಿದೆ.

ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ಇವರು ಮಿಂಚಿದ್ದಾರೆ. ಪಾತ್ರಗಳಲ್ಲಿ ಬಹಳ ಚ್ಯೂಸಿ ಆಗಿರುವ ಇವರು, ಕಿಚ್ಚ ಸುದೀಪ್ ರ ವೀರ ಮದಕರಿ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಿರುವ ಖ್ಯಾತಿ ಪಡೆದಿರುವ ವಿಲ್ಲನ್. 6.3 ಅಡಿ ಎತ್ತರವಿರುವ ಈ ಅಪರೂಪದ ಖಳನಟನ ಅಭಿನಯವನ್ನು ನೋಡುವ ಪ್ರೇಕ್ಷಕರು ಮತ್ತೊಮ್ಮೆ ದಂಗಾಗಿ ಹೋಗುತ್ತಾರೆ ಎಂಬುದು ನಿರ್ದೇಶಕ ಅವಿ ಮತ್ತು ಚಿತ್ರತಂಡದ ಅಭಿಪ್ರಾಯ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...