ಕಾರ್ಸ್ಟ್ರೀಟ್ ಸರಕಾರಿ ಕಾಲೇಜಿನಲ್ಲಿ “ಬಿಸಿನೆಸ್ ಲ್ಯಾಬ್”ಶೀಘ್ರ ಆರಂಭ
ಮಂಗಳೂರು (www.vknews.com) : ಡಾ.ಪಿ.ದಯಾನಂದ.ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು, ರಥಬೀದಿ ಇಲ್ಲಿ “ಬಿಸಿನೆಸ್ ಲ್ಯಾಬ್”ನ್ನು ಪ್ರಾರಂಭಿಸುವ ಕುರಿತು ಜೂನ್ 26 ರಂದು, ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ, ಇವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಗಿತು.
ವಲ್ರ್ಡ್ ಬ್ಯಾಂಕ್ನ ಮಾಜಿ ನಿರ್ದೇಶಕ, ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಭಿವೃದ್ಧಿ ಸಲಹೆಗಾರರೂ ಆಗಿರುವ ಪ್ರೊ. ಗುರುರಾಜ ಭಟ್ ಇವರು “ಬಿಸಿನೆಸ್ ಲ್ಯಾಬ್”ನ ಆಶ್ರಯದಲ್ಲಿ ಸ್ಕಿಲ್ ಡೆವಲಪ್ಮೆಂಟ್ ಲೈಬ್ರರಿ, ಇ-ಲೈಬ್ರರಿ, ಸಂಶೋಧನಾ ಇನ್ಯುಕುಬೇಟರ್ ಉದ್ಯಮಶೀಲತೆ ಆಭಿವದ್ಧಿ (Entrepreneurship) ಫ್ಯಾಕಲ್ಟಿ ತರಬೇತಿ, ಸಂಶೋಧನಾ ಕೇಂದ್ರ ಹೊಂದುವಿಕೆ ಮುಂತಾದ ಯೋಜನೆಗಳನ್ನು ಸರ್ಕಾರಿ, ಅರೆಸರ್ಕಾರಿ ಹಾಗೂ ಸಿ.ಎಸ್.ಆರ್ ನಿಧಿಯಿಂದ ಪ್ರಾರಂಭಿಸುವ ಕುರಿತು ವಿಸ್ತøತ ವಿವರ ನೀಡಿದರು. ಈ ನಿಟ್ಟಿನಲ್ಲಿ ಹೊಂದಾಣಿಕೆ ಅನುದಾನ (Matching Grant)ಪಡೆಯುವ ಬಗ್ಗೆ ಹಾಗೂ ಕೈಗಾರಿಕೆ, ಇ-ಗ್ರಂಥಾಲಯ, ಮಾನವ ಸಂಪನ್ಮೂಲ ಸಂಸ್ಥೆಗಳೊಂದಿಗೆ ಮೆಮೊರಾಂಡಮ್ ಆಫ್ ಅಂಡರ್ಸ್ಟಾಂಡಿಗ್ (MOU) ನ್ನು ಮಾಡಿಕೊಳ್ಳುವಲ್ಲಿ ಕಾರ್ಯ ಪ್ರವೃತ್ತರಾಗುವತ್ತ ಸಭೆಯಲ್ಲಿ ಚರ್ಚಿಸಲಾಯಿತು.
ಕಾಲೇಜಿನ ಬೇಡಿಕೆ ಪ್ರಕಾರ ಪ್ರತ್ಯೇಕ ಬಿಸಿನೆಸ್ ಲ್ಯಾಬ್ ಯೋಜನೆಯನ್ನು ತಯಾರಿಸಿ ಈ ಬಗ್ಗೆ ಕಾರ್ಯ ಪ್ರವೃತ್ತರಾಗುವತ್ತ ಹಾಗೂ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಗುರುರಾಜ್ ಭಟ್ ಅವರು ಆಶ್ವಾಸನೆ ನೀಡಿದರು. ಎಸ್ ಆ್ಯಂಡ್ ಎಸ್ ಸಂಸ್ಥೆಯ ಅಧಿಕಾರಿ ಸರೋಜ್ ರೈ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ. ಶಿವರಾಮ ಪಿ, ಡಾ.ಜಯಕರ ಭಂಡಾರಿ, ಡಾ.ನಾಗಪ್ಪ ಗೌಡ, ಡಾ.ಪ್ರಕಾಶಚಂದ್ರ, ಡಾ.ಶೈಲಾರಾಣಿ ಬಿ, ಪ್ರೊ. ತ್ರಿಶಾಂತ್ ಹಾಗೂ ಪ್ರೊ.ನಯನ ಕುಮಾರಿ ಭಾಗವಹಿಸಿದ್ದರು.
ಜೂನ್ 26 ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ವಿರೋಧಿ ದಿನವಾಗಿದ್ದು, ಪ್ರಾಂಶುಪಾಲರು ಉಪನ್ಯಾಸಕರುಗಳಿಗೆ ಮಾದಕ ದ್ರವ್ಯ ಸೇವನೆಯ ಪರಿಣಾಮ ಹಾಗೂ ಇದರಿಂದ ಉಂಟಾಗುವ ಹಾನಿ ಬಗ್ಗೆ ವಿವರಿಸಿದರು. ಅಲ್ಲದೆ ತರಗತಿ ಉಪನ್ಯಾಸಕರು ತಮ್ಮ ತರಗತಿಯ ವಾಟ್ಸಪ್ ಗ್ರೂಪ್ಗಳಲ್ಲಿ ಈ ಬಗ್ಗೆ ವಿದ್ಯಾರ್ಥಿಗಳಿಗೆ ಸಂದೇಶ ಕಳುಹಿಸಲು ತಿಳಿಸಿದರು.
ಡಿ.ಸಿ. ಕಚೇರಿಗೆ ಸಲ್ಲಿಸಿದ ಅರ್ಜಿಯ ಸ್ಥಿತಿಗತಿ ಇಂಟರ್ನೆಟ್ನಲ್ಲಿ ಲಭ್ಯ
ಸರಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಗಳ ಕಚೇರಿಯಲ್ಲಿ ಕೂಡ ಇ-ಕಚೇರಿ ತಂತ್ರಾಂಶವನ್ನು ಅನುಷ್ಠಾನಗೊಳಿಸಿ ಕಾರ್ಯರ್ವಹಿಸಲಾಗುತ್ತಿದೆ. ಈ ಸಂಬಂಧ ಅಪರ ಜಿಲ್ಲಾದಿಕಾರಿ ರೂಪ ಎಂ.ಜೆ. ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಇ-ಕಚೇರಿ ತಂತ್ರಾಂಶದ ಬಳಕೆಯಿಂದ ಸಾರ್ವಜನಿಕರು ತಮಗೆ ಸಂಬಂಧಿಸಿದ ಅರ್ಜಿ ಅಥವಾ ಕಡತದ ಚಲನವಲನ ಹಾಗೂ ಸ್ಥಿತಿಗತಿಯನ್ನು ಅಂರ್ತಜಾಲದ ಮುಲಕ ಪರಿಶೀಲಿಸಿಕೊಳ್ಳಬಹುದು. ಇದರಿಂದ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬಹುದಾಗಿದೆ. ಸಾರ್ವಜನಿಕರು ತಾವು ಸಲ್ಲಿಸಿದ ಅರ್ಜಿಯ ಚಲನವಲನ ಹಾಗೂ ಸ್ಥಿತಿಗತಿಯನ್ನು http:// eofficedcmo. karnataka. gov.in/ mysdivdcCJ?language=ku ಲಿಂಕ್ ನ್ನು ಬಳಸಿ ತಮ್ಮ ಅರ್ಜಿ ಪ್ರಸ್ತುತ ಹಂತಗಳನ್ನು ನೋಡಿ ಪರಿಶೀಲಿಸಿಕೊಳ್ಳಬಹುದು ಎಂದು ದ.ಕ. ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉಳ್ಳಾಲ-ಕೊರೊನಾ ನಿರ್ವಹಣೆಗೆ ವಾರ್ಡುವಾರು ತಂಡ ರಚನೆ
ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕೊರೊನಾ ವೈರಸ್ ದಿನದಿಂದ ದಿನಕ್ಕೆ ವಿಪರೀತವಾಗಿ ಹರಡುತ್ತಿದೆ. ಉಳ್ಳಾಲ ಅಜಾದ್ನಗರ ಇಬ್ಬರು ಮಹಿಳೆಯರಿಗೆ ಪಾಸಿಟಿವ್, ಅದರಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು ಪ್ರಸಕ್ತ ಅಜಾದ್ನಗರ ಮತ್ತೊಂದು ಮನೆಯಲ್ಲಿ 16 ಪಾಸಿಟಿವ್ ಕೇಸುಗಳು ದೃಢಪಟ್ಟಿದೆ. ಸಮ್ಮರ್ ಸ್ಯಾಂಡ್ 2,ಕೋಡಿ-1, ತಾಜ್ಮಹಲ್-1 ಮತ್ತು ಪೊಲೀಸ್ ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿಗಳಿಗೆ 4 ಪಾಸಿಟಿವ್ ಪತ್ತೆಯಾಗಿದ್ದು, ಈವರೆಗೆ 26 ಕೇಸುಗಳು ಒಂದು ವಾರದಲ್ಲಿ ದೃಢಪಟ್ಟಿದೆ.
ಉಳ್ಳಾಲದ ನಾಗರಿಕರ ಆರೋಗ್ಯ ಹಿತದೃಷ್ಠಿಯಿಂದ ಕೊರೊನಾ ವೈರಸ್ನ್ನು ನಿಯಂತ್ರಿಸಲು ಸ್ಥಳೀಯ ಜನಪ್ರತಿನಿಧಿ, ದೇವಸ್ಥಾನ, ಮಸೀದಿ, ಚರ್ಚ್, ಹಾಗೂ ಸಂಘ ಸಂಸ್ಥೆಗಳಿಂದ ಆರೋಗ್ಯವಂತ 25 ರಿಂದ 45 ವರ್ಷಗಳ ಒಳಗಿನ ಸ್ಥಳೀಯರು, ಆಸಕ್ತಿಯುಳ್ಳವರು ಸೇರಿಸಿಕೊಂಡು 6 ರಿಂದ 8 ಜನರ ತಂಡ ರಚನೆ ಮಾಡಿಕೊಂಡು ಸ್ಥಳೀಯ ಏರಿಯಾದಲ್ಲಿ ಈ ಕೊರೊನಾ ವೈರಸ್ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ.
ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ನ್ನು ಧರಿಸಿಕೊಳ್ಳುವುದು ಹಾಗೂ ಪೇಟೆ ಅಂಗಡಿಗಳಿಗೆ ಹೋಗುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ಒಬ್ಬ ವ್ಯಕ್ತಿಯಿಂದ ಒಂದು ಮೀಟರ್ ಅಂತರವನ್ನು ಕಾಪಾಡಿಕೊಳ್ಳುವಂತೆ ಜನರಿಗೆ ತಿಳುವಳಿಕೆ ನೀಡುವುದು ಕೊರೊನಾ ಮುಕ್ತ ವಾರ್ಡುಗಳಾಗಿ/ನಿಯಂತ್ರಣ ಮಾಡುವುದಕ್ಕಾಗಿ ಈ ತಂಡದ ಸದಸ್ಯರು ಕೆಲಸ ಮಾಡಬೇಕಾಗಿರುತ್ತದೆ. ಈ ತಂಡಕ್ಕೆ ಸಲಹೆ ಸೂಚನೆ ಅಗತ್ಯವಿದ್ದಾಗ ನಗರಸಭೆಯಿಂದ ನೀಡಲಾಗುವುದು ಹಾಗೂ ಸೀಲ್ಡೌನ್ ಆಗಿರುವ ಪ್ರದೇಶದಲ್ಲಿ ಯಾರು ಹೊರಗಡೆ ಹೋಗಬಾರದು ಮತ್ತು ಹೊರಗಿನಿಂದ ಬರಬಾರದು, ಅಗತ್ಯವಿದ್ದಲ್ಲಿ ಮಾತ್ರ ಹೋಗತಕ್ಕದ್ದು ಇದನ್ನು ತಂಡದವರು ಪರಿಶೀಲಿಸಬೇಕು ಮತ್ತು ಅಗತ್ಯ ವಸ್ತುಗಳ ಬೇಡಿಕೆಗೆ ತಕ್ಕಂತೆ ಸಂಬಂಧಿಸಿದವರಿಂದ ಪಡೆದುಕೊಂಡು ಒದಗಿಸುವುದು ನಗರಸಭಾಪತಿಯಿಂದ ಸ್ವಚ್ಛತೆ ಹಾಗೂ ಸ್ಯಾನಿಟೈಸರ್ ಮಾಡಲಾಗುವುದು.
ಉಳ್ಳಾಲ ನಗರದ ಜನರ ಆರೋಗ್ಯ ಹಿತದೃಷ್ಠಿಯಿಂದ ಕೊರೊನಾ ವೈರಸ್ ಹರಡದಾಗೆ ನಿಯಂತ್ರಣ ಮಾಡಲು ತಂಡದ ಪ್ರತಿನಿಧಗಳು ಕಾರ್ಯನಿರ್ವಹಿಸಬೇಕಾಗಿ ಉಳ್ಳಾಲ ನಗರಸಭೆಯ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಅಪಾರ್ಟ್ಮೆಂಟ್ಗಳ ಮಾರುಕಟ್ಟೆ ಮೌಲ್ಯ ನಿಗಧಿ
ಜೂನ್ 19 ರಂದು ನಡೆದ ಸಭೆಯ ನಡವಳಿಯಲ್ಲಿ ಕೇಂದ್ರೀಯ ಉಪನೊಂದಣಿ ಕಚೇರಿ, ಮಂಗಳೂರು ನಗರದ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಮಾಪನ ಉಪಸಮಿತಿಯ 2019ನೇ ಸಾಲಿನಲ್ಲಿ ಹೊಸ/ಹಳೆಯ ಬಿಟ್ಟು ಹೋದ ಅಪಾರ್ಟ್ಮೆಂಟ್ಗಳ ಮಾರುಕಟ್ಟೆ ಮೌಲ್ಯವನ್ನು ನಿಗಧಿಪಡಿಸಿ ಹಾಗೂ ಅಪಾರ್ಟ್ಮೆಂಟ್ಗಳ ಹೆಸರು ಮತ್ತು ಇದರ ರಸ್ತೆಗಳ ಹೆಸರು ತಿದ್ದುಪಡಿಗೆ ಸಂಬಂಧಪಟ್ಟ ಕಚೇರಿಯಲ್ಲಿ ಸಾರ್ವಜನಿಕ ಆಕ್ಷೇಪಗಳಿಗಾಗಿ ಈಗಾಗಲೇ ಪ್ರಕಟಣೆಗೊಳಿಸಲಾಗಿದ್ದು ಸಾರ್ವಜನಿಕರು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಹದಿನೈದು ದಿವಸದೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಸ್ಥಿರ ಸ್ವತ್ತುಗಳ ಮೌಲ್ಯಮಾಪನ ಉಪಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಉಪನೋಂದಣಾಧಿಕಾರಿ ಇವರ ಪ್ರಕಟಣೆ ತಿಳಿಸಿದೆ.
ರಂಗಶಿಕ್ಷಣ ತರಬೇತಿಗೆ (ಡಿಪ್ಲೋಮಾ) ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣವು ಒಂದು ಪೂರ್ಣ ಪ್ರಮಾಣದ ರಂಗ ರೆಪರ್ಟರಿಯಾಗಿರುತ್ತದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಪ್ರತಿವರ್ಷ ಹತ್ತು ತಿಂಗಳ ರಂಗಶಿಕ್ಷಣದಲ್ಲಿ ಡಿಪ್ಲೋಮಾ ಕೋರ್ಸ್ನ್ನು ನಡೆಸುತ್ತಾ ಬಂದಿದೆ. ಪ್ರಸ್ತುತ 2020-21ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
2020-21ನೇ ಸಾಲಿನ ಈ ರಂಗತರಬೇತಿ ಕೋರ್ಸ್ಗೆ ಸೇರಬಯಸುವ ವಿದ್ಯಾರ್ಥಿಗಳು ಕನಿಷ್ಠ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ವಯೋಮಿತಿ ಅರ್ಜಿ ಸಲ್ಲಿಸಲು ನಿಗಧಿಗೊಳಿಸಿದ ಕಡೆಯ ದಿನಾಂಕಕ್ಕೆ 18 ವರ್ಷಗಳು ತುಂಬಿದ ಆದರೆ 28 ವರ್ಷಗಳು ತುಂಬಿರದ ಅಭ್ಯರ್ಥಿಗಳಾಗಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ಮಾಹೆಯಾನ ರೂ. 3,000 ಗಳ ವಿದ್ಯಾರ್ಥಿ ವೇತನ ಹಾಗೂ ಮಾಸಿಕ ರೂ. 2,000 ಗಳ ಊಟೋಪಚಾರದ ಭತ್ಯೆ ಪಾವತಿಸಲಾಗುತ್ತದೆ.
ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳು ಜೂನ್ 25 ರಿಂದ ರಂಗಾಯಣದ ವೆಬ್ಸೈಟ್ http://www.rangayana.org ನಲ್ಲಿ ಅರ್ಜಿಯನ್ನು ಡೌನ್ಲೋಡ್ ಮಾಡಬಹುದು. ಅಥವಾ ರಂಗಾಯಣದ ಕಚೇರಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅರ್ಜಿ ಶುಲ್ಕ ರಂಗಕೈಪಿಡಿ ಸೇರಿ (ಸಾಮಾನ್ಯ ವರ್ಗ ರೂ. 200, ಪ.ಜಾ, ಪ.ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.150) ಡಿ.ಡಿ.ಯನ್ನು ಜಂಟಿ ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು 570005 ಇವರ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ಜುಲೈ 10ರೊಳಗೆ ತಲುಪುವಂತೆ ಅಂಚೆಯ ಮೂಲಕ ಕಳುಹಿಸಬಹುದು. ಅಥವಾ ಖುದ್ದಾಗಿ ರಂಗಾಯಣದ ಕಚೇರಿಗೆ ಜುಲೈ 10ರ ಸಂಜೆ 5.30 ಗಂಟೆಯೊಳಗೆ ತಲುಪಿಸಬಹುದು.ಅಂಚೆ ಮೂಲಕ ಅರ್ಜಿ ಕಳುಹಿಸುವವರಿಗೆ ಕಚೇರಿಯಿಂದ ಕಳುಹಿಸಬೇಕಾಗಿರುವ ರಂಗಕೈಪಿಡಿ ಅಂಚೆ ವೆಚ್ಚ ರೂ. 30 ನ್ನು ಒಳಗೊಂಡ ಮೊತ್ತದ ಡಿ.ಡಿ. ಸಲ್ಲಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕಡೆಯ ದಿನಾಂಕದಿಂದ 10 ದಿನದೊಳಗೆ ಸಂದರ್ಶನದ ದಿನಾಂಕವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ ಹಾಗೂ ಅಭ್ಯರ್ಥಿಗಳಿಗೆ ಪತ್ರ ಮುಖೇನ ತಿಳಿಸಲಾಗುತ್ತದೆ. ರಂಗಾಯಣದ ಆವರಣದಲ್ಲಿ ನಡೆಯುವ ಈ ಸಂದರ್ಶನಕ್ಕೆ ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲೇ ಹಾಜರಾಗಬೇಕು.
ಪ್ರತಿ ವರ್ಷದಂತೆ ಗರಿಷ್ಠ 20 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಸಂದರ್ಶನದ ದಿನ ಮಧ್ಯಾಹ್ನ ಲಘುಉಪಹಾರದ ವ್ಯವಸ್ಥೆಯನ್ನು ಮಾತ್ರ ರಂಗಾಯಣದಿಂದ ಮಾಡಲಾಗುತ್ತದೆ. ಯಾವುದೇ ವಸತಿ ವ್ಯವಸ್ಥೆ ಇರುವುದಿಲ್ಲ. ಕೋವಿಡ್ ನಿರ್ಬಂಧಗಳ ಹಿನ್ನಲೆಯಲ್ಲಿ ಸರ್ಕಾರವು ಹೊರಡಿಸುವ ಮಾರ್ಗಸೂಚಿಗಳನ್ನು ಅನುಸರಿಸಿ ಈ ಕೋರ್ಸ್ ಆರಂಭವಾಗುವ ದಿನಾಂಕ ಮತ್ತು ಮುಕ್ತಾಯಗೊಳ್ಳುವ ದಿನಾಂಕವನ್ನು ನಿಗದಿಗೊಳಿಸಲಾಗುವುದು. ಹೆಚ್ಚಿನ ವಿವರಕ್ಕಾಗಿ ದೂರವಾಣಿ ಸಂಖ್ಯೆ 0821-2512639, 9448938661, 9916600027 ಮತ್ತು 9448422343 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ತೋಟಗಾರಿಕಾ ಬೆಳೆ ವಿಮೆ ಸೌಲಭ್ಯ
ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಬೆಳೆ ವಿಮೆ ಕಾರ್ಯಕ್ರಮವನ್ನು ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ (WBCIS) ಕಾರ್ಯಕ್ರಮದಲ್ಲಿ 2020, 2021, 2022 ಮೂರು ವರ್ಷಗಳಿಗೆ ಮುಂಗಾರು ಹಂಗಾಮಿಗೆ ಅನ್ವಯಿಸಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ. ಈ ಯೋಜನೆಯು ಕೇಂದ್ರ ಸರಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿ ತೋಟಗಾರಿಕೆ ರೈತರಿಗೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಉಂಟಾದಲ್ಲಿ ವಿಮಾ ನಷ್ಟ ಪರಿಹಾರವನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ಈ ಯೋಜನೆಯನ್ನು ಮುಂಗಾರು ಹಂಗಾಮಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನಗರ ಸ್ಥಳೀಯಾಡಳಿತ ಸಂಸ್ಥೆ ಹಾಗೂ ಎಲ್ಲಾ 231 ಗ್ರಾಮ ಪಂಚಾಯತ್ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಸದರಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2020, 2021, 2022ನೇ ಮುಂಗಾರು ಹಂಗಾಮಿಗೆ ಅಡಿಕೆ ಮತ್ತು ಕರಿಮೆಣಸು ಬೆಳೆಗಳನ್ನು ಅಧಿಸೂಚಿಸಿ ಆದೇಶ ಹೊರಡಿಸಲಾಗಿದೆ. 2020ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ವಿಮಾ ಕಂತು ಪಾವತಿಸಲು ಜೂನ್ 30ಅಂತಿಮ ದಿನವಾಗಿರುತ್ತದೆ. ಈ ಯೋಜನೆಯು ಅಧಿಸೂಚಿತ ಬೆಳೆಗಳಿಗೆ ಬ್ಯಾಂಕ್ಗಳಿಂದ (ರಾಷ್ಟ್ರೀಕೃತ ಬ್ಯಾಂಕ್/ ಖಾಸಗಿ/ ಸಹಕಾರಿ ಬ್ಯಾಂಕ್ಗಳು) ಬೆಳೆ ಸಾಲ ಪಡೆದಿರುವ ರೈತರಿಗೆ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರಿಗೆ ಐಚ್ಚಿಕವಾಗಿರುತ್ತದೆ. ಈ ಯೋಜನೆಯಡಿ ತೋಟಗಾರಿಕೆ ರೈತರು ಅಧಿಸೂಚಿತ ಬೆಳೆಗಳಿಗೆ ಸಂಬಂಧಿಸಿ ಸಾಲ ಪಡೆದುಕೊಂಡಿರುವ ಬ್ಯಾಂಕ್ಗಳ ಮೂಲಕ ಹಾಗೂ ಸಾಲ ಪಡೆಯದಿರುವ ರೈತರು ಉಳಿತಾಯ ಖಾತೆಯನ್ನು ಹೊಂದಿರುವ ಬ್ಯಾಂಕ್ಗಳ ಮೂಲಕ ವಿಮಾ ಕಂತುಗಳನ್ನು ಪಾವತಿಸಿ ಯೋಜನೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಡಿ ಅಧಿಸೂಚಿತ ತೋಟಗಾರಿಕೆ ಬೆಳೆಗಳನ್ನು 2020ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ಗ್ರಾಮ ಪಂಚಾಯತ್(Unit Area of Insurance)ಮಟ್ಟದಲ್ಲಿ ಅನುಷ್ಠಾನಗೊಳಿಸಲು ಕರ್ನಾಟಕ ಸರಕಾರಿ ಆದೇಶ ಸಂ:ತೋಇ:208:ತೋಸವಿ:2020:ಬೆಂಗಳೂರು 2020 ಜೂನ್ 25 ರ ಮೂಲಕ ಅಧಿಸೂಚಿಸಲಾಗಿದೆ.
ಈ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಹಾಗೂ ಕರಿಮೆಣಸು ಬೆಳೆಗಳನ್ನು ಮುಂಗಾರು ಹಂಗಾಮಿಗೆ ಸೇರ್ಪಡೆಗೊಳಿಸಲಾಗಿದೆ. ಈ ಯೋಜನೆಯ ಅನುಸಾರ ಬೆಳೆ ಸಾಲ ಪಡೆದಿರುವ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರಿಗೆ ಅಧಿಸೂಚಿತ ಬೆಳೆಗಳಿಗೆ ಈ ಕೆಳಗಿನಂತೆ ವಿಮಾ ಕಂತನ್ನು ಪಾವತಿಸಿ ವಿಮೆಯನ್ನು ಹೊಂದಬಹುದು.
ಅಡಿಕೆ ಬೆಳೆಗೆ ಪ್ರತೀ ಹೆಕ್ಟೆರ್ಗೆ ವಿಮಾ ಮೊತ್ತ ರೂ 1,28,000 ರೈತರು ಪಾವತಿಸಬೇಕಾದ ವಿಮಾಕಂತು (ಶೇ.5) ರೂ. 6400, ಕರಿಮೆಣಸು ಬೆಳೆಗೆ ಪ್ರತೀ ಹೆಕ್ಟೆರ್ಗೆ ವಿಮಾ ಮೊತ್ತ ರೂ 47,000 ರೈತರು ಪಾವತಿಸಬೇಕಾದ ವಿಮಾಕಂತು (ಶೇ.5) ರೂ. 2350 ಆಗಿರುತ್ತದೆ.
ಈ ಯೋಜನೆಯಡಿ ಸರ್ಕಾರದ ಪಾಲನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ.50 ರ ಅನುಪಾತದಲ್ಲಿ ಭರಿಸುತ್ತದೆ. ಈ ಹವಾಮಾನ ಆಧಾರಿತ ವಿಮಾ ಯೋಜನೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಮಳೆ ಮಾಪನ ಮತ್ತು ಹವಾಮಾನ ಮಾಪನ ಕೇಂದ್ರಗಳು, ಭಾರತೀಯ ಹವಾಮಾನ ಇಲಾಖೆಯ ಕೇಂದ್ರಗಳು, ಕೃಷಿ ವಿಶ್ವವಿದ್ಯಾನಿಲಯಗಳು, ರಾಜ್ಯ ಜಲ ಸಂಪನ್ಮೂಲ ಅಭಿವೃಧ್ಧಿ ಸಂಸ್ಥೆಯ ಕೇಂದ್ರಗಳಲ್ಲಿ ದಾಖಲಿಸಲಾದ ಹವಾಮಾನ ಅಂಶಗಳ ಮಾಹಿತಿಯ ಆಧಾರದಲ್ಲಿ ಬೆಳೆ ವಿಮೆ ನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸಲಾಗುವುದು. ಬೆಳೆ ವಿಮೆಗಳಿಗೆ ಸಂಬಂಧಿಸಿ ಅಧಿಸೂಚಿತ ಬೆಳೆಗಳ Term Sheet ಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ತಾಂತ್ರಿಕ ಸಮಿತಿಯಲ್ಲಿ ಅನುಮೋದಿಸಿ ಸಲ್ಲಿಸಲಾಗಿರುತ್ತದೆ. 2016ರ ಮುಂಗಾರು ಹಂಗಾಮಿನಿಂದ ಈ ಯೋಜನೆಯ ಅನುಷ್ಠಾನವನ್ನು ಕರ್ನಾಟಕ ಸರ್ಕಾರದಿಂದ ಅಭಿವೃದ್ದಿಪಡಿಸಲಾದ Online portal ([email protected]) ಮೂಲಕ ಮಾತ್ರವೇ ರೈತರ ವಿವರಗಳನ್ನು ನೊಂದಾಯಿಸಿ ವಿಮಾ ಪಾಲಿಸಿ ಹೊಂದಲು ಅನುಷ್ಠಾನಕ್ಕೆ ತರಲಾಗಿದೆ.
ಈ ಯೋಜನೆಯಡಿ 2020ರ ಮುಂಗಾರು ಹಂಗಾಮಿನಲ್ಲಿ ಸ್ಥಳೀಯ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿ ಕಲ್ಲು ಮಳೆ, ಭೂಕುಸಿತ ಮತ್ತು ಮೇಘ ಸ್ಫೋಟ(Cloud Burst)ಇವುಗಳಿಂದ ಬೆಳೆ ನಷ್ಟ ಸಂಭಂವಿಸಿದಲ್ಲಿ ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ (Bank) ಅಥವಾ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ಹಾನಿ ಸಂಭವಿಸಿದ 72 ಗಂಟೆಗೊಳಗಾಗಿ ಬೆಳೆ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಯ ಕಾರಣಗಳನ್ನು ಲಿಖಿತವಾಗಿ ನೀಡತಕ್ಕದ್ದು, ಇಂತಹ ಸಂಧರ್ಭದಲ್ಲಿ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಯು ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳ ಸಮನ್ವಯದೊಂದಿಗೆ ಇತ್ಯರ್ಥ ಪಡಿಸಲಾಗುತ್ತದೆ. ಇದರ ಹೊರತು ಸಾಮಾನ್ಯ ಸಂಧರ್ಭಗಳಲ್ಲಿ ಬೆಳೆ ನಷ್ಟಗಳನ್ನು ಜಿಲ್ಲಾ ಸಮಿತಿ ಹಾಗೂ ಸರ್ಕಾರಗಳು ಅನುಮೋದಿಸಿರುವ Term Sheet ಗಳಲ್ಲಿನ Pay out structure, duration, index ಗಳನ್ನು ಮಾತ್ರ ಪರಿಗಣಿಸಿಬೆಳೆ ವಿಮಾ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಗಳು ಲೆಕ್ಕ ಹಾಕಿ ಇತ್ಯರ್ಥ ಪಡಿಸುತ್ತವೆ.
ಹಣಕಾಸು ಸಂಸ್ಥೆಗಳಿಂದ ಬೆಳೆ ಸಾಲವನ್ನು ಹೊಂದಿಲ್ಲದ ತೋಟಗಾರಿಕೆ ರೈತರು ನಿಗದಿತ ಅರ್ಜಿಯೊಂದಿಗೆ ಜಮೀನಿನ ಪಹಣಿ ಪ್ರತಿ(RTC), ಉಳಿತಾಯ ಖಾತೆ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಸರ್ಕಾರದ ಇತರೆ ಯಾವುದೇ ಅಧಿಕೃತ ಗುರುತಿನ ಚೀಟಿ, ಸ್ವಯಂ ಘೋಷಿಸಿ ದೃಢೀಕರಿಸಿದ ಜಮೀನಿನ ಬೆಳೆ ಪತ್ರ ಹಾಗೂ ಪ್ರಿಮಿಯಂ ವಿಮಾ ಮೊತ್ತದೊಂದಿಗೆ ಸಲ್ಲಿಸಿ ನೊಂದಣಿ ಮಾಡಿಸಿಕೊಳ್ಳಬಹುದು.
ಈ ಯೋಜನೆಯಡಿ ವಿಮಾ ನಷ್ಟ ಪರಿಹಾರವನ್ನು Adhar Card enabled RTGS/NEFT ಮೂಲಕ ಇತ್ಯರ್ಥಪಡಿಸಲಾಗುವ ಕಾರಣ ಎಲ್ಲಾ ರೈತರು ಆಧಾರ್ ಕಾರ್ಡ್ ಮಾಹಿತಿಗಳನ್ನು ಒದಗಿಸಲು ಕೋರಲಾಗಿದೆ.
ಈ ಯೋಜನೆಯನ್ನು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳು ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿಸಲು ಉದ್ದೇಶಿಸಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದರಿ ಯೋಜನೆಯ ಲಾಭವನ್ನು ಪಡೆಯಬಹುದು.
ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ/ಗ್ರಾಮೀಣ ಸಹಕಾರಿ ಬ್ಯಾಂಕ್/ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಥವಾ ಕೃಷಿ ಅಧಿಕಾರಿಗಳು/ತಾಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು/ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ಸಂಪರ್ಕಿಸ ಬಹುದಾದ ದೂರವಾಣಿ ಸಂಖ್ಯೆ:ದ.ಕ.ಜಿ.ಪಂ., ಮಂಗಳೂರು ತೋಟಗಾರಿಕೆ ಉಪನಿರ್ದೇಶಕರು ದೂರವಾಣಿ ಸಂಖ್ಯೆ 9448999226, ಜಿ.ಪಂ. ಮಂಗಳೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ದೂರವಾಣಿ ಸಂಖ್ಯೆ 8277806378 (0824-2423615), ಜಿ.ಪಂ ಬಂಟ್ವಾಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ದೂರವಾಣಿ ಸಂಖ್ಯೆ 8277806371 (08255-234102), ಜಿ.ಪಂ ಪುತ್ತೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ದೂರವಾಣಿ ಸಂಖ್ಯೆ 9731854527 (08251-230905), ಜಿ.ಪಂ., ಸುಳ್ಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ದೂರವಾಣಿ ಸಂಖ್ಯೆ 9880993238 (08257-232020), ಜಿ.ಪಂ ಬೆಳ್ತಂಗಡಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ.8277806380 (08256-232148) ಸಂಪರ್ಕಿಸಲು ಮಂಗಳೂರು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಆಯುಷ್ ರೋಗ ನಿರೋಧಕ ಔಷಧಿಗಳ ವಿತರಣೆ
ಭಾರತ ಸರ್ಕಾರದ ಆಯುಷ್ ಮಂತ್ರಾಲಯದಿಂದ ಸೂಚಿಸಲ್ಪಟ್ಟಿರುವ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುಷ್ ಔಷಧಿಗಳನ್ನು ಜಿಲ್ಲೆಯ ಕೆಲವು ಸಂಸ್ಥೆಗಳಲ್ಲಿ ವಿತರಿಸಲಾಗುತ್ತಿದೆ.
ವಿವರ ಇಂತಿವೆ:-ಮಂಗಳೂರು ಲಾಲ್ಬಾಗ್ ಹ್ಯಾಟ್ಹಿಲ್ನಲ್ಲಿರುವ ಜಿಲ್ಲಾ ಸರ್ಕಾರಿ ಆಯುರ್ವೇದ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆ, ಉಳ್ಳಾಲ ಆಯುಷ್ ಘಟಕದ ಪ್ರಾಥಮಿಕ ಆರೋಗ್ಯ ಕೇಂದ್ರ, ಜೋಕಟ್ಟೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಐಕಳ ಬಳ್ಕುಂಜೆಯ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಕಸಬಾ ಬೆಂಗರೆ ಸರ್ಕಾರಿ ಯುನಾನಿ ಚಿಕಿತ್ಸಾಲಯ, ಮುಲ್ಕಿ ಸರ್ಕಾರಿ ಯುನಾನಿ ಚಿಕಿತ್ಸಾಲಯ ಕೆರಕಾಡ್, ಬಂಟ್ವಾಳ ತಾಲೂಕಿನ ಸಜಿಪಮೂಡದ ಸಕಾರಿ ಆಯುರ್ವೇಧ ಚಿಕಿತ್ಸಾಲಯ, ಬೆಳ್ತಂಗಡಿ ತಾಲೂಕಿನ ಕಣಿಯೂರು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಪುತ್ತೂರು ತಾಲೂಕಿನ ಆಯುಷ್ ವಿಭಾಗ ಸಾರ್ವಜನಿಕ ಆಸ್ಪತ್ರೆ, ಸುಳ್ಯ ತಾಲೂಕಿನ ತಾಲೂಕು ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ಆಯುಷ್ ಔಷಧಿಗಳನ್ನು ವಿತರಿಸಲಾಗುತ್ತಿದ್ದು ಸಾರ್ವಜನಿಕರು ಪ್ರಯೋಜನವನ್ನು ಪಡೆಯುವಂತೆ ಜಿಲ್ಲಾ ಆಯುಷ್ ಇಲಾಖಾ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824 2453088 ನ್ನು ಸಂಪರ್ಕಿಸಲು ಎಂದು ದ.ಕ. ಜಿಲ್ಲಾ ಆಯುಷ್ ಅಧಿಕಾರಿಯ ಪ್ರಕಟಣೆ ತಿಳಿಸಿದೆ.
ರಾಜ್ಯ ಸಚಿವ ಸ್ಥಾನಮಾನ
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಇವರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಿ ರಾಜ್ಯ ಸರಕಾರ ಆದೇಶಿಸಿದೆ
ಕೋವಿಡ್: ಖಾಸಗೀ ಆಸ್ಪತ್ರೆಗಳಲ್ಲಿ ಬೆಡ್ ಕಾದಿರಿಸಲು ಸಂಸದರ ಸೂಚನೆ
ಕೊರೊನಾ ರೋಗಿಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ವೆನ್ಲಾಕ್ ಸಾಮಥ್ರ್ಯ ಮೀರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಖಾಸಗೀ ಆಸ್ಪತ್ರೆಗಳಲ್ಲೂ ಹೆಚ್ಚುವರಿ ಬೆಡ್ಗಳನ್ನು ಕಾದಿರಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಆರೋಗ್ಯ ಇಲಾಖೆಗೆ ತಿಳಿಸಿದ್ದಾರೆ. ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಪ್ರಗತಿ ಪರಿಶೀಲನೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೊರೋನಾ ರೋಗವು ವ್ಯಾಪಕವಾಗಿದ್ದು, ಈ ಸಂಧರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯ ಅನುಸಾರ ನಿವೃತ್ತಿ ಹೊಂದಿದ ಎಮ್.ಬಿ.ಬಿ.ಎಸ್ ಅಥವಾ ಆಯುಷ್ ವೈದ್ಯಾಧಿಕಾರಿಗಳು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು. ನರ್ಸಿಂಗ್ ಸಿಬ್ಬಂದಿಗಳ ಕೊರತೆಯಾದರೆ ಖಾಸಗೀ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ಸೇವೆಯನ್ನು ಪಡೆಯಲು ಕ್ರಮ ಕೈಗೊಳ್ಳುವಂತೆ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದ ಜೊತೆ ನೇರ ಸಂಪರ್ಕದಲ್ಲಿದ್ದು, ಕೊರೊನಾ ರೋಗಿಯ ಸ್ಥಿತಿಗತಿಯ ಬಗ್ಗೆ ಪ್ರತಿ ರೋಗಿಯ ಮಾಹಿತಿಯನ್ನು ನೀಡಬೇಕು. ಆಸ್ಪತ್ರೆಗಳಲ್ಲಿ ಅಂಬ್ಯುಲೆನ್ಸ್ ಅಭಾವ ಉಂಟಾಗದಂತೆ ನೋಡಿಕೊಂಡು ಅಗತ್ಯ ಇದ್ದರೆ ಮೆಡಿಕಲ್ ಕಾಲೇಜುಗಳಿಂದ ಬಾಡಿಗೆಗೆ ಹೆಚ್ಚುವರಿ ಅಂಬ್ಯುಲೆನ್ಸ್ ಪಡೆದುಕೊಳ್ಳಬೇಕು ಎಂದರು.
ಮನೆಯಲ್ಲಿರುವ ವ್ಯಕ್ತಿಗಳಿಗೆಜ್ವರದ ಲಕ್ಷಣ ಕಾಣಿಸಿಕೊಂಡರೆ ಆ ರೋಗಿಯನ್ನು ತಕ್ಷಣ ಆಶಾಕಾರ್ಯಕರ್ತೆಯರು ಗುರುತಿಸಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಹೇಳಿದರು. ಕೊರೊನಾ ರೋಗಿಯ ಶವಸಂಸ್ಕಾರವನ್ನು ಮಾಡುವಾಗ ಸರ್ಕಾರದ ಮಾರ್ಗಸೂಚಿಯಂತೆ ಪಿ.ಪಿ.ಟಿ ಕಿಟ್ ಧರಿಸಿರುವ, ಸಂಬಂಧಪಟ್ಟ ಸಿಬ್ಬಂದಿಗಳು ಮಾತ್ರ ಪಾಲ್ಗೊಳ್ಳಬೇಕು. ಅನ್ಯ ವ್ಯಕ್ತಿಗಳಿಗೆ ಅಲ್ಲಿ ಹಾಜರಿರಲು ಅವಕಾಶ ನೀಡಬಾರದು, ಅಂತವರ ವಿರುದ್ಧ ಕೇಸು ದಾಖಲಿಸಲು ನಳಿನ್ ಕುಮಾರ್ ಕಟೀಲು ಸೂಚಿಸಿದರು. ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಉಂಟಾಗಬಾರದು ಎನ್ನುವ ಉದ್ದೇಶದಿಂದ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಇನ್ನಿತರ ಸಿಬ್ಬಂದಿಗಳಿಗೆ ತರಬೇತಿ ನೀಡಿದರೆ ಉತ್ತಮಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮತ್ತಿತರರು ಉಪಸ್ಥಿತರಿದ್ದರು.
ವೆನ್ಲಾಕ್ ಆಸ್ಪತ್ರೆಗೆ ವೆಂಟಿಲೇಟರ್ಗಳ ಕೊಡುಗೆ
ಕೋವಿಡ್ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ಗಳ ಕೊರತೆ ಇದ್ದು, ಜಿಲ್ಲೆಯ ವಿವಿಧ ಉದ್ಯಮಗಳು ವೆನ್ಲಾಕ್ ಆಸ್ಪತ್ರೆಗೆ ನೀಡಿದ ವೆಂಟಿಲೇಟರ್ಗಳ ಹಸ್ತಾಂತರ ಕಾರ್ಯಕ್ರಮ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಎಂ.ಆರ್.ಪಿ.ಎಲ್ ವತಿಯಿಂದ 5, ಎಂ.ಸಿ.ಎಫ್ – 2, ಎನ್.ಎಂ.ಪಿ.ಟಿ – 3 ಹಾಗೂ ಕುದುರೆಮುಖ ಅದಿರು ಸಂಸ್ಥೆಯ ವತಿಯಿಂದ 2 ವೆಂಟಿಲೇಟರ್ಗಳನ್ನು ಇಂದು ಸಂಸ್ಥೆಯ ಪ್ರತಿನಿಧಿಗಳು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ವೆನ್ಲಾಕ್ ಆಸ್ಪತ್ರೆಗೆ ಸುಮಾರು 60 ವೆಂಟಿಲೇಟರ್ಗಳ ಅಗತ್ಯವಿದೆ. ಲೋಕಸಭಾ ಸದಸ್ಯರ ಪ್ರಧೇಶಾಭಿವೃದ್ಧಿ ನಿಧಿಯಿಂದ ಇದಕ್ಕಾಗಿ 1 ಕೋಟಿ ರೂ. ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಶಾಸಕರ ನಿಧಿಯಿಂದ 2 ವೆಂಟಿಲೇಟರ್ ಹಾಗೂ ಮಂಗಳೂರು ದಕ್ಷಿಣ ಮತ್ತು ಉತ್ತರ ಶಾಸಕರು ತಮ್ಮ ಅನುದಾನದಿಂದ ತಲಾ 2 ವೆಂಟಿಲೇಟರ್ಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಇದರಿಂದ ಒಟ್ಟಾರೆ 30 ವೆಂಟಿಲೇಟರ್ಗಳು ವೆನ್ಲಾಕ್ ಆಸ್ಪತ್ರೆಗೆ ದೊರಕಿದಂತಾಗಿದೆ ಎಂದು ಹೇಳಿದರು.
ಇಂದು ವಿವಿಧ ಕೈಗಾರಿಕಾ ಸಂಸ್ಥೆಗಳು ಕೊಡುಗೆ ನೀಡಿರುವುದು ಶ್ಲಾಘನೀಯ. ಕೋವಿಡ್ ಸಂದರ್ಭದಲ್ಲಿ ಹಲವಾರು ಸಂಘಸಂಸ್ಥೆಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿವೆ ಎಂದು ಅವರು ಹೇಳಿದರು.
ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ ಮತ್ತಿತರರು ಇದ್ದರು.
ವೆನ್ಲಾಕ್ – ಲೇಡಿಘೋಷನ್ ಆಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಮಂಗಳೂರು ಸ್ಮಾರ್ಟ್ಸಿಟಿ ಅನುದಾನದಲ್ಲಿ ಜಿಲ್ಲಾ ವೆನ್ಲಾಕ್ ಹಾಗೂ ಲೇಡಿಘೋಷನ್ ಆಸ್ಪತ್ರೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಚಿವರು ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ವೆನ್ಲಾಕ್ ಹಾಗೂ ಲೇಡಿಘೋಷನ್ ಆಸ್ಪತ್ರೆಗಳು ಮಹತ್ವದ ಸೇವೆಯನ್ನು ನೀಡುತ್ತಿವೆ. ಜನಸಾಮಾನ್ಯರ ಆಶಾಕಿರಣವಾಗಿರುವ ಈ ಆಸ್ಪತ್ರೆಗಳ ಅಭಿವೃದ್ಧಿಯು ಸಾರ್ವಜನಿಕರಿಗೆ ಸರಕಾರವು ನೀಡುತ್ತಿರುವ ದೊಡ್ಡ ಕೊಡುಗೆಯಾಗಿದೆ ಎಂದರು. ಸ್ಮಾರ್ಟ್ಸಿಟಿ ಮೂಲಕ ಮಂಗಳೂರು ನಗರದಲ್ಲಿ ಸುಮಾರು ಒಂದು ಸಾವಿರ ಕೋಟಿ ರೂ. ಗಳಿಗೂ ಅಧೀಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಮಂಗಳೂರಿನಲ್ಲಿ ನಡೆಯುತ್ತಿವೆ. ನಗರದ ಪ್ರಗತಿಯ ದೂರದೃಷ್ಠಿಗೆ ಇದು ಮಹತ್ವವಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸ್ಮಾರ್ಟ್ಸಿಟಿಯಿಂದ ವೆನ್ಲಾಕ್ ಮತ್ತು ಲೇಡಿಘೋಷನ್ ಆಸ್ಪತ್ರೆಯ ಅಭಿವೃದ್ಧಿಗೆ ಸುಮಾರು ರೂ. 50 ಕೋಟಿಗಳಿಗೂ ಅಧಿಕ ಮೊತ್ತ ವೆಚ್ಚ ಮಾಡಲಾಗುತ್ತಿದೆ. ಈ ಆಸ್ಪತ್ರೆಗಳು ಹಲವು ವರ್ಷಗಳಿಂದ ಎದುರಿಸುತ್ತಿದ್ದ ಮೂಲಭೂತ ಸೌಲಭ್ಯಗಳ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಮಂಗಳೂರು ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ಮಾತನಾಡಿ, ರೂ. 5.83 ಕೋಟಿ ವೆಚ್ಚದಲ್ಲಿ ವೆನ್ಲಾಕ್ ಆಸ್ಪತ್ರೆಯ ಆವರಣದ ಸಮಗ್ರ ಅಭಿವೃದ್ಧಿ ಹಾಗೂ ರೂ. 2.31 ಕೋಟಿ ವೆಚ್ಚದಲ್ಲಿ ಲೇಡಿಘೋಷನ್ ಆಸ್ಪತ್ರೆಯ ಆವರಣದಲ್ಲಿ ಎರಡನೇ ಮಹಡಿ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದರು.
ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಮೇಯರ್ ದಿವಾಕರ್, ಉಪಮೇಯರ್ ವೇದಾವತಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ ಮತ್ತಿತರರು ಇದ್ದರು.
ಗಡಿಭಾಗದಿಂದ ಸಂಚರಿಸುವವರ ಇ-ಪಾಸ್ಅವಧಿ ವಿಸ್ತರಣೆ
ಕೋವಿಡ್-19 ಸಾಂಕ್ರಾಮಿಕರೋಗದಕಾರಣದಿಂದಾಗಿಕಾಸರಗೋಡುಜಿಲ್ಲಾಗಡಿಭಾಗದಿಂದ ಸಂಚರಿಸುವ ನಿವಾಸಿಗಳಿಗೆ, ವೃತ್ತಿಪರರಿಗೆ, ವಿದ್ಯಾರ್ಥಿಗಳಿಗೆ, ಮತ್ತುಇತರಕಾರ್ಮಿಕರಿಗೆ, ದಿನ ನಿತ್ಯದಅಂತರ್ರಾಜ್ಯ ಸಂಚಾರಕ್ಕೆ ಅನುಕೂಲವಾಗುವಂತೆ ಇ-ಪಾಸ್ ವ್ಯವಸ್ಥೆಯನ್ನು ಸಹಾಯಕಆಯುಕ್ತರಕಚೇರಿ, ಮಂಗಳೂರು ಉಪವಿಭಾಗಇಲ್ಲಿ ವಿತರಿಸಲಾಗಿರುತ್ತದೆ.
ಗಡಿಭಾದಿಂದ ವಿವಿಧ ಕಾರಣಗಳಿಗೆ ತಲಪಾಡಿಚೆಕ್ಪೋಸ್ಟ್ ಮೂಲಕ ದಕ್ಷಿಣಕನ್ನಡಜಿಲ್ಲೆಗೆ ಪ್ರವೇಶಿಸುವವರು ಕಡ್ಡಾಯವಾಗಿ ಇ-ಪಾಸ್ನ್ನು ಹೊಂದಿರಬೇಕು. ಮೊದಲು ನೀಡಲಾಗಿರುವ ಇ-ಪಾಸ್ಅವಧಿಯುಜೂನ್ 30 ರಂದು ಮುಕ್ತಾಯಗೊಳ್ಳಲಿರುವುದರಿಂದ ಇ-ಪಾಸ್ ದಿನಾಂಕವನ್ನುಜುಲೈ 4 ರವರೆಗೆ ವಿಸ್ತರಿಸಲಾಗಿದೆ. ಪಾಸ್ಗಳ ನವೀಕರಣಕ್ಕಾಗಿ ಮರುಅರ್ಜಿ ಸಲ್ಲಿಸುವಅಗತ್ಯವಿಲ್ಲ ಎಂದುಮಂಗಳೂರು ಉಪವಿಭಾಗದ ಸಹಾಯಕಆಯುಕ್ತರ ಪ್ರಕಟಣೆ ತಿಳಿಸಿದೆ.
ಮಂಗಳೂರು ತಾ.ಪಂ. ಕಚೇರಿಯಲ್ಲಿ ಸಾರ್ವಜನಿಕ ಸೇವೆ ಸ್ಥಗಿತ
ಮಂಗಳೂರು ತಾಲೂಕಿನಾದ್ಯಂತಕೊರೋನಾಕೋವಿಡ್-19 ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕು ಪಂಚಾಯತ್ಕಚೇರಿಯಲ್ಲಿಒಂದು ವಾರಅಂದರೆಜುಲೈ 1 ರಿಂದ7 ರವರೆಗೆ ಸಾರ್ವಜನಿಕಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಂಗಳೂರುತಾಲೂಕು ಪಂಚಾಯತ್ಅಧ್ಯಕ್ಷ ಮುಹಮ್ಮದ್ ಮೋನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆ–ಅರ್ಜಿ ಆಹ್ವಾನ
ದಕ್ಷಿಣ ಕನ್ನಡ ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಖಾಲಿ ಇರುವ 10 ಅಂಗನವಾಡಿ ಕಾರ್ಯಕರ್ತೆ ಹಾಗೂ 66 ಅಂಗನವಾಡಿ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ವೆಬ್ಸೈಟ್ ವಿಳಾಸ: http://www.anganwadirecruit.kar.nic.in ಆಗಿದೆ. ಜುಲೈ 7 ರಂದುಅರ್ಜಿ ಸಲ್ಲಿಸಲು ಪ್ರಾರಂಭದ ದಿನ ಹಾಗೂ ಜುಲೈ 30ಅರ್ಜಿ ಸಲ್ಲಿಸುವಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಶಿಶು ಅಭಿವೃದ್ಧಿಯೋಜನಾಕಚೇರಿಯನ್ನು ಸಂಪರ್ಕಿಸಬಹುದಾಗಿದೆಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಕ್ಷೌರಿಕರು ಮತ್ತುಅಗಸರಿಂದ ಪರಿಹಾರಧನಕ್ಕೆಅರ್ಜಿಆಹ್ವಾನ–ಅವಧಿ ವಿಸ್ತರಣೆ
ಕೋವಿಡ್-19 ಹಿನ್ನಲೆಯಲ್ಲಿ 18 ರಿಂದ 65 ವರ್ಷದೊಳಗಿನ ಕ್ಷೌರಿಕ ಮತ್ತು ಅಗಸ ವೃತ್ತಿಯನ್ನು ನಿರ್ವಹಿಸುತ್ತಿರುವ ಬಡತನರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರಚೀಟಿ ಹೊಂದಿರುವ) ಅಸಂಘಟಿತ ವಲಯದಕಾರ್ಮಿಕರಿಗೆ ಪರಿಹಾರವಾಗಿ ರೂ.5000ಗಳನ್ನು ಪಡೆಯಲುಅರ್ಹರಿಂದಅರ್ಜಿಆಹ್ವಾನಿಸಲಾಗಿದೆ. ಫಲಾನುಭವಿಗಳು ತಾವು ಕೆಲಸ ನಿರ್ವಹಿಸುತ್ತಿರುವ ವ್ಯಾಪ್ತಿಯ ಸೇವಾಸಿಂಧು ಕೇಂದ್ರದ ಸೇವಾಸಿಂಧು ಪೋರ್ಟಲ್ ನಲ್ಲಿ ನಿಗಧಿತಅರ್ಜಿಯಲ್ಲಿ ಮಾಹಿತಿ ಭರ್ತಿ ಮಾಡಿ, ಬ್ಯಾಂಕ್ಖಾತೆಯೊಂದಿಗೆಜೋಡನೆಯಾಗಿರುವಆಧಾರ್ಕಾರ್ಡ್, ವಿಳಾಸ ದೃಢೀಕರಣದ ಪಡಿತರಚೀಟಿ, ಚುನಾವಣಾಗುರುತಿನಚೀಟಿ, ಮೊಬೈಲ್ ಸಂಖ್ಯೆ, ಸ್ವಯಂಘೋಷಣಾ ಪತ್ರ, ಉದ್ಯೋಗ ಪ್ರಮಾಣ ಪತ್ರ ಹಾಗೂ ತಮ್ಮಛಾಯಾಚಿತ್ರವನ್ನುಅಪಲೋಡ್ ಮಾಡಬೇಕು.
ಕ್ಷೌರಿಕ, ಅಗಸ ವೃತ್ತಿಯನ್ನು ನಿರ್ವಹಿಸುತ್ತಿರುವಕುರಿತುಉದ್ಯೋಗ ಪ್ರಮಾಣ ಪತ್ರ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯಕಂದಾಯಅಧಿಕಾರಿ, ಕಂದಾಯ ನಿರೀಕ್ಷಕರು, ಹಾಗೂ ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರರು, ಉಪತಹಸೀಲ್ದಾರರು, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತಿಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ. ಕಾರ್ಮಿಕಇಲಾಖೆಯ ನಿರೀಕ್ಷಕರು, ಕಾರ್ಮಿಕ ಅಧಿಕಾರಿಗಳು, ಸಹಾಯಕಕಾರ್ಮಿಕಆಯುಕ್ತರು, ಯಾವುದಾದರೊಂದುಅಧಿಕಾರಿಯಿಂದ ದೃಢೀಕರಿಸಿ ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿಅಪ್ಲೋಡ್ ಮಾಡಬೇಕಾಗಿರುತ್ತದೆ.ಒಂದುಕುಟುಂಬದಲ್ಲಿಒಂದಕ್ಕಿಂತ ಹೆಚ್ಚು ಜನ ವೃತ್ತಿಯಲ್ಲಿತೊಡಗಿದ್ದಲ್ಲಿಒಬ್ಬರು ಮಾತ್ರ ಪರಿಹಾರಧನವನ್ನು ಪಡೆಯಲುಅರ್ಹರಾಗಿರುತ್ತಾರೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಸಲ್ಲಿಸುವಕೊನೆಯ ದಿನವನ್ನುಜುಲೈ10 ರವರೆಗೆವಿಸ್ತರಿಸಲಾಗಿದೆಎಂದುಕಾರ್ಮಿಕಅಧಿಕಾರಿ, ದ.ಕ ಉಪವಿಭಾಗ-1, ಮಂಗಳೂರು, ಭಾರತ್ಬೀಡಿಎದುರು, ಬಂಟ್ಸ್ಹಾಸ್ಟೇಲ್, ಮಂಗಳೂರು-575003 ಕಚೇರಿ ಪ್ರಕಟಣೆ ತಿಳಿಸಿದೆ.
ಬೀಳ್ಕೊಡುಗೆ ಸಮಾರಂಭ
ವೆನ್ಲಾಕ್ಜಿಲ್ಲಾಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಜೂನ್ 30 ರಂದು ಸೇವಾ ನಿವೃತ್ತಿಯನ್ನು ಹೊಂದಿರುವ ಸೀನಿಯರ್ ನಸಿರ್ಂಗ್ ಆಫೀಸರ್ರೀಟಾ ಸಿಸ್ಟರ್ ಮತ್ತು ‘ಡಿ’ಗ್ರೂಪ್ ಸಿಬ್ಬಂದಿಗಳಾದ ದೇವಪ್ಪ , ಪುರುμÉೂೀತ್ತಮ, ಮಂಜುನಾಥ್ ಶೆಟ್ಟಿ ಸರೋಜಾಇವರಿಗೂ ವೆನ್ಲಾಕ್ಆಸ್ಪತ್ರೆಯ ‘ಡಿ ‘ ಗ್ರೂಪ್ ಸಿಬ್ಬಂದಿಗಳಿಂದ ಬೀಳ್ಕೊಡುವ ಸಮಾರಂಭವನ್ನು ಮಾಡಲಾಯಿತು.
ಹಿರಿಯ ವಾಹನ ಚಾಲಕ ಹೆಚ್. ಮೋಹನ ಬೀಳ್ಕೊಡುಗೆ
ತೋಟಗಾರಿಕೆಇಲಾಖೆಯಲ್ಲಿ ಹಿರಿಯ ವಾಹನ ಚಾಲಕರಾಗಿ ಸುಮಾರು 36 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದಹೆಚ್. ಮೋಹನ ಇವರಿಗೆತೋಟಗಾರಿಕೆ ಉಪ ನಿರ್ದೇಶಕ ಹೆಚ್ಆರ್ ನಾಯ್ಕ್ಇವರಅಧ್ಯಕ್ಷತೆಯಲ್ಲಿಕಚೇರಿಅಧಿಕಾರಿ ಮತ್ತು ಸಿಬ್ಬಂದಿವರ್ಗದವರ ಸಮ್ಮಖದಲ್ಲಿಕಚೇರಿ ಸಭಾಂಗಣದಲ್ಲಿ ಸೇವಾ ನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನುನಡೆಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.