(www.vknews.com) : ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಕಲಿವೀರ ಸಿನಿಮಾದ ಮೇಕಿಂಗ್ ವೀಡಿಯೋ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಮೇಕಿಂಗ್ ನೋಡಿದ ವೀಕ್ಷಕರು ಕಲಿವೀರನ ಆಕ್ಷನ್ ದೃಶ್ಯಗಳನ್ನು ನೋಡಿ ಥ್ರಿಲ್ ಆಗಿದ್ದಾರೆ. ಭರವಸೆ ಮೂಡಿಸಿರುವ ಕಲಿವೀರನಿಗೆ ನಿರ್ದೇಶಕ ಅವಿ ಆಕ್ಷನ್ ಕಟ್ ಹೇಳಿದ್ದಾರೆ.
ಉತ್ತರ ಕರ್ನಾಟಕ ಹುಡುಗ ಏಕಲವ್ಯ ಎಂಬ ಪರಿಪೂರ್ಣ ಪ್ರತಿಭೆ ಈ ಕಲಿವೀರನ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಪಾದಾರ್ಪಣೆ ಮಾಡಿದ್ದು, ಮೇಕಿಂಗ್ ನಲ್ಲಿ ಈ ಏಕಲವ್ಯ ಎಂಬ ದೈತ್ಯ ಪ್ರತಿಭೆಯ ಪರಿಶ್ರಮ ಎದ್ದು ಕಾಣುತ್ತದೆ. ರಾಣಿಬೆನ್ನೂರಿನ ಜ್ಯೋತಿ ಆರ್ಟ್ಸ್ ನಿರ್ಮಾಣದ ಈ ಕಲಿವೀರ ಸಿನಿಮಾದಲ್ಲಿ ಕಲಾವಿದರ ದಂಡೇ ಇದ್ದು, ಕಲಿವೀರನಿಗೆ ನಾಯಕಿಯರಾಗಿ ಕರಾವಳಿ ಬೆಡಗಿ ಚಿರಶ್ರೀ ಅಂಚನ್ ಹಾಗೂ ಪಾವನ ಗೌಡ ಅಭಿನಯಿಸಿದ್ದಾರೆ. ಹಾಗೇನೆ ಇನ್ನುಳಿದಂತೆ ತಬಲ ನಾಣಿ, ಟಿ.ಎಸ್ ನಾಗಾಭರಣ, ವಿಶೇಷ ಪಾತ್ರದಲ್ಲಿ ಅನಿತಾ ಭಟ್, ನಿನಾಸಂ ಅಶ್ವತ್ಥ್ ಡ್ಯಾನಿ ಕುಟ್ಟಪ್ಪ, ರಾಕ್ಲೈನ್ ಸುಧಾಕರ್, ಮೋಹನ್ ಜುನೈಜಾ, ರಮೇಶ್ ಪಂಡಿತ್,ಸುರೇಶ್ ಚಂದ್ರ ಹೀಗೆ ದೊಡ್ಡ ತಾರಾಬಳಗ ಹೊಂದಿದೆ ಚಿತ್ರತಂಡ.
ಮೇಕಿಂಗ್ ನಲ್ಲಿ ಮೂಡಿ ಬಂದಿರೋ ಸಾಹಸಮಯ ದೃಶ್ಯಗಳು ಮೈ ನವಿರೇಳಿಸುವಂತಿವೆ. ಸಾಹಸಗಲ್ಲಿ ಮಾತ್ರವಲ್ಲದೇ ನೃತ್ಯದಲ್ಲೂ ತನ್ನ ಕರಾವತ್ತು ತೋರಿರೋ ಏಕಲವ್ಯ, ಮುರಳಿ ಮಾಸ್ಟರ್ ಹೇಳಿದ ಸ್ಟೇಪ್ ಸ್ವಲ್ಪ ಜಾಸ್ತಿನೇ ಶ್ರಮ ಹಾಕಿ ನೃತ್ಯ ಮಾಡಿದ್ದಾರೆ. ಹೊಸತನದ ಈ ದೊಡ್ಡ ಮಟ್ಟದ ಬಜೆಟ್ ಸಿನಿಮಾದಲ್ಲಿ ವಿ ಮನೋಹರ್ ಅವರ ಸಂಗೀತ ಸಂಯೋಜನೆ ಇದ್ದು, ಹಿನ್ನೆಲೆ ಸಂಗೀತ ರಾಘವೇಂದ್ರ. ವಿ ಮಾಡಿದ್ದಾರೆ, ಮೇಕಿಂಗ್ ವೀಡಿಯೋದಲ್ಲಿ ಹಿನ್ನೆಲೆ ಸಂಗೀತಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಎ ಆರ್ ಕೃಷ್ಣ ಅವರ ಕತ್ತರಿ ಪ್ರಯೋಗ ಚಿತ್ರಕ್ಕಿದೆ. ಮೇಕಿಂಗ್ ನಲ್ಲಿ ಕಾಣುತ್ತಿರುವ ಅದ್ಭುತ ಲೊಕೇಷನ್ಸ್ ಗೆ ವೀಕ್ಷಕರು ಮನಸೋತಿದ್ದಾರೆ.
ಒಟ್ಟಾರೆ ಕಲಿವೀರ ಮೇಲೆ ತುಂಬಾ ನಿರೀಕ್ಷೆ ಸೃಷ್ಟಿ ಮಾಡಿದೆ. ಸಿನಿಮಾದ ಎಲ್ಲಾ ಪ್ರಮುಖ ಕೆಲಸಗಳು ಮುಗಿಸಿರುವ ಚಿತ್ರತಂಡ. ಲಾಕ್ ಡೌನ್ ಮುಗಿದ ತಕ್ಷಣ ಚಿತ್ರ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ ಎಂದು ನಿರ್ದೇಶಕ ಅವಿ ತಿಳಿಸಿದರು.