ಮಂಗಳೂರು (www.vknews.com) : ಕೋವಿಡ್-19 ಸಾಂಕ್ರಾಮಿಕ ರೋಗವು ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರಕಾರ ಮಾರ್ಚ್ 23 ರಿಂದ ಲಾಕ್ಡೌನ್ ಮಾಡಿರುವುದರಿಂದ ಸದರಿ ಅವಧಿಯಲ್ಲಿ ನಿಗಮದ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಕೋವಿಡ್-19 ಲಾಕ್ಡೌನ್ ಸಡಿಲಗೊಂಡ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ನಿಗಮದ ಸಾರಿಗೆ ಸೇವೆಗಳ ಕಾರ್ಯಾಚರಣೆಯಲ್ಲಿ ಸಹ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಮೇ 19 ರಿಂದ ಅವಶ್ಯಕತೆಗನುಸಾರ ಸಾರಿಗೆಗಳ ಕಾರ್ಯಾಚರಣೆಯನ್ನು ಆರಂಭಿಸಲಾಗಿರುತ್ತದೆ.
ನಿಗಮದ ಸಾಮಾನ್ಯ, ವೇಗದೂತ ಹಾಗೂ ನಗರ ಸಾರಿಗೆಗಳಲ್ಲಿ ಪ್ರತಿ ನಿತ್ಯ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮಾಸಿಕ ಬಸ್ಪಾಸ್ ಸೌಲಭ್ಯವಿದ್ದು ಮಂಗಳೂರು/ಸ್ಟೇಟ್ಬ್ಯಾಂಕ್-ಧರ್ಮಸ್ಥಳ, ಮಂಗಳೂರು/ಸ್ಟೇಟ್ಬ್ಯಾಂಕ್-ಉಪ್ಪಿನಂಗಡಿ, ಮಂಗಳೂರು/ಸ್ಟೇಟ್ಬ್ಯಾಂಕ್-ಸುಬ್ರಹ್ಮಣ್ಯ, ಮಂಗಳೂರು/ಸ್ಟೇಟ್ಬ್ಯಾಂಕ್-ಬಿ.ಸಿ.ರೋಡ್, ಮಂಗಳೂರು/ ಸ್ಟೇಟ್ಬ್ಯಾಂಕ್ – ಉಡುಪಿ, ಮಾರ್ಗಗಳಲ್ಲಿ ಸದರಿ ಮಾಸಿಕ ಪಾಸುಗಳನ್ನು ಜೂನ್ 20 ರಿಂದ ವಿತರಿಸಲಾಗುತ್ತದೆ. ಆದುದರಿಂದ ಸದರಿ ಪಾಸು ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು ಇಂತಿವೆ- ಮಂಗಳೂರು ಬಸ್ನಿಲ್ದಾಣ ಮೊಬೈಲ್ ಸಂಖ್ಯೆ 7760990720, ಸ್ಟೇಟ್ಬ್ಯಾಂಕ್ ಬಸ್ಸು ನಿಲ್ದಾಣ ಮೊಬೈಲ್ ಸಂಖ್ಯೆ 9663266001, ಉಡುಪಿ ಬಸ್ನಿಲ್ದಾಣ ಮೊಬೈಲ್ ಸಂಖ್ಯೆ 9663266400, ಕುಂದಾಪುರ ಬಸ್ಸು ನಿಲ್ದಾಣ ಮೊಬೈಲ್ ಸಂಖ್ಯೆ 9663266009 ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ವಿಭಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಇವರ ಪ್ರಕಟಣೆ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.