ಪುತ್ತೂರು ಘಟಕದಲ್ಲಿ ವನಮಹೋತ್ಸವ ಮತ್ತು ಸ್ಯಾನಿಟೈಸರ್ ವಿತರಣೆ

(www.vknews.com) : ದ.ಕ. ಜಿಲ್ಲಾ ಗೃಹರಕ್ಷಕ ದಳದ ಪುತ್ತೂರು ಘಟಕದಲ್ಲಿ ದಿನಾಂಕ: 21-06-2020 ರಂದು ವನಮಹೋತ್ಸವ ಮತ್ತು ಸ್ಯಾನಿಟೈಸರ್ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ ಚೂಂತಾರು ರವರು ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಭಾರತ-ಚೀನಾ ಗಡಿಯಲ್ಲಿ ಮಡಿದ ಯೋಧರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಲಾಯಿತು. ಡಾ|| ಮುರಲೀ ಮೋಹನ ಚೂಂತಾರು ರವರು ಮಾತನಾಡಿ ಪ್ರತಿಯೊಬ್ಬ ಗೃಹರಕ್ಷಕರು ಒಂದೊಂದು ಗಿಡವನ್ನು ನೆಟ್ಟು ಚೆನ್ನಾಗಿ ಹಾರೈಕೆ ಮಾಡಿ ಬೆಳೆಸಬೇಕು, ಪರಿಸರ ನಾಶದಿಂದಾಗಿ ಕೋವಿಡ್-19 ರೋಗ ಇಂದು ವಿಶ್ವದೆಲ್ಲೆಡೆ ವ್ಯಾಪಿಸಿ ಮಾರಣ ಹೋಮ ಮಾಡುತ್ತಿದೆ. ಇದರ ಮುಂಜಾಗ್ರತೆಗಾಗಿ ಸ್ಯಾನಿಟೈಸರ್ ಮತ್ತು ಮೌತ್ ಮಾಸ್ಕ್‍ಗಳನ್ನು ಉಪಯೋಗಿಸುವಂತೆ ಎಲ್ಲಾ ಗೃಹರಕ್ಷಕರಿಗೆ ಎಂದು ಹಿತನುಡಿದರು.

ಪುತ್ತೂರು ಘಟಕದ ಎಲ್ಲಾ ಗೃಹರಕ್ಷಕರಿಗೆ ಒಂದೊಂದು ಗಿಡಗಳನ್ನು ಮತ್ತು ಸ್ಯಾನಿಟೈಸರ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಘಟಕದ ಘಟಕಾಧಿಕಾರಿ ಶ್ರೀ ಅಭಿಮನ್ಯು ರೈ ಹಾಗೂ ಎಲ್ಲಾ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...